February 10, 2025

Hampi times

Kannada News Portal from Vijayanagara

ಮಂಗಳೂರಿನಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್‌ ಕೊಪ್ಪಳ:
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕುಕನೂರು ತಾಲೂಕ ಪಂಚಾಯತ ಹಾಗೂ ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ. “ರಾಷ್ಟ್ರೀಯ ಪೋಷಣ್ ಮಾಸಾಚರಣೆ” ಕಾರ್ಯಕ್ರಮ ಮಂಗಳೂರಿನ ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ತಿಪ್ಪಣ್ಣ ಶಿರಸಂಗಿ ಅವರು ವಹಿಸಿದ್ದರು. ಪೋಷಣೆ ಹಾಗೂ ರಕ್ತಹೀನತೆ ಕುರಿತಂತೆ ಮಾತನಾಡಿ, ದೇವರ ರೂಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಇರುತ್ತಾರೆ. ಅವರು ಸಿರಿಧಾನ್ಯದ ಮಹತ್ವವನ್ನು ಅರಿತಿರಬೇಕು. ಗರ್ಭಿಣಿಯರಲ್ಲಿ ರಕ್ತಹೀನತೆ ಆಗದಂತೆ ಉಪದೇಶಿಸಬೇಕು. ಸಮತೋಲನ ಆಹಾರದ ಅವಶ್ಯಕತೆ ಅರಿತು ಅಪೌಷ್ಟಿಕತೆ ರಕ್ತಹೀನತೆ ಬಗ್ಗೆ ಆಶಾ ಕಾರ್ಯಕರ್ತೆಯರ ಜೊತೆಗೂಡಿ ಮಹಿಳೆಯರಿಗೆ ತಿಳುವಳಿಕೆ ಮೂಡಿಸಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಾಥಮಿಕ ಆರೋಗ್ಯ ವೈಧ್ಯಾದಿಕಾಗಳಾದ ಡಾ ಸಿ.ಎಂ.ಹಿರೇಮಠ ಅವರು, ಗರ್ಭಾವಸ್ಥೆಯಲ್ಲಿನ ತೊಂದರೆಗಳು ಸೆವಿಸಬೇಕಾದ ಪೋಷಕಾಂಶಗಳು, ಆಹಾರ ಪದಾರ್ಥಗಳು ಅವುಗಳ ಕೊರತೆಯಿಂದ ಆಗುವ ಸಮಸ್ಯೆ ಹಾಗೂ ಗರ್ಭೀಣಿ ಮಹಿಳೆಯರು ಮತ್ತು ಬಾಣಂತಿಯರ ಪೋಷಣೆಯ ಬಗ್ಗೆ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಸಿಂಧು ಯಲಿಗಾರ ಅವರು ಮಾತನಾಡಿ, ಪೋಷಣ ಅಭಿಯಾನ ಯೋಜನೆಯು 0 ರಿಂದ 6 ವರ್ಷದವರೆಗಿನ ಮಕ್ಕಳು, ಕಿಶೋರಿಯರು, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಠಿಕತಾ ಮಟ್ಟವನ್ನು ಸುಧಾರಿಸುವುದಾಗಿದೆ ಹಾಗೂ ಕಿಶೋರಿ, ಮಹಿಳೆಯರಲ್ಲಿ ಉಂಟಾಗುವ ರಕ್ತಹೀನತೆಯನ್ನು ಕಡಿಮೆಗೊಳಿಸುವುದಾಗಿದೆ. ಅಲ್ಲದೇ ಕಡಿಮೆ ತೂಕದ ಮಕ್ಕಳ ಜನನವನ್ನು ಕಡಿಮೆಗೊಳಿಸುವುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನೀರೂಪಣಾಧಿಕಾರಿಗಳಾದ ಗಂಗಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ನಿಲಂ ಚಳಗೇರಿ, ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ್ ಹಾಗೂ ಗ್ರಾಮ ಪಂಚಾಯಿತ ಅಧ್ಯಕ್ಷರು ಹಾಗೂ ಸದಸ್ಯರು, ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿಯರು, ಪೋಷಣ್ ಅಭಿಯಾನದ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗರ್ಭಿಣಿಯರು, ಮುದ್ದುಮಕ್ಕಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!