November 7, 2024

Hampi times

Kannada News Portal from Vijayanagara

ಬಿಡಿಸಿಸಿ ಬ್ಯಾಂಕ್‌ಗೆ ಕೆ.ತಿಪ್ಪೇಸ್ವಾಮಿ ಅವಿರೋಧ ಆಯ್ಕೆ

 

https://youtu.be/NHc6OMSu0K4?si=SI_K4goOPEgwo6h2

 

 

ಹಂಪಿ ಟೈಮ್ಸ್ ಹೊಸಪೇಟೆ:

ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಕೂಡ್ಲಿಗಿ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕೆ.ತಿಪ್ಪೇಸ್ವಾಮಿ ಒಬ್ಬರಿಂದ ನಾಮ ಪತ್ರ ಸಲ್ಲಿಕೆಯಾಗಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಗಳಿಂದ ಫಲಿತಾಂಶ ಘೋಷಣೆಯಾಗಬೇಕಿದೆ.

ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾದ ಶನಿವಾರ ಆಕಾಂಕ್ಷಿ ಅಭ್ಯರ್ಥಿಗಳಾಗಿ ಎಲ್.ಎಸ್.ಆನಂದ ಹೊಸಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕರ ಸಂಘಗಳ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರೆ, ವಿ.ಆರ್.ಸಂದೀಪ್ ಸಿಂಗ್ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ ಚುನಾವಣಾಧಿಕಾರಿ ವಿಶ್ವಜೀತ್ ಮೆಹ್ತಾಗೆ ನಾಮಪತ್ರ ಸಲ್ಲಿಸಿದರು. ಎಲ್.ಎಸ್.ಆನಂದ ಹಂಪಿ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಡಿ, ಅಮರಾವತಿ ಪ್ರಾಥಮಿಕ ಕೃಷಿ ಸಹಕಾರ ಪತ್ತಿನ ಸಂಘ.ನಿಯಮಿತವತಿಯಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಎರಡನೆ ಬಾರಿಗೆ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಮೊದಲ ಐದು ವರ್ಷದ ಅವಧಿಯಲ್ಲಿ ಎಲ್ಲರ ಸಹಕಾರ ಹಾಗೂ ಬೆಂಬಲದಿಂದಾಗಿ ತಾಲೂಕಿನ ಪ್ರಾ.ಕೃ.ಸ.ಪ.ಸಂಘಗಳ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸಿದ್ದೇನೆ. ಸಹಕಾರಿ ಕ್ಷೇತ್ರ ಬಲಗೊಳಿಸುವುದರ ಜೊತೆಗೆ ರೈತರ ಏಳ್ಗೆಗೆಗಾಗಿ ಹಲವು ಅಭಿವೃದ್ಧಿಪರ ಚಿಂತನೆಗಳನ್ನಿಟ್ಟುಕೊಂಡು ಎರಡನೆ ಅವಧಿಗೆ ಸ್ಪರ್ಧಿಸುತ್ತಿದ್ದೇನೆ. ಎಲ್ಲರು ಮತ್ತೊಮ್ಮೆ ಆಶೀರ್ವದಿಸಿ ಸೇವೆ ಮಾಡಲು ಅವಕಾಶ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಚುನಾವಣಾ ಪ್ರಕ್ರಿಯೆ
ಅ.೮ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಂತರ ಕ್ರಮಬದ್ಧ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದಾರೆ. ಅ.೯ ರಂದು ಮಧ್ಯಾಹ್ನ ೩ ಗಂಟೆ ವರೆಗೆ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆ ದಿನ. ನಂತರ ರಿಟರ್ನಿಂಗ್ ಅಧಿಕಾರಿಗಳಿಂದ ಸ್ಪರ್ಧೆಯಲ್ಲಿರುವ ಕ್ರಮಬದ್ಧ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದಾರೆ. ಅ.೯ರಂದು ಮಧ್ಯಾಹ್ನ ೩ ಗಂಟೆ ನಂತರ ಚಿಹ್ನೆಗಳ ಹಂಚಿಕೆಯಾಗಲಿದೆ. ಅ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ಚಿಹ್ನೆಯ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಅ.೧೫ ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಮತದಾನದ ನಡೆಯಲಿದೆ ಎಂದು ಚುನಾವಣಾಧಿಕಾರಿ ವಿಶ್ವಜೀತ್ ಮೆಹ್ತಾ ತಿಳಿಸಿದ್ದಾರೆ.

ಯಾವ ಕ್ಷೇತ್ರದಿಂದ ಎಷ್ಟು ನಾಮಪತ್ರ
ಹೊಸಪೇಟೆ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ೩ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿವೆ., ಕಂಪ್ಲಿ ಪ್ರಾ.ಕೃ.ಪ.ಸ.ಸಂಘಗಳ ಕ್ಷೇತ್ರದಿಂದ ೪ , ಅಭ್ಯರ್ಥಿಗಳು, ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ೨, ಹಡಗಲಿ ಕ್ಷೇತ್ರದಿಂದ ೩, ಕೊಟ್ಟೂರು ಕ್ಷೇತ್ರದಿಂದ-೨, ಹರಪನಹಳ್ಳಿ ಕ್ಷೇತ್ರದಿಂದ-೩, ಬಳ್ಳಾರಿ ಕ್ಷೇತ್ರದಿಂದ -೩, ಕುರುಗೋಡು ಕ್ಷೇತ್ರದಿಂದ-೨, ಸಿರುಗುಪ್ಪ ಕ್ಷೇತ್ರದಿಂದ-೨, ಸಂಡೂರು ಕ್ಷೇತ್ರದಿಂದ-೨ ಅಭ್ಯರ್ಥಿಗಳು ಸೇರಿ ೧೧ ಕ್ಷೇತ್ರಗಳಿಗೆ ಒಟ್ಟು ೨೭ ಅಭ್ಯರ್ಥಿಳಿಂದ ೫೧ ನಾಮ ಪತ್ರ ಸಲ್ಲಿಕೆಯಾಗಿವೆ. ಇನ್ನುಳಿದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರದಿಂದ -೨, ಪತ್ತಿನ ಮತ್ತು ಅರ್ಬನ್ ಬ್ಯಾಂಕ್‌ಗಲ ಕ್ಷೇತ್ರದಿಂದ-೪ ಮತ್ತು ಇತರೆ ಸಹಕಾರ ಸಂಘಗಳ ಕ್ಷೇತ್ರದಿಂದ- ೬ ಅಭ್ಯರ್ಥಿಗಳು ಸೇರಿ ೧೪ ನಿರ್ದೇಶಕರ ಸ್ಥಾನಗಳಿಗೆ ಒಟ್ಟು ಅಭ್ಯರ್ಥಿಗಳಿಂದ ೭೧ ನಾಮ ಪತ್ರ ಸಲ್ಲಿಕೆಯಾಗಿವೆ.

ಬಿ.ಡಿ.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ೩೯ ಅಭ್ಯರ್ಥಿಗಳಿಂದ ೭೧ ನಾಮಪತ್ರ ಸಲ್ಲಿಕೆಯಾಗಿವೆ. ಕೂಡ್ಲಿಗಿ ಕ್ಷೇತ್ರದಿಂದ ಕೇವಲ ಒಬ್ಬರು ನಾಮಪತ್ರ ಸಲ್ಲಿsಸಿದ್ದಾರೆ. ನಾಮಪತ್ರ ಹಿಂಪಡೆದ ನಂತರ ಅವಿರೋಧ ಕ್ಷೇತ್ರ ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅವಿರೋಧ ಆಯ್ಕೆ ಫಲಿತಾಂಶವನ್ನು ಅ.೧೫ರಂದು ಚುನಾವಣೆ ಫಲಿತಾಂಶದ ಜೊತೆ ಘೋಷಣೆ ಮಾಡಲಾಗುವುದು.
| ವಿಶ್ವಜೀತ್ ಮೆಹ್ತಾ.
ಚುನಾವಣಾಧಿಕಾರಿ, ಬಿಡಿಸಿಸಿ ಬ್ಯಾಂಕ್,ಹೊಸಪೇಟೆ.

 

 

ಜಾಹೀರಾತು
error: Content is protected !!