December 5, 2024

Hampi times

Kannada News Portal from Vijayanagara

ರಸ್ತೆಗೆ ಕಸ ಸುರಿಯದೆ ವಾಹನಕ್ಕೆ ನೀಡಿ: ಗ್ರಾಮ ಪಂಚಾಯತಿ ಅಧ್ಯಕ್ಷ ದುರುಗಪ್ಪ

 

https://youtu.be/NHc6OMSu0K4?si=SI_K4goOPEgwo6h2

ಕಸ ರಸ್ತೆಗೆಸೆದರೆ ಅನಾರೋಗ್ಯ ಬೆನ್ನುಬಿಡದ ಬೇತಾಳವಿದ್ದಂತೆ

ಹಂಪಿ ಟೈಮ್ಸ್‌ ಹೊಸಪೇಟೆ:

ಸ್ವಚ್ಛತೆ ಇದ್ದಲ್ಲಿ ಆರೋಗ್ಯ, ಆರೋಗ್ಯ ಇದ್ದಲ್ಲಿ ಹಣ ಉಳಿತಾಯ ಎಂಬುದನ್ನು ಪ್ರತಿಯೊಬ್ಬರು ಅರಿತು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ರಸ್ತೆಗೆ ಕಸ ಸುರಿಯುವವರನ್ನು ಕಂಡು ಸುಮ್ಮನಿರದೆ ಅದರಿಂದಾಗುವ ದುಷ್ಪರಿಣಾಮದ ಬಗ್ಗೆ ತಿಳಿ ಹೇಳುವ ಕಾರ್ಯ ಎಲ್ಲರದ್ದಾಗಬೇಕು ಎಂದು ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷ ದುರುಗಪ್ಪ ಹೇಳಿದರು.

ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಸ್ವಚ್ಛತಾ ಹಿ ಸೇವಾ ಆಂದೋಲನದ ಏಕ್ ತಾರಿಕ್ ಏಕ ಘಂಟಾ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾನುವಾರ ನಗರದ ಮುಖ್ಯ ರಸ್ತೆ ಅಕ್ಕಪಕ್ಕದಲ್ಲಿ ಶುಚಿಗೊಳಿಸಿ ಮಾತನಾಡಿದರು. ಸರ್ಕಾರ ತ್ಯಾಜ್ಯವಿಲೇವಾರಿಗೆಂದು ಈಗಾಗಲೆ ವಾಹನಗಳನ್ನು ನೀಡಿದೆ. ಮನೆ ಬಾಗಿಲಿಗೆ ಬರುವ ವಾಹನಗಳಿಗೆ ಕಸ ಹಾಕಬೇಕೆಂದು ನಿತ್ಯವೂ ವಾಹನದ ಮೂಲಕ ಸಾರಲಾಗುತ್ತಿದೆ. ಆದರೂ ಜನರು ಕಸವನ್ನು ರಸ್ತೆಗೆ ಎಸೆಯುವುದು ನಿಲ್ಲಿಸುತ್ತಿಲ್ಲ. ತಮ್ಮ ಮನೆಯ ಬಾಗಿಲಲ್ಲೆ ಕಸ ಮತ್ತೊಬ್ಬರು ತಂದು ಸುರಿದಾಗ ವೇದನೆಗಳು,  ಮತ್ತೊಬ್ಬರ ಮನೆ ಮುಂದೆ ಹೋಗಿ ಸುರಿದಾಗ ಅವರಿಗೂ ಹಾಗೆ ಅನಿಸುತ್ತದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಯಮಾಡಿ ಕಸವನ್ನು ಸುರಿದು ಪರಿಸರವನ್ನು ಕಲುಷಿತಗೊಳಿ ಅನಾರೋಗ್ಯಕ್ಕೀಡಾಬೇಡಿ.  ಗ್ರಾಪಂ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನಾದರೂ ನಮ್ಮ ಗ್ರಾಮ ನಮ್ಮ ಹೆಮ್ಮೆ ಎಂದು ಭಾವಿಸಿ ಎಂದರು.

ನಾಗೇನಹಳ್ಳಿ ಗ್ರಾಮದ ಪ್ರಮುಖ ಬೀದಿಗಳನ್ನು ಅಧಿಕಾರಿಗಳು, ಸಾರ್ವಜನಿಕರು ಹಾಗೂ ನರೇಗಾ ಕೂಲಿ ಕಾರ್ಮಿಕರಿಂದ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಸಾರ್ವಜನಿಕ ಸ್ಥಳಗಳಾದ ರಸ್ತೆ , ಸ್ಮಶಾನ ದಾರಿಗಳನ್ನು ಒತ್ತುವರಿ ಮಾಡಿರುವ ಜನರಿಗೆ ತಕ್ಷಣ ತೆರವುಗೊಳಿಸಲು ಸೂಚಿಸಲಾಯಿತು, ಅಂಗಡಿಗಳಲ್ಲಿ ಅನಧಿಕೃತವಾಗಿ ತಂಬಾಕು ಸಿಗರೇಟ್ ಮಾರುವುದನ್ನು ನಿಷೇಧಿಸಿರುವುದರ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿದರು.  ಅಂಗಡಿಗಳ ಮುಂದೆ ಕಸ ವಿಲೇವಾರಿಗೆ ಡಬ್ಬಿಗಳನ್ನು ಕಡ್ಡಾಯವಾಗಿ ನಿರ್ವಹಿಸಿ ಗ್ರಾಮ ಪಂಚಾಯಿತಿ ಕಸದ ವಾಹನಗಳಿಗೆ ನೀಡಲು ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಭೀಮಪ್ಪ ಲಾಲಿ, ಯೋಜನಾ ನಿರ್ದೇಶಕ ಅಶೋಕ್ ಜಿ ತೋಟದ್ ಹಾಗೂ  ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಂ ಉಮೇಶ್, ಗ್ರಾಪಂ ಉಪಾಧ್ಯಕ್ಷರು ಸರ್ವ ಸದಸ್ಯರು, ನಿವೃತ್ತ ಉಪನ್ಯಾಸಕ ರೇವಣಸಿದ್ದಪ್ಪ, ಅಂಗನವಾಡಿ ಕಾರ್ಯಕರ್ತೆಯರು ಒಕ್ಕೂಟದ ಸದಸ್ಯರು ಪಂಚಾಯತ್ ಅಭಿವೃದ್ಧಿ ಅಧಿಕಾರಿ  ರಾಜೇಶ್ವರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ  ಅನೇಕರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!