February 10, 2025

Hampi times

Kannada News Portal from Vijayanagara

ಆಯುಷ್ಮಾನ್ ಭವಃ ಆರೋಗ್ಯ ಮೇಳ

 

https://youtu.be/NHc6OMSu0K4?si=SI_K4goOPEgwo6h2

ಸೆ.30ರಂದು ಕನಕಗಿರಿ, ಹಿರೇಸಿಂದೋಗಿಯಲ್ಲಿ
ಆಯುಷ್ಮಾನ್ ಭವಃ ಆರೋಗ್ಯ ಮೇಳ
ಹಂಪಿ ಟೈಮ್ಸ್ ಕೊಪ್ಪಳ:
ರಾಜ್ಯದ ಮಾರ್ಗಸೂಚಿಯನ್ವಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯಾದ್ಯಂತ ಆಯುಷ್ಮಾನ್ ಭವಃ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದ್ದು, ಆಯುಷ್ಮಾನ್ ಭವಃ ಆರೋಗ್ಯ ಮೇಳವನ್ನು ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ರಿಂದ ಸಂಜೆ 5:30ರ ವರೆಗೆ ಕನಕಗಿರಿ ಮತ್ತು ಹಿರೇಸಿಂದೋಗಿಯ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಆರೋಗ್ಯ ಮೇಳದಲ್ಲಿ ಕೊಪ್ಪಳ ವೈದ್ಯಕೀಯ ಮಹಾ ವಿದ್ಯಾಲಯದಿಂದ ತಜ್ಞ ವೈದ್ಯರು ಭಾಗವಹಿಸುತ್ತಿದ್ದು,  ಸ್ತ್ರೀ ರೋಗ ಮತ್ತು ಪ್ರಸೂತಿ, ಮಕ್ಕಳ ಸೇವೆಗಳು,  ಶಸ್ತ್ರ ಚಿಕಿತ್ಸೆ, ಕಣ್ಣು, ಕಿವಿ, ಮೂಗು ಮತ್ತು ಗಂಟಲು ಹಾಗೂ ಮಾನಸಿಕ ತಜ್ಞರಿಂದ ತಪಾಸಣೆ ಮತ್ತು ಚಿಕಿತ್ಸೆ ವ್ಯವಸ್ಥೆ ಇರುತ್ತದೆ.
ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಆರೋಗ್ಯ ಹೆಲ್ತ್ ಐ.ಡಿ. ಕಾರ್ಡ್ ಸಹ ಮಾಡಲಾಗುವುದು. ಸಾರ್ವಜನಿಕರು ಆಯುಷ್ಮಾನ್ ಭವ ಆರೋಗ್ಯ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!