December 14, 2024

Hampi times

Kannada News Portal from Vijayanagara

ಸೆ.30ರಂದು ಹೊಸಪೇಟೆಯಲ್ಲಿ ತಾಂಡೂರು ಆಸ್ಪತ್ರೆ ಉದ್ಘಾಟನೆ : ಡಾ.ಅಮರ್‌ಜೀತ್ ತಾಂಡೂರು

 

https://youtu.be/NHc6OMSu0K4?si=SI_K4goOPEgwo6h2


 24/7 ಆರೋಗ್ಯ ಸೇವೆಗೆ  ತಾಂಡೂರು ಆಸ್ಪತ್ರೆ  ಸಿದ್ಧ

ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಪಟೇಲ್‌ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತಾಂಡೂರ ಆಸ್ಪತ್ರೆ ಸೆ.30 ರಂದು  ಬೆಳಿಗ್ಗೆ 10.30ಕ್ಕೆ  ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ. ಅಮರ್‌ಜೀತ್ ತಾಂಡೂರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಅಜ್ಜ ಡಾ.ಅಮರೇಶ ತಾಂಡೂರ ಆಶಯದಂತೆ ಹುಟ್ಟೂರಿನಲ್ಲೇ ಸೇವಾ ಮನೋಭಾವನೆಯೊಂದಿಗೆ ಸ್ಥಳೀಯ ಜನರಿಗೆ ಆರೋಗ್ಯ ಸೇವೆ ಸಲ್ಲಿಸಲು ತೀರ್ಮಾನಿಸಿ, ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಚಿಕಿತ್ಸಾ ಉಪಕರಣಗಳೊಂದಿಗೆ ನೂತನ ಆಸ್ಪತ್ರೆ ನಿರ್ಮಿಸಲಾಗಿದೆ. ಉನ್ನತ ಅತ್ಯಾಧುನಿಕ ತಂತ್ರಜ್ಞಾನದ ಆಪರೇಷನ್ ಥಿಯೇಟರ್ ನಿರ್ಮಿಸಲಾಗಿದೆ. ಜಿಲ್ಲೆ ಹಾಗೂ ಸುತ್ತಮುತ್ತಲಿನ ಜನರಿಗೆ ಸೇವೆ ನೀಡಲೆಂದು ದಿನದ 24 ಗಂಟೆಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಒಂದೇ ಸೂರಿನಡಿ ಸಾಮಾನ್ಯ ಹಾಗೂ ಲ್ಯಾಪ್ರೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ, ಮಾಡುಲರ್ ಓಟಿ, ಐಸಿಯು, ಎಂಡೋಸ್ಕೋಪಿ, ಅಡ್ವಾನ್ಸ್ ಹರ್ನಿಯಾ ಸರ್ಜರಿಸ್, ಲೇಸರ್ ಸರ್ಜರೀಸ್, ಉಬ್ಬು ನರಗಳಿಗೆ ಚಿಕಿತ್ಸೆ, ಮೂಲವ್ಯಾಧಿಗೆ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದರು.

ಕೊಪ್ಪಳ ಮಹಾಸಂಸ್ಥಾನ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಶ್ವಾಮಿಗಳು, ಶಿರಹಟ್ಟಿ-ಬಾಲೇ ಹೊಸೂರ ಭಾವೈಕ್ಯತಾ ಸಂಸ್ಥಾನ ಮಹಾಪೀಠದ ಜಗದ್ಗುರು ಪಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು, ಹೊಸಪೇಟೆ ಕೊಟ್ಟೂರುಸ್ವಾಮಿ ಸಂಸ್ಥಾನವಠದ ಜಗದ್ಗುರು ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸುವರು. ಚಿಕ್ಕೇನಕೊಪ್ಪ ಸುಕ್ಷೇತ್ರ ಬಳಗಾನೂರು ಶ್ರೀ ಶಿವಶಾಂತವೀರ ಶರಣರು ಉಪಸ್ಥಿತರಿರುವರು. ಶಾಸಕ ಎಚ್.ಆರ್.ಗವಿಯಪ್ಪ ಅಧ್ಯಕ್ಷತೆವಹಿಸುವರು. ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸದ ವೈ.ದೇವೇಂದ್ರಪ್ಪ, ಶಾಸಕ ಬಸವರಾಜ ರಾಯರೆಡ್ಡಿ, ಮಾಜಿ ಸಚಿವ ಆನಂದಸಿಂಗ್, ಮುಂಬಯಿ ಗ್ರ್ಯಾಂಟ್ ಸರ್ಕಾರಿ ಮೆಡಿಕಲ್ ಕಾಲೇಜ್ ಮತ್ತು ಶ್ರೀ ಜೆ.ಜೆ. ಗ್ರೂಪ್ ಆಸ್ಪ್ರೆಯ ಪ್ರಾಧ್ಯಾಪಕ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಅಜಯ್ ಭಂಡಾರವಾರ ಆಗಮಿಸಲಿದ್ದಾರೆ ಎಂದು ತಿಳಿಸಿದರು.


ಡಾ.ಸ್ನೇಹ ಎ ತಾಂಡೂರು ಮಾತನಾಡಿ, ಮಹಿಳೆಯರು ಚರ್ಮ ಕಾಯಿಲೆಗಳ ಚಿಕಿತ್ಸೆಗೆಂದು ದೂರದೂರಿಗೆ ತೆರಳುತ್ತಿದ್ದಾರೆ. ನೂತನ ಆಸ್ಪತ್ರೆಯಲ್ಲಿ ಚರ್ಮ, ಕೂದಲು, ಉಗುರಿನ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದರು.

 

 

 

ಜಾಹೀರಾತು
error: Content is protected !!