November 11, 2024

Hampi times

Kannada News Portal from Vijayanagara

ಬಿಡಿಸಿಸಿ ಬ್ಯಾಂಕ್ ಎಂಡಿ, ಉಪಾಧ್ಯಕ್ಷರ ವಿರುದ್ಧ ಗಂಭೀರ ಆರೋಪ

 

https://youtu.be/NHc6OMSu0K4?si=SI_K4goOPEgwo6h2

 

ಬರದಲ್ಲೂ ರೈತರ ಸಾಲ ಪಾವತಿಗೆ ಒತ್ತಡ | ಎಂ.ಡಿ. ಹರೀಶ್, ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಧಿಕಾರ ದುರ್ಬಳಕೆ | ತನಿಖೆಗೆ ಒತ್ತಾಯಿಸಿದ ರೈತಸಂಘ

ಹಂಪಿ ಟೈಮ್ಸ್ ಹೊಸಪೇಟೆ:
ರೈತರ ಏಳ್ಗೆ ಮತ್ತು ನೆರವಿಗಾಗಿಯೇ ಜನ್ಮತಾಳಿರುವ ಬಿಡಿಸಿಸಿ ಬ್ಯಾಂಕ್ ಇದೀಗ ಭ್ರಷ್ಟ ಅಧಿಕಾರಿ ಎಂ.ಡಿ.ಹರೀಶ್ ಹಾಗೂ ಉಪಾಧ್ಯಕ್ಷ ತಿಪ್ಪೇಸ್ವಾಮಿ ಅಧಿಕಾರ ದುರ್ಬಳಕೆ ಹಾಗೂ ದರ್ಪದ ನಡೆಯಿಂದಾಗಿ ಬ್ಯಾಂಕ್ ದಿವಾಳಿ ಹಂತಕ್ಕೆ ತಲುಪಿದೆ. ಕಾಯ್ದೆ ವಿರುದ್ಧ ನೇಮಕೊಂಡ ನಿವೃತ್ತ ಅಧಿಕಾರಿ ಹರೀಶ್ ಅವರನ್ನು ಕೂಡಲೆ ಹುದ್ದೆಯಿಂದ ವಜಾಗೊಳಿಸಬೇಕು. ಉಪಾಧ್ಯಕ್ಷ ತಿಪ್ಪೇಸ್ವಾಮಿ ಸೇರಿ ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು (ಕೋಡಿಹಳ್ಳಿ ಚಂದ್ರಶೇಖರ ಬಣ) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ನಾಗರಾಜ ಆಗ್ರಹಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಮ್ಮಿಕೊಂಡಿದ್ದ ರೈತರ ಪ್ರತಿಭಟನೆಯಲ್ಲಿ ಮಾತನಾಡಿದರು. ಬರಗಾಲವೆಂದು ಘೋಷಣೆಯಾಗಿದ್ದರೂ ರೈತರ ಸಾಲ ವಸೂಲಾತಿ ನಿಂತಿಲ್ಲ. ಸಾಲ ಕಟ್ಟಬೇಕೆಂದು ರೈತರಿಗೆ ಕಿರುಕುಳ ನೀಡುತ್ತಿದ್ದು, ರೈತರು ಮಾನಸಿಕವಾಗಿ ಕುಗ್ಗಿದ್ದಾರೆ. ವರ್ಷವಾದರೂ ಬಿಡಿಸಿಸಿ ಬ್ಯಾಂಕಿನಿಂದ ಹೊಸ ಸಾಲಗಳನ್ನು ಕೊಡುತ್ತಿಲ್ಲ. ಕಾಯ್ದೆ ಪ್ರಕಾರ ಶೇ.೩೦ ರಷ್ಟು ಸಾಲ ಕೊಡಬೇಕೆನ್ನುವುದಿದ್ದರೂ, ಹಳೆಯ ಸಾಲ ಕಟ್ಟಿದವರಿಗೆ ಕೇವಲ ಮೂರು ಸಾವಿರ ರೂಪಾಯಿ ಹೆಚ್ಚುವರಿಯಾಗಿ ಕೊಡುತ್ತಿದ್ದಾರೆ. ಎಸ್ಸಿ,ಎಸ್ಟಿ ರೈತರಿಗೆ ಕೆಸಿಸಿ ಮಾಧ್ಯಮಾವಧಿ ಹಾಗೂ ಕೃಷಿಯೇತರ ಸಾಲ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಮೇಲ್ನೋಟಕ್ಕೆ ಲಾಭಾಂಶ ತೋರಿಸಲಾಗಿದೆ. ಲಾಭಾಂಶವಿದ್ದಲ್ಲಿ ರೈತರಗೆ ಸಾಲ ಕೊಡುತ್ತಿಲ್ಲವೇಕೆ? ಎಂ.ಡಿ.ಹರೀಶ್ ಸಿಬ್ಬಂದಿಗಳ ನಡುವೆ ಒಡೆದು ಆಳುವ ನೀತಿ ಅನುಸರಿಸಿ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಈ ಹಿಂದೆ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಆನಂದ್‌ಸಿಂಗ್ ಮೂರು ಸಭೆಗಳಿಗೆ ನಿರಂತರವಾಗಿ ಗೈರಾಗಿದ್ದರೂ, ಹಾಜರಿಯಾಗಿದ್ದೇರೆಂದು ತಿದ್ದಿದ್ದಾರೆ ಎಂದು ಆರೋಪಿಸಿದ ಅವರು, ಕಟ್ಟಡ ನಿರ್ಮಾಣಕ್ಕೆ ನಾಮಕಾವಸ್ತೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಗುತ್ತಿಗೆದಾರರಿಂದ ಕಳಪೆ ಕಾಮಗಾರಿ ನಡೆದಿದ್ದು ಕೂಡಲೇ ತನಿಖೆ ನಡೆಸಬೇಕು. ಬ್ಯಾಂಕಿನ ಎಂ.ಡಿ ಮತ್ತು ಉಪಾಧ್ಯಕ್ಷ ತಿಪ್ಪೇಸ್ವಾಮಿ ಬ್ಯಾಂಕಿನ ವಾಹನವನ್ನು ಬ್ಯಾಂಕ್ ಖರ್ಚಲ್ಲೆ, ಬೇಕಾಬಿಟ್ಟಿಯಾಗಿ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಎಂ.ಪಿ.ರವೀಂದ್ರ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪರಿಶ್ರಮದಿಂದಾಗಿ ಉಳಿತಾಯ ಮಾಡಿದ್ದ ಹಣವನ್ನು ಶತಮಾನೋತ್ಸವ ಹೆಸರಲ್ಲಿ ಅನಗತ್ಯವಾಗಿ ಖರ್ಚು ಮಾಡಿದ್ದಾರೆ. ಬ್ಯಾಂಕಿಗೆ ನಷ್ಟವಾಗಿರುವ ಮತ್ತು ಅನಗತ್ಯವಾಗಿ ಖರ್ಚು ಮಾಡಿದ ಹಣವನ್ನು ಎಂ.ಡಿ ಹರೀಶ್ ಮತ್ತು ಉಪಾಧ್ಯಕ್ಷ ತಿಪ್ಪೇಸ್ವಾಮಿ ಅವರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಬೆಳೆ ಸಾಲ ಮತ್ತು ಮಧ್ಯಮಾವಧಿ ಸಾಲ ಪಡೆದ ರೈತರ ಮೇಲೆ ಎಬಿಎನ್ ಕೇಸ್ ದಾಖಲಿಸಲು ಕಾರ್ಯದರ್ಶಿಗೆ ನೋಟೀಸ್ ನೀಡಿದ್ದಾರೆ. ರೈತರ ಮೇಲಾಗುತ್ತಿರುವ ಕಿರುಕುಳ ತಪ್ಪಿಸಿ, ಉತ್ತಮ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿದರು. ಕ.ರಾ.ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಜಡಿಯಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವರಮನಿ ಮಹೇಶ, ಜಿಲ್ಲಾ ಉಪಾಧ್ಯಕ್ಷ ಎಂ.ಸೋಮಣ್ಣ, ಮುಖಂಡರಾದ ಕಲ್ಲಪಪ್, ವೀರಭದ್ರಪ್ಪ ಸೇರಿದಂತೆ ರೈತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

 

 

 

ಜಾಹೀರಾತು
error: Content is protected !!