https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಕೊಟ್ಟೂರು
ವೀರಶೈವ ಪತ್ತಿನ ಸಹಕಾರ ಸಂಘವು ನಿರ್ದೇಶಕರು, ಕಾರ್ಯದರ್ಶಿ ಮತ್ತು ಸರ್ವ ಸದಸ್ಯರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಉತ್ತಮ ಸೇವೆ ಮೂಲಕ ಗ್ರಾಹಕರಲ್ಲಿ ವಿಶ್ವಾಸವನ್ನು ಕಾಯ್ದುಕೊಂಡು ಸಂಘವು ಪ್ರಸ್ತುತ ಆರ್ಥಿಕ ಪ್ರಗತಿಯತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಧ್ಯಕ್ಷ ಎಂ.ಶಿವಣ್ಣ ಹೇಳಿದರು.
ಕೊಟ್ಟೂರು ತಾಲೂಕಿನ ವೀರಶೈವ ಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದ 2022-23ನೇ ಸಾಲಿನ ವಾರ್ಷಿಕ ಮಹಾಜನ್ ಸಭೆಯಲ್ಲಿ ಸಂಘದ ವಾರ್ಷಿಕ ಅಯ-ವ್ಯಯ ಪಟ್ಟಿ ವರದಿ ವಾಚನದ ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಘದ ಬೆಳವಣಿಗೆ ಮತ್ತು ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಸ್ಮರಿಸಿ, ಡಿ.23ಕ್ಕೆ ಇವರನ್ನು ಸನ್ಮಾನಿಸುವ ಬಗ್ಗೆ ಸಭೆಯ ಒಪ್ಪಿಗೆ ಪಡೆದು ಕೊಂಡರು ಹಾಗೆ ಗ್ರಹಕರ ಹೆಚ್ಚಳ ಮತ್ತು ಆರ್ಥಿಕ ಪ್ರಗತಿಯ ಹಿತದೃಷ್ಟಿಯಿಂದ ಸಂಘಕ್ಕೆ ಇನೋರ್ವ ಪಿಗ್ಮಿ ಏಜೆಂಟ್ ಅವಶ್ಯಕತೆ ಇದೆ ಹಾಗಾಗಿ ಶೀಘ್ರದಲ್ಲೇ ಪಿಗ್ಮಿ ಏಜೆಂಟ್ ನೇಮಕ ಮಾಡಿಕೊಳ್ಳಬೇಕಿದೆ ಎಂಬ ಮಾಹಿತಿಯನ್ನು ಸಭೆಗೆ ತಿಳಿಸಿದರು.
ನಿರ್ದೇಶಕ ಬಿ.ಪಂಪಾಪತಿ ಮಾತನಾಡಿ 2023-24ನೇ ಸಾಲಿಗೆ ಆಡಳಿತ ಮಂಡಳಿ ನಿರ್ದೇಶಕರು ಸದಸ್ಯರ ನೇಮಕವನ್ನು ಚುನಾವಣೆಗೆ ಬದಲಾಗಿ ಎಲ್ಲರ ಒಪ್ಪಿಗೆ ಮೇರಿಗೆ ಆಯ್ಕೆ ಮಾಡಬೇಕು ಎಂದು ಸಭೆಗೆ ಮನವಿ ಮಾಡಿಕೊಂಡರು.
ಕಾರ್ಯದರ್ಶಿ ಕೆ.ಮುದುಕಪ್ಪ ಸಂಘದ ಅಯ-ವ್ಯಯ ವಾರ್ಷಿಕ ಪಟ್ಟಿ ವರದಿ ವಾಚನ ಮಾಡಿ ಮುಂಗಡ ಬಜೆಟ್ ಗೆ ಅನುಮೋದನೆ ಪಡೆದುಕೊಂಡರು.
ಬಸನಗೌಡ ನಿವೃತ್ತ ಶಿಕ್ಷಕರು ಪ್ರಾರ್ಥಿಸಿದರು. ಸಭೆಯಲ್ಲಿ ಉಪಾಧ್ಯಕ್ಷ ವಿವೇಕಾನಂದ, ನಿರ್ದೇಶಕರಾದ ಕಡ್ಲಿ ಚಂದ್ರಶೇಖರಪ್ಪ, ಕೆ.ಬಿ.ಮಲ್ಲಿಕಾರ್ಜುನ, ಪರಂಜ್ಯೋತಿ, ಪೂರ್ಣಿಮಾ, ನಂಜನಗೌಡ, ಹೆಚ್.ಎನ್.ಪ್ರಭಾಕರ್, ಕೆ. ಸಣ್ಣವೀರಪ್ಪ, ಕಡ್ಲಿ ಪ್ರಶಾಂತ ಸೇರಿದಂತೆ ಸದಸ್ಯರು, ಸಿಬ್ಬಂದಿಗಳು ಹಾಜರಿದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ