https://youtu.be/NHc6OMSu0K4?si=SI_K4goOPEgwo6h2
ಕರ್ನಾಟಕದ ಒಂದು ಸ್ವಚ್ಛ ಚಿತ್ರ
ಸ್ವಚ್ಛ ಭಾರತ ಮಿಷನ್ನ ಏಕೈಕ ಗುರಿಯು ಕಸ ಮುಕ್ತ ನಗರಗಳನ್ನು ರಚಿಸುವ ಆಶಯವನ್ನು ಸಾಕಾರಗೊಳಿಸುವ ಮೂಲಕ ಸ್ವಚ್ಛ ಭಾರತವನ್ನು ಮಾಡುವುದು. ಕಸ, ಅದರ ಸುರಕ್ಷಿತ ವಿಲೇವಾರಿ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸುವುದು ಇತ್ಯಾದಿಗಳನ್ನು ನಿಭಾಯಿಸಲು ನವೀನ ಮಾರ್ಗಗಳನ್ನು ಕಂಡುಹಿಡಿಯುವುದು ಅವಶ್ಯಕವಾದರೂ, ನಾವು ಆ ನಿಟ್ಟಿನಲ್ಲಿ ಸಾಗುವಾಗ ಪರಿಸರ ಮತ್ತು ನೈಸರ್ಗಿಕ ಪರಂಪರೆಯೊಂದಿಗೆ ಸರಿಯಾದ ಸಮತೋಲನ ಮತ್ತು ಸಾಮರಸ್ಯವನ್ನು ಸಾಧಿಸುವ ಅಗತ್ಯವಿದೆ. ಸ್ವಚ್ಚತಾ ಪಯಣದಲ್ಲಿ ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯು ನಿಖರವಾಗಿ ಅದಕ್ಕಾಗಿ ಶ್ರಮಿಸುತ್ತಿದೆ.
ಉತ್ತರ ಕನ್ನಡವು, ಕರ್ನಾಟಕದ ಒಂದು ಸುಂದರವಾದ ಜಿಲ್ಲೆಯಾಗಿದ್ದು, ಅಗಾಧವಾದ ಪ್ರವಾಸಿ ಮತ್ತು ಪರಿಸರ ಪ್ರಾಮುಖ್ಯತೆಯ ಪ್ರದೇಶವಾಗಿದೆ. ಈ ಮನೋಜ್ಞವಾದ ಜಿಲ್ಲೆಯು ವೈವಿಧ್ಯಮಯ ಭೂಪ್ರದೇಶವನ್ನು ಹೊಂದಿದೆ, ಅರೇಬಿಯನ್ ಸಮುದ್ರದ ಉದ್ದಕ್ಕೂ ಇರುವ ಸ್ವಚ್ಛ ಕಡಲತೀರಗಳು, ಹಚ್ಚ ಹಸಿರಿನ ಪಶ್ಚಿಮ ಘಟ್ಟಗಳ ಕಾಡುಗಳು ಮತ್ತು ಉದ್ದಗಲಕ್ಕೂ ನದಿಗಳನ್ನು ಒಳಗೊಂಡಿದೆ. ಇದರ ಪರಿಸರ ಪ್ರಾಮುಖ್ಯತೆಯ ಬಗ್ಗೆ ಎರಡು ಮಾತಿಲ್ಲ, ಏಕೆಂದರೆ ಉತ್ತರ ಕನ್ನಡದೊಳಗಿನ ಪಶ್ಚಿಮ ಘಟ್ಟಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದ್ದು, ಶ್ರೀಮಂತ ಜೀವವೈವಿಧ್ಯ ಮತ್ತು ಮಹತ್ತರ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಉತ್ತರ ಕನ್ನಡವು ಪ್ರಕೃತಿಯ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸಾಮರಸ್ಯದ ಸಹಬಾಳ್ವೆಗೆ ಸಾಕ್ಷಿಯಾಗಿದೆ, ಪ್ರವಾಸಿಗರು ಮತ್ತು ಸಂಶೋಧಕರನ್ನು ತನ್ನ ಬೆರಗಾಗಿಸುವ ಭೂದೃಶ್ಯಗಳು ಮತ್ತು ಲವಲವಿಕೆಯ ಸಂಪ್ರದಾಯಗಳೆಡೆಗೆ ಸಮಾನವಾಗಿ ಸೆಳೆಯುತ್ತದೆ.
ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಸ್ವಚ್ಛತಾ ಹಿ ಸೇವಾ ಅಭಿಯಾನ 2023 ರ ಅಡಿಯಲ್ಲಿ, ಪರಿಸರ ತಾಣಗಳು, ಕಡಲ ತೀರಗಳು, ಪರ್ವತಗಳು ಮತ್ತು ಪ್ರವಾಸಿ ಸ್ಥಳಗಳ ಸುತ್ತಲೂ ಸಮಗ್ರ ಸ್ವಚ್ಛತಾ ಅಭಿಯಾನವನ್ನು ಆಯೋಜಿಸುವಲ್ಲಿ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು (ಯುಎಲ್ ಬಿ) ಅಧಿಕಾರಿಗಳ ಪೂರ್ವಭಾವಿ ಪ್ರಯತ್ನಗಳು ಅಪೇಕ್ಷಿತ ಫಲಿತಾಂಶಗಳನ್ನು ನೀಡಿತು. ಸುಮಾರು 1000 ನಾಗರಿಕ ಸ್ವಯಂಸೇವಕರು ಸ್ವಚ್ಛತೆ ಮತ್ತು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಅವರು ಸ್ವಚ್ಛತೆಯ ತಕ್ಷಣದ ಅಗತ್ಯವನ್ನು ತಿಳಿಸುವುದು ಮಾತ್ರವಲ್ಲದೆ ಜಿಲ್ಲೆಯ ಪರಿಸರ ಮತ್ತು ನೈಸರ್ಗಿಕ ಸೌಂದರ್ಯದ ಬಗ್ಗೆ ವಿಶಾಲವಾದ ಜವಾಬ್ದಾರಿಯ ಪ್ರಜ್ಞೆಯನ್ನು ಉತ್ತೇಜಿಸುತ್ತಿದ್ದಾರೆ. ಸ್ಥಳೀಯ ಸಮುದಾಯಗಳು, ನಿವೃತ್ತ ಶಿಕ್ಷಕರು, ವಕೀಲರು ಮತ್ತು ಯುವ ಕೇಂದ್ರ ಮತ್ತು ಎನ್ಸಿಸಿಯಂತಹ ವಿವಿಧ ಹಿನ್ನೆಲೆಯ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವುದು ಉಪಕ್ರಮದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಮುಖ್ಯ ಅಂಶಗಳು. ಈ ಸಾಮೂಹಿಕ ಪ್ರಯತ್ನವು ಶುಚಿತ್ವವು ಯಾವುದೇ ಒಂದು ಗುಂಪಿನ ಏಕೈಕ ಜವಾಬ್ದಾರಿಯಾಗಿರದೆ ಅದು ಎಲ್ಲಾ ಪಾಲುದಾರರ ಹಂಚಿಕೆಯ ಬದ್ಧತೆಯನ್ನು ತೋರಿಸುತ್ತದೆ. ಇದಲ್ಲದೆ, ವಿವಿಧ ವಲಯಗಳ ವ್ಯಕ್ತಿಗಳನ್ನು ಸ್ವಚ್ಛತೆಯ ಚಾಂಪಿಯನ್ಗಳಾಗಿ ಒಟ್ಟುಗೂಡಿಸುವ ಮೂಲಕ, ನಗರ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಜನರಲ್ಲಿ ಹೆಮ್ಮೆ ಮತ್ತು ಮಾಲೀಕತ್ವದ ಭಾವನೆಯನ್ನು ಬೆಳೆಸುತ್ತಿದೆ. ʼಸ್ವಚ್ಛ ಭಾರತ್ ಮಿಷನ್ – ನಗರದʼ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯಾ ನಗರ ಸ್ಥಳೀಯ ಸಂಸ್ಥೆಗಳ ಅವಿರತ ಪ್ರಯತ್ನದಿಂದ ಇದು ಸಾಧ್ಯವಾಯಿತು. ಸ್ವಚ್ಛತೆಗಾಗಿ ಜನ ಆಂದೋಲನವನ್ನು ಮತ್ತಷ್ಟು ಉತ್ತೇಜಿಸಲು, 1 ಅಕ್ಟೋಬರ್ 2023 ರಂದು ಮೆಗಾ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು.
ಆದ್ದರಿಂದ, ಮನ್ ಕಿ ಬಾತ್ನ 105 ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಎಲ್ಲಾ ನಾಗರಿಕರು ಸಾಮೂಹಿಕವಾಗಿ ಸ್ವಚ್ಛತಾಗಾಗಿ 1 ಗಂಟೆಯ ಶ್ರಮದಾನಕ್ಕೆ ಮನವಿ ಮಾಡಿದರು. ಈ ಮೆಗಾ ಸ್ವಚ್ಛತಾ ಅಭಿಯಾನವು ಎಲ್ಲಾ ವರ್ಗಗಳ ನಾಗರಿಕರಿಗೆ ಸಾರ್ವಜನಿಕ ಸ್ಥಳಗಳಲ್ಲಿ ನಿಜವಾದ ಸ್ವಚ್ಛತಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಕರೆ ನೀಡುತ್ತದೆ ಎಂದು ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ ಹೇಳಿದೆ. ಸ್ವಚ್ಛತಾ ಪಾಕ್ಷಿಕ (ಸ್ವಚ್ಛತಾ ಪಖವಾಡ) ಕ್ಕೆ ಸೇರುವವರ ಸಂಖ್ಯೆ ಈಗಾಗಲೇ 9 ಕೋಟಿ ತಲುಪಿದ್ದು ಇನ್ನೂ ಹೆಚ್ಚಾಗುತ್ತಿರುವುದು ಗಮನಾರ್ಹವಾಗಿದೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ