December 5, 2024

Hampi times

Kannada News Portal from Vijayanagara

ನಾನೊಂದು ಒಣ ಮರ

 

https://youtu.be/NHc6OMSu0K4?si=SI_K4goOPEgwo6h2

ನಾನೊಂದು ಒಣ ಮರ  ಬೆಳೆದು ನಿಂತಿರುವೆ ಬಾನೆತ್ತರ… ಹಿಡಿದು ನಿಂತಿಹಳು ಭೂಮಿ
ತಾಯಿಯಂತೆ ನನ್ನ ಬೇರ
ನನ್ನ ಕನಸುಗಳೆಲ್ಲ ನನಸಾಗದೆ ಹಾರಿಹೋಗಿವೆ ನನ್ನಿಂದ ….ಹಕ್ಕಿಗಳಂತೆ ದೂರ
ಕಾರಣ ನಾನೊಂದು ಒಣ ಮರ
ನನಗೆ ಭರವಸೆಯ ಬೆಳಕು ಕಾಣದಾಗಿದೆ
ನನ್ನಿಂದ ಬೀಸಲಾಗದು ಜೀವದ ಉಸಿರು(ಗಾಳಿ)
ನನ್ನ ಕೊಂಬೆಗೆ ಮೂಡದಾಗಿದೆ ಒಂದಿಷ್ಟು ಹಸಿರು
ಕಾರಣ ನಾನೊಂದು ಒಣ ಮರ
ನನ್ನ ರೆಂಬೆಯಲ್ಲಿ ಆಸೆಯೆಂಬ ಹೂಗಳು ಅರಳಲಿಲ್ಲ
ನಾನು ಸುಮಧುರ ಸುವಾಸನೆಯ ಸೂಸಲಿಲ್ಲ
ನನಗಾಗಿ ಹಾಡಲಿಲ್ಲ ದುಂಬಿಗಳು ಝೇಂಕಾರ
ಕಾರಣ ನಾನೊಂದು ಒಣ ಮರ
ನಾನು ಯಾರ ಹಸಿವೂ ನೀಗಿಸಲಿಲ್ಲ
ನನ್ನ ಟೊಂಗೆಯಲ್ಲಿ ಹಣ್ಣುಗಳು ಬೆಳೆಯಲೇ ಇಲ್ಲ
ಪ್ರಾಣಿ ಪಕ್ಷಿಗಳು ನನ್ನನ್ನು ಸವಿಯಲಿಲ್ಲ
ಅವು ನನ್ನ ಬೀಜ ಬಿತ್ತಲಿಲ್ಲ
ಕಾರಣ ನಾನೊಂದು ಒಣ ಮರ
ನಾನೊಂದು ಒಣ ಮರವಾಗಿದ್ದರೂ
ಈ ಹಸಿರ ಸಿರಿಯ ನಡುವೆ ಗಟ್ಟಿಯಾಗಿ ನಿಂತಿರುವೆ
ಈ ಜಗಕೆ ಬದುಕಿನ ನಿತ್ಯ ಸತ್ಯವ ತೋರುತಿರುವೆ
ಈ ಭೂಮಿಯ ಮೇಲೆ ಎಲ್ಲವೂ ನಶ್ವರ
ಇಂದಲ್ಲ ನಾಳೆ ನಾನು ನನ್ನದು ನನ್ನವರೆಂಬವರು
ಬಿಟ್ಟು ಹೋಗುವರು ದೂರ
ಎಲ್ಲವನು ಎಲ್ಲರನ್ನೂ ಕಳೆದುಕೊಂಡು
ಕಳಚಿಕೊಂಡು ಎಲ್ಲರಾ ಎಲ್ಲದರಾ ಚಿಂತೆ ಬಾಳಬೇಕಿದೆ ನನಗಾಗಿ ನನ್ನಂತೆ
ಒಣ ಮರದಂತೆ…
                                                                                    ರೂpa V. ಶಿಕ್ಷಕಿ, ಹೊಸಪೇಟೆ

 

 

ಜಾಹೀರಾತು
error: Content is protected !!