https://youtu.be/NHc6OMSu0K4?si=SI_K4goOPEgwo6h2
ಲಾಭದಲ್ಲೂ ಪ್ರಗತಿ ಸಾಧಿಸಿದ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ
ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ 2022-23 ನೇ ಸಾಲಿನಲ್ಲಿ 10,74,384 ಲಕ್ಷ ರೂನಿವ್ವಳ ಲಾಭಗಳಿಸಿದ್ದು. ಸದಸ್ಯರಿಗೆ ಶೇ.25 ಲಾಭಾಂಶ ನೀಡಲಾಗಿದೆ ಎಂದು ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ.ಪತ್ತಾರ ತಿಳಿಸಿದರು.
ನಗರದ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಕಛೇರಿ ಆವಣದಲ್ಲಿ ಭಾನುವಾರ ಜರುಗಿದ 18ನೇ ವಾರ್ಷಿಕ ಮಹಾಜನಸಭೆ ಉದ್ಘಾಟಿಸಿ, ಅಧ್ಯಕ್ಷತೆವಹಿಸಿ ಮಾತನಾಡಿದರು. ನಿರ್ದೇಶಕರು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಸಹಕಾರಿಯು ಪ್ರಗತಿಯ ಹಾದಿಯಲ್ಲಿ ಸಾಗಿದೆ. ಪಿಗ್ಮಿ ಸಂಗ್ರಹಕರು ಸಹಕಾರಿಯ ಆಧಾರಸ್ತಂಭಗಳಾಗಿದ್ದಾರೆ. ಸಮರ್ಪಕ ಸೇವೆಯಿಂದ ಸದಸ್ಯರ ವಿಶ್ವಾಸರ್ಹತೆ ಪಡೆದಿದೆ. ಸಣ್ಣ ಹಾಗೂ ಮಧ್ಯಮ ವ್ಯಾಪರಸ್ಥರ ಮಳಿಗೆ ಬಾಗಿಲುಗಳಿಗೆ ತೆರಳಿ ನಿತ್ಯ ಪಿಗ್ಮಿ ಸಂಗ್ರಹಿಸಲಾಗುತ್ತಿದೆ. ಪಿಗ್ಮಿ ಸಂಗ್ರಹಕಾರರು ಸದಸ್ಯರಿಗೆ ಉತ್ತಮ ಸೇವೆ ನೀಡುತ್ತಿರುವುದರಿಂದ ಪಿಗ್ಮಿ ಕಟ್ಟುವ ಸದಸ್ಯರ ಸಂಖ್ಯೆಯು ಹೆಚ್ಚಾಗುತ್ತಿದ್ದು ದಿನಕ್ಕೆ 2 ಲಕ್ಷ ರೂ ಸಂಗ್ರಹವಾಗುತ್ತಿದೆ. ಸಹಕಾರಿಯ ಸದಸ್ಯರಿಗೆ ಜಾಮೀನು ಸಾಲ, ತೋರಾಯ್ಕೆ ಸಾಲ, ವಾಹನ ಸಾಲ, ಬಂಗಾರದ ಆಭರಣ ಆಧಾರಿತಸಾಲ, ಮುದ್ದತ್ತು ಠೇವು ಸಾಲ, ಪಿಗ್ಮಿ ಆಧಾರಿತ ಸಾಲ ನೀಡಲಾಗಿದೆ. ಪಿಗ್ಮಿ ಕಟ್ಟಿ ಉಳಿತಾಯ ಮಾಡಬೇಕೆನ್ನುವರು ಸಹಕಾರಿ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.
ಸಭೆಯಲ್ಲಿ ಸಹಕಾರಿಯೊಂದಿಗೆ ಅತೀ ಹೆಚ್ಚು ವ್ಯವಹಾರದಲ್ಲಿ ತೊಡಗಿಸಿಕೊಂಡ ಅತಿ ಹೆಚ್ಚು ಸಾಲ ಪಡೆದು ಸಕಾಲದೊಳಗೆ ಮರುಪಾವತಿ ಮಾಡಿದ ಸದಸ್ಯರಿಗೆ ಮತ್ತು ಪಿಗ್ಮಿ ಸಂಗ್ರಹಕರನ್ನು ಸನ್ಮಾನಿಸಲಾಯಿತು. ಸಹಕಾರಿಯ ಉಪಾಧ್ಯಕ್ಷರಾದ ಐ.ಭೀಮಾಜೀ, ನಿರ್ದೆಶಕರಾದ ಎ.ಕೃಷ್ಣಪ್ಪ, ಕೆ.ಸುರೇಶಆಚಾರ, ಬಿ.ರಾಮಚಂದ್ರ, ವಿ.ಮಂಜುನಾಥ, ವಿಜಯಾಕಮ್ಮಾರ್, ಕೆ.ಹೇಮಾವತಿ, ಆರ್.ಮುರಳೀಧರ್, ಕುಮಾರಿ ಬಿ.ಕಮಲ, ಬಿ.ಸಿರಿಯಾಚಾರ್, ಪ್ರಸನ್ನಾಚಾರ, ವಿಷೇಶ ಅಹ್ವಾನಿತರಾದ ಎಸ್.ಕೆ ರಾಜಶೇಖರಾಚಾರ ಹಾಗೂ ಸಿಇಒ ಕೆ.ನಾಗರಾಜ ಸೇರಿದಂತೆ ಸಿಬ್ಬಂದಿ, ಸದಸ್ಯರು ಇದ್ದರು
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ