March 15, 2025

Hampi times

Kannada News Portal from Vijayanagara

ಚೌರಿ ಮಾರುವ ಹುಡುಗಿ

 

https://youtu.be/NHc6OMSu0K4?si=SI_K4goOPEgwo6h2

 

ಚೌರಿ ಮಾರುವ ಹುಡುಗಿ

ಕೆದರಿದ ಕೂದಲು, ಮಾಸಿದ ಬಟ್ಟೆ
ಬಗಲಲ್ಲೊಂದು ಜೋಳಿಗೆ
ಹಸುಗೂಸೊಂದ ಅದರಲ್ಲಿಟ್ಟುಕೊಂಡು
ಪಾಚುಗಟ್ಟಿದ ಹಲ್ಲ ಸಂದಿನಿಂದ ಪಿಚುಗುಟ್ಟುತ್ತ
ಮನೆ ಮನಗಳನ್ನು ಹುಡುಕುತ್ತ ಹೊರಟಿದ್ದಾಳೆ
ಚೌರಿ ಕೂದಲು ಬೇಕೇನ್ರೀ? ಕೂಗುತ್ತಾ
ಬಾಚಿ ಬಾಚಿ ಅಂದಗೊಳಿಸುತಿದ್ದಾಳೆ ಚೌರಿ
ತನ್ನನ್ನೇ ಸರಿ ಮಾಡಿಕೊಂಡಷ್ಟು ಸಂತೋಷದಿAದ
ಜಿಡ್ಡುಗಟ್ಟಿದ ತನ್ನ ಕೂದಲ ಹಿಕ್ಕು ಬಿಡಿಸಿಲ್ಲ
ಮತ್ತೊಬ್ಬರ ತಲೆ ಶೃಂಗಾರಗೊಳಿಸುವ ಆತುರದಲಿ
ಕೂಸಿಗೋ ಬತ್ತಿದ ಎದೆಯಿಂದ ಹಸಿವ ಹಿಂಗಿಸಿಕೊಳ್ಳುವ ತವಕ
ಕೂಸು ಮೊಲೆ ಚೀಪುವುದ ಕದ್ದು ನೋಡುವ ಪಾಪಾತ್ಮರೆಷ್ಟೋ
ಕೊಳಕು ಮೈಯವಳಾದರೂ ಚಲುವಾಗಿ ಕಾಣುತ್ತಾಳೆ
ಕಾಮನೆ ತುಂಬಿದ ಗಂಡಸರಿಗೆ
ಇದಾವುದರ ಪರಿವೆಯೇ ಇಲ್ಲ ಅವಳಿಗೆ
ತನ್ನ ಸರಕು ಮಾರಬೇಕು
ಹೊಟ್ಟೆಗಿಷ್ಟು ಗಂಜಿ ಸೇರಬೇಕು
ಕೂಗುತಿದ್ದಾಳೆ ಚೌರಿ ಕೂದಲು ಬೇಕೇನ್ರೀ?

| ಭೋಜರಾಜ ಸೊಪ್ಪಿಮಠ
  ಉಪನ್ಯಾಸಕರು, ಮುಂಡರಗಿ

 

 

ಜಾಹೀರಾತು
error: Content is protected !!