December 14, 2024

Hampi times

Kannada News Portal from Vijayanagara

ಕಾರ್ಮಿಕರಿಗಾಗಿ ವಸತಿ ಇಲಾಖೆಗೆ ಮಂಡಳಿಯಿಂದ 400 ಕೋಟಿ ಅನುದಾನವಿದೆ: ಸಚಿವ ಜಮೀರ್

 

https://youtu.be/NHc6OMSu0K4?si=SI_K4goOPEgwo6h2

ಕಾರ್ಮಿಕರ ಯೋಜನೆಗಳ ಜಾಗೃತಿ:

ಹಂಪಿ ಟೈಮ್ಸ್‌ ಹೊಸಪೇಟೆ:

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 25 ಸಾವಿರ ಕೋಟಿ ಅನುದಾನ ಇದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಹಲವು ಯೊಜನೆಗಳು ಜಾರಿಯಲ್ಲಿವೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಖಾನ್‌ ಹೇಳಿದರು.

ನಗರದಲ್ಲಿ ಬುಧವಾರ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜೊತೆಗೆ ಕಾರ್ಮಿಕರಿಗಾಗಿ ವಸತಿ ಇಲಾಖೆಗೆ ಮಂಡಳಿಯಿಂದ 400 ಕೋಟಿ ಅನುದಾನವನ್ನು ಪಡೆದಿದ್ದೇನೆ. ಇಲಾಖೆಯವರು ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಮಾಹಿತಿಯನ್ನು ಇಲ್ಲಿನ ಕಾರ್ಮಿಕರಿಗೆ ಜಾಗೃತಿ ಮೂಡಿಸಬೇಕು. ಇದರ ಜೊತೆಗೆ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿ, ಕಾರ್ಮಿಕರ ಮಕ್ಕಳಿಗೆ ಒದಗಿಸಲಾಗುವ ಶಿಕ್ಷಣ ಇತರ ಯೋಜನೆಗಳ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು. ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಕಾರ್ಮಿಕರ ವೇತನ ಪಾವತಿ, ಇತರ ಸೌಲಭ್ಯಗಳ ಲಭ್ಯತೆ ಕುರಿತು ನಿಯಮಿತ ಮಾಹಿತಿ ಪಡೆದು ವರದಿ ಸಲ್ಲಿಸುವ ಜೊತೆಗೆ ಬಾಲಕಾರ್ಮಿಕ ಪದ್ದತಿ ನಡೆಯತ್ತಿದ್ದಲ್ಲಿ ಎಚ್ಚರವಹಿಸಬೇಕು ಎಂದು ಸೂಚಿಸಿದರು.

 

 

ಜಾಹೀರಾತು
error: Content is protected !!