December 5, 2024

Hampi times

Kannada News Portal from Vijayanagara

ಭಗತ್ ಸಿಂಗ್ ಸರ್ಕಲ್ ನಲ್ಲಿ -ಭಗತ್ ಸಿಂಗ್ ಜನ್ಮ ವಾರ್ಷಿಕೋತ್ಸವ AIDYO

 

https://youtu.be/NHc6OMSu0K4?si=SI_K4goOPEgwo6h2

 “ಬಡತನ, ನಿರುದ್ಯೋಗವಿಲ್ಲದ ಸಮಾಜವಾದಿ ವ್ಯವಸ್ಥೆ ಭಗತ್‌ಸಿಂಗ್ ಅವರ ಗುರಿಯಾಗಿತ್ತು”- ಪ್ರಕಾಶ್ ನಾಯ್ಕ್ ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು

ಹೊಸಪೇಟೆ ನಗರದಲ್ಲಿ ಗುರುವಾರ (ದಿನಾಂಕ: ೨೮.೦೯.೨೦೨೩) ಎಪಿಎಮ್‌ಸಿ ಹತ್ತಿರದ ಭಗತ್ ಸಿಂಗ್ ಸರ್ಕಲ್ ನಲ್ಲಿ ಎಐಡಿವೈಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಷೆಸನ್) ಯುವಜನ ಸಂಘಟನೆಯ ವತಿಯಿಂದ ಸ್ವತಂತ್ರ ಸಂಗ್ರಾಮದ ಕ್ರಾಂತಿಕಾರಿ ಹೋರಾಟಗಾರ ಶಹೀದ್ (ಹುತಾತ್ಮ) ಭಗತ್ ಸಿಂಗ್ ಅವರ ೧೧೬ನೇ ಜನ್ಮ ವಾರ್ಷಿಕೋತ್ಸವದಲ್ಲಿ ಪ್ರಕಾಶ್ ನಾಯ್ಕ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಾ “ಕೇವಲ ಬ್ರಿಟಿಷ್ ಸಾಮ್ರಾಜ್ಯಶಾಹಿಗಳನ್ನು ದೇಶದಿಂದ ಹೊರದೂಡುವುದು ಸಮಸ್ಯೆ ಕೊನೆಗಾಣುವುದಿಲ್ಲ. ನಮ್ಮ ದೇಶದಲ್ಲಿಯೇ ಇರುವ ಸಾಂಪ್ರದಾಯಿಕ ಜಮೀನ್ದಾರರು ಮತ್ತು ಶ್ರೀಮಂತ ಬಂಡವಾಶಾಹಿಗಳು ಸ್ವತಂತ್ರ ಭಾರತವನ್ನು ಹಂಚಿಕೊಳ್ಳಲಿದ್ದಾರೆ. ಸಾಮಾನ್ಯಜನರ ಅಪಾರ ತ್ಯಾಗ ಬಲಿದಾನಗಳಿಂದ ಪಡೆದುಕೊಂಡ ಸ್ವತಂತ್ರದ ಫಲವನ್ನು ಶ್ರೀಮಂತ ಬಂಡವಾಳಶಾಹಿಗಳು ಮಾತ್ರ ಅನುಭವಿಸುವಂತಾಗುತ್ತದೆ. ಅದಕ್ಕಾಗಿ ವಿದೇಶದಿಂದ ಬಂದ ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಹಾಗೂ ಸ್ವದೇಶಿ ಬಂಡವಾಳಶಾಹಿಗಳೊಂದಿಗೂ ಮುಂದುವರೆಸಬೇಕು ಎಂದು ಭಗತ್ ಸಿಂಗ್ ಹೇಳುತ್ತಿದ್ದರು.  ಸ್ವತಂತ್ರಪೂರ್ವದಲ್ಲಿದ್ದ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಅಸ್ಪೃಷ್ಯತೆ, ವ್ಯಭಿಚಾರ, ಮಾಧಕ ವಸ್ಯಗಳ ಸೇವನೆ, ಸಂಸ್ಕೃತಿಗಳು ಮುಂದುವರೆಯುತ್ತಿವೆ.  ಬಡತನ, ನಿರುದ್ಯೋಗವಿಲ್ಲದ ಸಮಾಜವಾದಿ ವ್ಯವಸ್ಥೆ ಭಗತ್‌ಸಿಂಗ್ ಅವರ ಗುರಿಯಾಗಿತ್ತು” ಎಂದು ಭಗತ್ ಸಿಂಗ್ ಅವರ ಚಿಂತನೆಗಳನ್ನು ಮಂಡಿಸಿದರು.

ಪಾಲಾಕ್ಷ ಹಡಗಲಿ ಎಐಡಿವೈಓ ಜಿಲ್ಲಾ ಸಮಿತಿ ಸದಸ್ಯರು ಮಾತನಾಡುತ್ತಾ “ಭಗತ್‌ಸಿಂಗ್ ಆರಂಭದಲ್ಲಿ ಸಾಹಸ ಕೃತ್ಯಗಳ ಮೂಲಕ ಹೋರಾಟದಲ್ಲಿ ಭಾರತೀಯರ ಸ್ವಾಭಿಮಾನವನ್ನು ಎತ್ತಿಹಿಡಿದರು. ನಂತರ ಸಾಮೂಹಿಕ ಹೋರಾಟದ ಅಗತ್ಯವನ್ನು ಮನಗೊಂಡರು. ಕಾರಣ ಸ್ವಾತಂತ್ರö್ಯ ಹೋರಾಟದಲ್ಲಿ ಭಾರತೀಯರು ವರ್ಗ ಪ್ರಜ್ಞೆಯೊಂದಿಗೆ ಹೋರಾಟವನ್ನು ಬೆಳೆಸಲು ಸಮಾಜವಾದಿ ಸಿದ್ಧಾಂತದ ಮೇಲೆ ಹೆಚ್‌ಎಸ್‌ಆರ್‌ಎ ಸಂಘಟನೆಯನ್ನು ಮರುರೂಪಿಸಿದರು. ಬಡವರ ರಕ್ತವನ್ನು ಹೀರಿ ಬೆಳೆಯುವ ಶ್ರೀಮಂತರ ಪರವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರಂತರವಾಗಿ ಪತ್ರಿಕಾ ಬರಹಗಳಲ್ಲಿ ಹಾಗೂ ಕೋರ್ಟಿನ ಹೇಳಿಕೆಗಳಲ್ಲಿ ತಮ್ಮ ನಿಲುವನ್ನು ಪ್ರತಿಪಾಧಿಸುತ್ತಿದ್ದರು. ಅವರ ಆಶಯದ ಆಧಾರದ ಮೇಲೆ ಸಮಾಜವಾದಿ ಸಮಾಜದ ನಿರ್ಮಾಣಕ್ಕಾಗಿ ಇಂದಿನ ಯುವಕರು ಸಿದ್ಧರಾಗಬೇಕು” ಎಂದರು.

ಕಾರ್ಯಕ್ರಮದಲ್ಲಿ ಎಐಡಿವೈಓ ಅಭಿಷೇಕ್ ಕಾಳೆ ಸಂಘಟನೆಯ ಜಿಲ್ಲಾ ಸದಸ್ಯರು ಮಾತನಾಡಿ “ಭಾರತಕ್ಕೆ ಬೇಕಾಗಿರುವುದು ಕಾರ್ಮಿಕರ ರಾಜ್ಯ, ಸಮಾಜವಾದಿ ಸಮಾಜವನ್ನು ನಿರ್ಮಾಣ ಮಾಡುವುದರ ಮೂಲಕ ತಾರತಮ್ಯವಿಲ್ಲದ ಸಮಾಜವನ್ನು ನಿರ್ಮಾಣ ಮಾಡುವುದು ಭಗತ್ ಸಿಂಗ್ ಅವರ ಕನಸಾಗಿತ್ತು. ಆದರೆ ಅವರ ಕನಸು ನನಸಾಗಿಸಲು ಎಲ್ಲರೂ ಪಣ ತೊಡಬೇಕು” ಎಂದು ಕರೆ ಇತ್ತರು.

ಪಾಲಾಕ್ಷ ಹಡಗಲಿ ಎಐಡಿವೈಓ ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರು ಭಗತ್ ಸಿಂಗ್ ಭಾವಚಿತ್ರಕ್ಕೆ ಹೂಮಾಲೆ ಹಾಕಿದರು. ಭರತ್ ಚಿತ್ರಕೇರಿ ಇವರು ಭಾವಗೀತೆ ಹಾಡಿದರು. ಎಐಡಿವೈಓ ಸಂಘಟನೆಯ ಜಿಲ್ಲಾ ಸದಸ್ಯರಾದ ಅಜಯ್ ಬೊಮ್ಮಗಟ್ಟ ಅವರು ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ವಿನೋದ್, ಚೇತನ್, ವಾಸು, ವಿರೇಶ್, ಸಮೀರ್, ಕಿರಣ್, ತಿಪ್ಪೇಶ್ ಮುಂತಾದವರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯುಕರು, ಸಾರ್ವಜನಿಕರು, ಆಟೋ ಚಾಕಲರು, ಪುರಸಭೆಯ ಕಾರ್ಮಿಕರು ಉಪಸ್ಥಿತರಿದ್ದರು.

 

 

ಜಾಹೀರಾತು
error: Content is protected !!