https://youtu.be/NHc6OMSu0K4?si=SI_K4goOPEgwo6h2
29.02 ಲಕ್ಷಗಳ ನಿವ್ವಳ ಲಾಭ | ಷೇರುದಾರರ ಶೇ.10 ಲಾಭಾಂಶ ಘೋಷಣೆ: ಅಧ್ಯಕ್ಷ ಬಿ.ಮೇಘನಾಥ
ಹಂಪಿ ಟೈಮ್ಸ್ ಹೊಸಪೇಟೆ:
ರೈತರ ಅಗತ್ಯತೆಗಳನ್ನು ಸಹಕಾರಿ ತತ್ವದಡಿ ಪೂರೈಸುವ ಮೂಲಕ ರೈತ ಜೀವನಾಡಿ ಅಮರಾವತಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಸಿಬ್ಬಂದಿಗಳ ಕಾರ್ಯದಕ್ಷತೆ, ನಿರ್ದೇಶಕರ ಸಹಕಾರದಿಂದ 2022-23 ನೇ ಸಾಲಿನ ಲೆಕ್ಕ ತಪಾಸಣೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಬಿ.ಮೇಘನಾಥ ಹೇಳಿದರು.
ನಗರದ ಅಮರಾವತಿ ವಿ.ಪ್ರಾ.ಕೃ.ಪ.ಸಹಕಾರ ಸಂಘದಲ್ಲಿ ಸೋಮವಾರ ಜರುಗಿದ 63ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಘವು ಸಹಕಾರ ತತ್ವ ಮತ್ತು ಮೌಲ್ಯಗಳನ್ನೊಳಗೊಂಡು 63 ವರ್ಷಗಳ ಯಶಸ್ವಿ ಸೇವೆಯನ್ನು ಪೂರೈಸಿ, ಅವಳಿ ಜಿಲ್ಲೆಗಳಲ್ಲಿ ಸಹಕಾರ ಸಂಘಗಳ ಪೈಕಿ ಅತ್ಯುತ್ತಮ ಸಹಕಾರ ಸಂಘವೆAಬ ಪ್ರಶಂಸಗೆ ಪಾತ್ರವಾಗಿದೆ.
ಸಂಘವು 2022-23 ನೇ ಸಾಲಿನಲ್ಲಿ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದೆ. ರೂ. 566.53 ಲಕ್ಷಗಳ ಠೇವಣೆಯನ್ನು ಸಂಗ್ರಹಿಸಿದ್ದು, ದುಡಿಯುವ ಬಂಡಾವಳವು ರೂ. 1374.72 ಲಕ್ಷಗಳಿಗೆ ಏರಿಕೆಯಾಗಿದೆ. ಶಾಸನಬದ್ದ ಅವಕಾಶಗಳನ್ನು ಕಲ್ಪಿಸಿದ ನಂತರ ರೂ. 29.02 ಲಕ್ಷಗಳ ನಿವ್ವಳ ಲಾಭವನ್ನು ಗಳಿಸಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿ ಪ್ರಮಾಣವು ಶೇ.2.53 ರಷ್ಟಿದೆ. ಸಿಬ್ಬಂದಿಯವರ ಕಾರ್ಯದಕ್ಷತೆದಿಂದ ಸಂಘದ ಎನ್.ಪಿ.ಎ ಪ್ರಮಾಣ ಕಡಿಮೆ ಮಾಡಲು ಸಾಧ್ಯವಾಯಿತು. 2022-23 ನೇ ಆರ್ಥಿಕ ವರ್ಷದಲ್ಲಿ ಕೃಷಿ ಮತ್ತು ಕೃಷಿಯೇತರ ಸಾಲದಲ್ಲಿ ಶೇ 97.27 ರಷ್ಟು ವಸೂಲಾತಿಯಲ್ಲಿ ಪ್ರಗತಿ ಸಾಧಿಸಲಾಗಿದೆ. ಕೃಷಿ ಉದ್ದೇಶಗಳಿಗಾಗಿ ಅಲ್ಪಾವಧಿ ಬೆಳೆ ಸಾಲ ಮತ್ತು ಬಿ.ಡಿ.ಪಿ ಯೋಜನೆಯಡಿಯಲ್ಲಿ ಕೃಷಿಯೇತರ ಉದ್ದೇಶಗಳಿಗಾಗಿ ನಗದು ಪತ್ತಿನ ಸಾಲ, ಮಾಧ್ಯಮಾವಧಿ ಕೃಷಿಯೇತರ ಸಾಲ, (ದ್ವೀಚಕ್ರ & ಕಾರ್) ವಾಹನ ಖರೀದಿಸಲು, ಬಂಗಾರ ಸಾಲ ಮತ್ತು ಠೇವಣೆ ಸಾಲ, ಸಿಬ್ಬಂದಿ ಗೃಹ ಸಾಲ, ವೇತನಾಧರಿತ ಸಾಲ,ಅಡಮಾನ ಸಾಲ ಇತ್ಯಾದಿ ಸಾಲ ಸೌಲಭ್ಯವನ್ನು ಒದಗಿಸುವ ಕಾರ್ಯವನ್ನು ಕೈಗೊಂಡು ಠೇವುದಾರರ ಹಾಗೂ ಬಳಕೆದಾರರ ಸಮತೋಲನವನ್ನು ಕಾಯ್ದುಕೊಂಡು ಸಂಘವು ಯಶಸ್ವಿಗಾಗಿ ಸಾಗುತ್ತಿರುವುದು ತಿಳಿಸಲು ಹೆಮ್ಮೆ ಎನಿಸಿದೆ. ಸಂಘದ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗುವಂತೆ ಮೈಕ್ರೋ ಎಟಿಎಂ ಹಾಗೂ ಯುಪಿಐ (ಫೋನ್‌ಪೇ-ಗೂಗಲ್ ಪೇ) ವ್ಯವಸ್ಥೆಯನ್ನು ಬಿ.ಡಿ.ಸಿ.ಸಿ ಬ್ಯಾಂಕಿನ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ ಎಂದ ಅವರು ಸಂಘದ ಷೇರುದಾರರಿಗೆ ಶೇ.10 ರಷ್ಟು ಷೇರು ಲಾಭಾಂಶ ಘೋಷಿಸಿದರು.
ಸನ್ಮಾನ: ಸದಸ್ಯರ ಮಕ್ಕಳು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ದ್ವಿತೀಯ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಮೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಗದು ರೂಪದಲ್ಲಿ ನೀಡಲಾಯಿತು ಮತ್ತು ಸಂಘದ ಅತ್ಯಂತ ಹಿರಿಯ ರೈತ ಸದಸ್ಯರನ್ನು ಗುರುತಿಸಿ ಉತ್ತಮ ಸಹಕಾರಿ ಸದಸ್ಯರೆಂದು ಪ್ರಶಸ್ತಿ ಪತ್ರ ವಿತರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ವಿಶ್ವನಾಥ ನಿರ್ದೇಶಕರಾದ ಎಲ್.ಎಸ್.ಆನಂದ, ಆರ್. ಚಿನ್ನದೊರೈ,
ಎಸ್.ಗಾಳೆಪ್ಪ, ಎಂ.ವಿರುಪಾಕ್ಷಯ್ಯ, ಕೆ.ಎಸ್. ಹನುಮಂತಪ್ಪ, ಜಿ.ಚಂದ್ರಶೇಖರ, ಡೊಮ್ಮಿ ಮೂರ್ತೆಪ್ಪ, ಕೆ.ಎಸ್.ಹೆಚ್.ಶ್ರೀನಿವಾಸ,
ಹೆಚ್.ಎಂ.ಶಶಿಕಲಾ, ಪುಷ್ಟಲತಾ, ಆರ್ಥಿಕ ಬ್ಯಾಂಕ್ ಪ್ರತಿನಿಧಿ ಅಕ್ಕಿ ಕೋಟ್ರೇಶ್ ಹಾಗೂ ಮು.ಕಾ.ನಿ ಯವರಾದ ಹುಲಿಕುಂಟಪ್ಪ
ಬಣಕಾರ ಉಪಸ್ಥಿತಿದ್ದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ