December 5, 2024

Hampi times

Kannada News Portal from Vijayanagara

ಮಕ್ಕಳ ಹೆಸರಲ್ಲಿ ಗಿಡ ನೆಟ್ಟ ಶುಭಕಾಂಕ್ಷ ಶಾಲೆ

 

https://youtu.be/NHc6OMSu0K4?si=SI_K4goOPEgwo6h2

ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ : ಪ್ರಸನ್ನ ಎಲ್.ತೈಲಂಗ

ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಶುಭಕಾಂಕ್ಷಿ ಪೂರ್ವ ಪ್ರಾಥಮಿಕ ಶಾಲೆವತಿಯಿಂದ ವನಮಹೋತ್ಸವದಂಗವಾಗಿ ಭಾನುವಾರ ಡಾ||ಪುನೀತ್ ರಾಜಕುಮಾರ ಕ್ರೀಡಾಂಗಣದಲ್ಲಿ ೩೩ ಸಸಿಗಳನ್ನು ನೆಟ್ಟು ನೀರೆರವ ಮೂಲಕ ವನಮಹೋತ್ಸವ ಆಚರಿಸಲಾಯಿತು.

 

ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರಸನ್ನ ಎಲ್ ತೈಲಂಗ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರದ ಅಗತ್ಯವಿದೆ. ಹಾಗಾಗಿ ಮಕ್ಕಳಲ್ಲಿ ಜವಾಬ್ದಾರಿ, ಸಾಮಾಜಿಕ ಕಾಳಜಿ ಹೆಚ್ಚಳಕ್ಕಾಗಿ ವಿದ್ಯಾರ್ಥಿಗಳ ಹೆಸರಲ್ಲಿ ಸಸಿಗಳನ್ನು ನಡೆಲಾಗಿದೆ. ಸಿಸಿ ಗಿಡವಾಗಿ, ಹೆಮ್ಮರವಾಗಿ ಬೆಳೆಯುವಂತೆ ಮಕ್ಕಳ ಭವಿಷ್ಯ ಉಜ್ವಲವಾಗಿ ಬೆಳಗಲಿ ಎಂದರು.

ಶಾಲೆಯ ಮುಖ್ಯಗುರು ಶಾಲಿನಿ ಪ್ರಸನ್ನ, ಸಮಾಜದ ಮುಖಂಡ ಕಟಿಗಿ ರಾಮಕೃಷ್ಣ ಮಾತನಾಡಿದರು. ನಗರಸಭೆ ಸದಸ್ಯ ಎಲ್.ಎಸ್.ಆನಂದ, ವಕೀಲ ಪ್ರಲ್ಹಾದ ಶೆಟ್ಟಿ, ಮುಖಂಡರಾದ ಕೀರ್ತಿ ಸಾಗರ, ಜಂಬಯ್ಯ ನಾಯಕ, ಶ್ರೀನಿವಾಸ, ಮಹೇಂದ್ರ ಕುಮಾರ ಸೋನಿ, ಕಿನ್ನಾಳ ಹನುಮಂತ, ಎಸ್, ಚಂದ್ರಶೇಖರ್, ಹಿರೇಮಠ ಮತ್ತು ಶಾಲೆಯ ಶಿಕ್ಷಕಿಯರಾದ ಅನುಷಾ, ಅಂಕಿತಾ ಹಾಗೂ ವಿದ್ಯಾರ್ಥಿಗಳಾದ ನಿಖಿಲ್, ಹುಸೇನಿ, ಸಂಪತ್ ಇತರರಿದ್ದರು.

 

 

ಜಾಹೀರಾತು
error: Content is protected !!