December 5, 2024

Hampi times

Kannada News Portal from Vijayanagara

ಪ್ರವಾಸಿಗರ ಹೆಚ್ಚಳ ಟಿಬಿ ಡ್ಯಾಂ  ಮಾರ್ಗ ಬದಲು ಆ.15

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ : ‌

ಆಗಸ್ಟ್ 15ರಂದು ಆಚರಿಸಲಾಗುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರವಾಸಿಗರು ಬರುವ ನಿರೀಕ್ಷೆ ಇರುವುದರಿಂದ ಮಾರ್ಗ ಬದಲಿಸಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಅವರು ಆದೇಶಿಸಿದ್ದಾರೆ.

ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಓಡಾಡುವ ಕಾರಣದಿಂದ ಸಂಚಾರ ಸುವ್ಯವಸ್ಥೆಗಾಗಿ ಮಾರ್ಗ ಬದಲಿಸಲಾಗಿದ್ದು, ಮುನಿರಾಬಾದ್ ಕಡೆಗೆ ಹೋಗುವವರು ಸಾಯಿಬಾಬಾ ವೃತ್ತದಿಂದ ಧಾರವಾಡ ಚೆಕ್‌ಪೋಸ್ಟ್ ಮುಖಾಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ತೆರಳಲು ಮತ್ತು ಮುನಿರಾಬಾದ್ ಕಡೆಯಿಂದ ಹೊಸಪೇಟೆ ನಗರಕ್ಕೆ ಬರುವವರು ಟಿಬಿ ಡ್ಯಾಂ ಗಣೇಶ ದೇವಸ್ಥಾನದ ಮೂಲಕ ಒಳಗಡೆ ಪ್ರವೇಶಿಸಿದೆ ನೇರವಾಗಿ ರಾಷ್ಟ್ರೀಯ ಹೆದ್ದಾರಿ 50ರ ಮೂಲಕ ಬಂದು ವಿರುಪಾಕ್ಷ ನಾಯಕ ವೃತ್ತ(ಸಂಚಾರ ಪೊಲೀಸ್ ಠಾಣೆ) ಮೂಲಕ ನಗರಕ್ಕೆ ಬರಲು ಆದೇಶಿಸಲಾಗಿದೆ.

 

 

ಜಾಹೀರಾತು
error: Content is protected !!