December 5, 2024

Hampi times

Kannada News Portal from Vijayanagara

ವಿಶ್ವ ಹಿರಿಯ ನಾಗರಿಕರ ದಿನಾಚರಣೆ

 

https://youtu.be/NHc6OMSu0K4?si=SI_K4goOPEgwo6h2

ವೈದ್ಯರು ನೀಡುವ ಸಲಹೆ, ಚಿಕಿತ್ಸೆಯನ್ನು ಸಕಾಲದಲ್ಲಿ ಬಳಸಿಕೊಳ್ಳಲಿ: ಡಿಹೆಚ್‌ಒ ಡಾ. ವೈ.ರಮೇಶ್ ಬಾಬು

ಹಂಪಿ ಟೈಮ್ಸ ಬಳ್ಳಾರಿ:
ವೈದ್ಯರು ನೀಡುವ ಸಲಹೆ ಹಾಗೂ ಚಿಕಿತ್ಸೆಯನ್ನು ಸಕಾಲದಲ್ಲಿ ಬಳಸಿಕೊಂಡು ಹಿರಿಯ ನಾಗರಿಕರು ದೀರ್ಘಾಯುಷಿಗಳಾಗಿ ಜೀವನ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್ ಬಾಬು ಅವರು ತಿಳಿಸಿದರು.
ಮನುಷ್ಯನ ಜೀವನದಲ್ಲಿ ಬಾಲ್ಯ, ಹದಿಹರೆಯ, ವೃದ್ಧಾಪ್ಯ ಸಹಜ ಘಟ್ಟಗಳಾಗಿರುತ್ತವೆ. ಅದರಲ್ಲೂ ವೃದ್ಧಾಪ್ಯ ಹಂತದಲ್ಲಿ ವಯೋ ಸಹಜ ಆರೋಗ್ಯ ಸಮಸ್ಯೆಗಳು ಪ್ರತಿಯೊಬ್ಬರಿಗೂ ಕಂಡುಬರುವುದು ಸಹಜವಾಗಿದ್ದು, ಈ ಹಂತದಲ್ಲಿ ವೈದ್ಯರ ಸಲಹೆ ಮೇರೆಗೆ ಸೂಕ್ತ ಔಷದೋಪಚಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳುವ ಮೂಲಕ ಆರೋಗ್ಯವಂತ ಜೀವನ ನಡೆಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಘಟಕ ಹಾಗೂ ಹಿರಿಯ ನಾಗರಿಕರ ಹಗಲು ಯೋಗಾ ಕ್ಷೇಮಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿನಗರದ ಸಿದ್ದಾರ್ಥ ಕಾಲೋನಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರದಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಿರಿಯ ನಾಗರಿಕರ ತಪಾಸಣೆಯನ್ನು ಆದ್ಯತೆ ಮೇರೆಗೆ ಕೈಗೊಳ್ಳಲಾಗುತ್ತದೆ. ಪ್ರತಿಯೊಬ್ಬರೂ ಇದರ ಸದುಪಯೋಪ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪುರುಷ ಮತ್ತು ಮಹಿಳೆಯರಿಗೆ ತಲಾ 5 ಹಾಸಿಗೆಗಳಂತೆ ಒಟ್ಟು 10 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಸಿದ್ದಮಾಡಲಾಗಿದೆ.  ಪ್ರತಿ ಮಂಗಳವಾರದಂದು ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ರೋಗಗಳ ಆಪ್ತಸಮಾಲೋಚಕರು ಹಿರಿಯ ನಾಗರಿಕರ ವಯೋಮಾನ, ಕಾಯಿಲೆಗಳ ಸ್ವರೂಪದ ಆಧಾರದ ಮೇಲೆ ಗುಂಪು ಮಟ್ಟದಲ್ಲಿ ಆಪ್ತ ಸಮಾಲೋಚನೆಯನ್ನು ಕೈಗೊಂಡು ಆರೋಗ್ಯದ ಕಾಳಜಿವಹಿಸಲು ತಿಳಿಸುತ್ತಾರೆ ಎಂದರು.
ಶಿಬಿರದಲ್ಲಿ ಒಟ್ಟು 83 ಜನರ ಆರೋಗ್ಯ ತಪಾಸಣೆ ಕೈಗೊಂಡಿದ್ದು, 23 ಜನರಿಗೆ ಇಸಿಜಿ ಮಾಡಲಾಯಿತು. 8 ಜನ ರಕ್ತದೊತ್ತಡ ಇರುವವರು ಪತ್ತೆಯಾಗಿದ್ದು, ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ, ಜಿಲ್ಲಾ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಮಲ್ಲಿಕಾರ್ಜುನ, ಡಾ.ಅನಿಲ್ ರೆಡ್ಡಿ, ಡಾ.ಪ್ರಕಾಶ್, ಡಾ.ಜ್ಞಾನ ಅಭಿಲಾಷ್, ಡಾ.ಶಾರದ, ಡಾ.ಗಿರೀಶ್, ಡಾ.ವಿಶಾಲಾಕ್ಷಿ, ಡಾ.ಬಸವರಾಜ್ ಸಾಲಿಮಠ, ಹಿರಿಯ ನಾಗರಿಕರ ಸಂಸ್ಥೆಯ ಅಧ್ಯಕ್ಷ ಬಸವರಾಜಪ್ಪ, ಹಿರಿಯನಾಗರಿಕರಾದ ಸಿ.ಎಮ್ ಗಂಗಾಧರಯ್ಯ, ಪಂಪನಗೌಡ, ಎನ್‌ಸಿಡಿ ಕನ್ಸಲ್ಟೆಂಟ್ ಜಬೀನಾ ತಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಫಾರ್ಮಸಿ ಅಧಿಕಾರಿ ಬೈಲಪ್ಪ, ಸಿಬ್ಬಂದಿಯವರಾದ ಸಿದ್ದರಾಮಪ್ಪ, ಆಶಾಕಾರ್ಯಕರ್ತೆಯರು, ಹಿರಿಯ ನಾಗರಿಕರು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!