November 11, 2024

Hampi times

Kannada News Portal from Vijayanagara

ಒಂದು ದಿನದ  ಸ್ಕೌಟಿಂಗ್ ಮಾಹಿತಿ ಶಿಬಿರ ಯಶಸ್ವಿ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಕೊಪ್ಪಳ:

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯಿಂದ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಸೆಪ್ಟೆಂಬರ್ 26ರಂದು ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯ ಅಧಿಕಾರಿಗಳ ಮತ್ತು ಸಿ.ಆರ್.ಪಿ.ಬಿ.ಆರ್.ಪಿ., ತಾಲೂಕ ದೈಹಿಕ ಶಿಕ್ಷಣಾಧಿಕಾರಿಗಳ ಒಂದು ದಿನದ  ಸ್ಕೌಟಿಂಗ್ ಮಾಹಿತಿ ಶಿಬಿರವು ಯಶಸ್ವಿಯಾಗಿ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ನ ಚಳುವಳಿ ಶಿಬಿರಗಳು ಸೇವಾ ಕಾರ್ಯಗಳು ಶಿಕ್ಷಕರ ತರಬೇತಿಗಳು ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆಯರು ಸ್ಕೌಟ್ ಗೈಡ್ ಚಳುವಳಿಕೆಗೆ ಸಹಕಾರ ನೀಡಬೇಕು. ಇವತ್ತಿನ ತಂತ್ರಜ್ಞಾನ ಮತ್ತು ಶಿಕ್ಷಣದ ಕುರಿತು ಹೆಚ್ಚು ಹೆಚ್ಚು ನಮ್ಮ ಕರ್ನಾಟಕದ ವಿದ್ಯಾರ್ಥಿಗಳು ಪ್ರವೃತ್ತಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರಾದ ಶ್ರೀಶೈಲ್ ಬಿರಾದರ್ ಅವರು ಮಾತನಾಡಿ, ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ ಗೈಡ್ ಘಟಕಗಳು ಪ್ರಾರಂಭಿಸಬೇಕು. ಶಾಖೆಗಳ ನವೀಕರಣ ಕಡ್ಡಾಯಗೊಳಿಸಬೇಕು. ತರಬೇತಿ ಪಡೆದ ಶಿಕ್ಷಕರು ಮುಂದಿನ ತರಬೇತಿಗಳಿಗೆ ಕಡ್ಡಾಯವಾಗಿ ನಿಯೋಜನೆಗೊಳ್ಳಬೇಕು. ನಮ್ಮ ಕೊಪ್ಪಳ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ಚಟುವಟಿಕೆ ಸ್ವಯಂ ಸೇವಾ ಮನೋಭಾವನೆ ಶಿಸ್ತು ಸಂಯಮದ ಜೊತೆಗೆ ಸ್ಕೌಟ್ ಗೈಡ್ ಚಟುವಟಿಕೆ ಸದಾ ಅವಶ್ಯಕ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಯಾಣ ಕರ್ನಾಟಕ ಉಸ್ತುವಾರಿಗಳಾದ ಮಲ್ಲೇಶ್ವರಿ ಜೂಜಾರಿ ಅವರು ಕಾರ್ಯಕ್ರಮ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಡೈಟ್ ಮುನಿರಾಬಾದ್ ಪ್ರಾಂಶುಪಾಲರಾದ ಕೆ.ಡಿ ಬಡಿಗೇರ್, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಮುಖ್ಯ ಆಯುಕ್ತರಾದ ಸಿದ್ದರಾಮ ಸ್ವಾಮಿ, ಜಿಲ್ಲಾ ಸ್ಕೌಟ್ ಆಯುಕ್ತರಾದ ಮಲ್ಲಿಕಾರ್ಜುನ ಚೌಕಿಮಠ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಶಂಕರಯ್ಯ, ಕುಷ್ಟಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸುರೇಂದ್ರ ಕಾಂಬಳೆ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಪ್ರಕಾಶ್ ತಗಡಿನಮನಿ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ್ ಮಾಸಗಟ್ಟಿ ಕಾರ್ಯಕ್ರಮ ನಿರೂಪಿದರು. ಜಿಲ್ಲಾ ಕಾರ್ಯದರ್ಶಿಗಳಾದ ಮಾರುತಿ ಆರೇರ್ ಅವರು ಸ್ವಾಗತಿಸಿದರು.

ಕಾರ್ಯ ಚಟುವಟಿಕೆಗಳು: ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿಗಳಿಗೆ ಸ್ಕೌಟಿಂಗ್ ಮತ್ತು ಗೈಡಿಂಗ್ ಕಾರ್ಯ ಚಟುವಟಿಕೆಗಳು, ಇತಿಹಾಸ ಬೆಳವಣಿಗೆ ಪರೀಕ್ಷಾ ಶಿಬಿರಗಳು, ಶಿಕ್ಷಕರ ತರಬೇತಿಗಳು ಇತ್ಯಾದಿ ವಿಷಯಗಳ ಕುರಿತು ಸ್ಕೌಟ್ಸ್ ಮತ್ತು ಗೈಡ್ಸ್ ಕಲ್ಯಾಣ ಕರ್ನಾಟಕ ಉಸ್ತುವಾರಿಗಳಾದ ಮಲ್ಲೇಶ್ವರಿ ಜೂಜಾರಿ ಹಾಗೂ ಗೈಡ್ ಜಿಲ್ಲಾ ಆಯುಕ್ತರಾದ ಅರುಣ ವಸ್ತçದ್, ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ ಮಾಸಗಟ್ಟಿ ಅವರು ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಚಟುವಟಿಕೆಗಳನ್ನು ಮಾಡಿಸಿದರು.
ಈ ಕಾರ್ಯಗಾರದಲ್ಲಿ ಕೊಪ್ಪಳ ಜಿಲ್ಲೆಯ ಸುಮಾರು 86 ಕ್ಕಿಂತ ಹೆಚ್ಚು ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಹ್ಲಾದ್ ಬಡಿಗೇರ್, ಬಸವರಾಜ್ ಚಿತ್ತಾಪುರ, ಶಶಿಧರ ಪೂರ್ತಿಗೇರಿ, ಹುಸೇನ್ ಸಾಬ್ ಮಕಾಂದರ್, ಸೈಯದ್ ಮೊಹಮ್ಮದ್ ಗುತ್ತಿ, ಕೊಪ್ಪಳ ಎ.ಎಸ್.ಓ.ಸಿ ಎಸ್.ಹೆಚ್  ಹತ್ತಿಮತ್ತೂರ ಸೇರಿದಂತೆ ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲಾ ಕಾರ್ಯದರ್ಶಿಗಳು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

 

 

ಜಾಹೀರಾತು
error: Content is protected !!