March 15, 2025

Hampi times

Kannada News Portal from Vijayanagara

ಹಂಪಿ ಪೊಲೀಸರಿಂದ ಕ್ಯಾಮರ ಕಳ್ಳನ ಬಂಧನ, 12.63 ಲಕ್ಷ ಮೌಲ್ಯದ ವಸ್ತುಗಳ ಜಪ್ತಿ

 

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಪೊಲೀಸರ ಬಲೆಗೆ ಬಿದ್ದ ಆರೋಪಿ

ಹಂಪಿ ಟೈಮ್ಸ್ ಹೊಸಪೇಟೆ:

ಹಂಪಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ಮೌಲ್ಯದ ಕ್ಯಾಮರ ಲೆನ್ಸ್ಗಳನ್ನು ಕದ್ದೊಯ್ದಿದ್ದ ಅಂತರ್ ರಾಜ್ಯದ ಆರೋಪಿ ಕಳ್ಳ ಕಾರ್ತಿಕ್ ಚೌಧರಿ ಅಕ್ಕಿನೇನಿಯನ್ನು ಹಂಪಿ ಪೊಲೀಸರು ಬಂಧಿಸಿ, 12.63 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಆ.23 ರಂದು ಬೆಂಗಳೂರಿನ ಪ್ರವೀಣ್ ಕುಮಾರ್ ಫೋಟೋ ಶೂಟ್‌ಗೆ ಹಂಪಿಗೆ ಬಂದ ಸಂದರ್ಭದಲ್ಲಿ ಕ್ಯಾಮರ ಮತ್ತು ಲೆನ್ಸ್ಗಳು ಕಳುವಾಗಿದ್ದನ್ನು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗೆ ಬಲಿ ಬೀಸಿದ್ದರು. ಪೊಲೀಸರು ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಂಪಿ ವೃತ್ತದ ಸಿಪಿಐ ಶಿವರಾಜ್ ಎಸ್ ಇಂಗಳೆ ಮತ್ತು ಸಿಬ್ಬಂದಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ, ವೇಲ್ಪುರ ಗ್ರಾಮದಲ್ಲಿದ್ದ ಆರೋಪಿಯನ್ನು ದಸ್ತಗಿರಿ ಮಾಡಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಸ್‌ಪಿ ಶ್ರೀಹರಿಬಾಬು, ಡಿವೈಎಸ್ಪಿ ಟಿ.ಮಂಜುನಾಥ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ಪಿಎಸ್‌ಐ ಶಿವಕುಮಾರನಾಯ್ಕ, ಹೆಡ್ ಕಾನ್ಸ್ಟೇಬಲ್‌ಗಳಾದ ಜಾವೇದ್ ಆಶ್ರಫ್, ಕರಿಬಸಜ್ಜ, ಪೊಲೀಸರಾದ ಶರಣಪ್ಪ, ಮೈಲಾರಪ್ಪ, ಮಾರುತಿ, ನಾಗರಾಜ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

 

 

ಜಾಹೀರಾತು
error: Content is protected !!