March 15, 2025

Hampi times

Kannada News Portal from Vijayanagara

ದೇಶ ಕಾದು ಸುರಕ್ಷಿತವಾಗಿ ತವರಿಗೆ ಮರಳಿದ ಯೋಧ ಸುರೇಶ ಅಣಜಿ

 

https://youtu.be/NHc6OMSu0K4?si=SI_K4goOPEgwo6h2

 

ದೇಶ ಪ್ರೇಮಿಗಳಿಂದ ಸ್ವಾಗತ

ಹಂಪಿ ಟೈಮ್ಸ್ ಹೊಸಪೇಟೆ
ಭಾರತ ಸೈನ್ಯದಲ್ಲಿ ೨೦ ವರ್ಷ ಏಳು ತಿಂಗಳು ಸೇವೆ ಸಲ್ಲಿಸಿದ ಹಗರಿಮೊಮ್ಮನಹಳ್ಳಿ ತಾಲೂಕಿನ ಕಡ್ಲಬಾಳ ಗ್ರಾಮದ ವೀರ ಯೋಧ ಸುರೇಶ ಅಣಜಿ ಸ್ವಯಂ ನಿವೃತ್ತಿ ತೆಗೆದುಕೊಂಡು ಗುರುವಾರ ನಗರದ ರೈಲ್ವೆ ಸ್ಟೇಶನ್‌ಗೆ ಬಂದಿಳಿದರು.
ಇವರಿಗೆ ಸ್ನೇಹಿತರು, ಕುಟುಂಬದವರು, ದೇಶ ಪ್ರೇಮಿಗಳು ಸ್ವಾಗತಿಸಿ ಅದ್ದೂರಿಯಾಗಿ ಬರ ಮಾಡಿಕೊಂಡರು. ೧೪೬ನೇ ಬಟಾಲಿನಲ್ಲಿ ಸೇವೆ ಆರಂಭ ಮಾಡಿದ್ದು, ಅನೇಕ ಧುರಿತ ಸಂದರ್ಭದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ೨೩ ವರ್ಷವಿರುವಾಗ ಸೈನ್ಯಕ್ಕೆ ಸೇರ್ಪಡೆಯಾದ ಇವರು ತಮ್ಮ ೪೪ನೇ ವಯಸ್ಸಿಗೆ ಸ್ವಯಂ ನಿವೃತ್ತಿ ಘೋಷಿಸಿಕೊಂಡು ತವರಿಗೆ ಹಿಂತಿರುಗಿ ಬಂದಿದ್ದಾರೆ. ಗುಜರಾತಿನ ಗಾಂಧಿನಗರದಲ್ಲಿ ನಡೆದ ಘಟನೆ ಹಾಗೂ ದೇಶದ ಗಡಿಯಲ್ಲಿ ನಡೆದ ಅನೇಕ ಘಟನೆಗಳನ್ನು ಎದುರಿಸಿದ ರೋಚಕ ಅನುಭವಗಳನ್ನು ಪಡೆದ ಇವರು ಡಿಜಿ ಮೆಡಲ್‌ನ್ನು ಪಡೆದಿದ್ದಾರೆ. ದೇಶಕ್ಕಾಗಿ ಹೋರಾಟ ಮಾಡುವಾಗ ಈ ದೇಶದ ಪ್ರತಿ ವ್ಯಕ್ತಿ ನಮ್ಮ ಸೈನ್ಯದ ಬಗ್ಗೆ ತೋರಿದ ಪ್ರೀತಿ, ಹಾರೈಕೆಗಳೇ ನಮ್ಮನ್ನು ಸುರಕ್ಷಿತವಾಗಿಟ್ಟು, ಈ ಜನರ ಒಲವನ್ನು ಎಂದು ಮರೆಯಲಾರೆ ಎಂದು ಪತ್ರಿಕೆಗೆ ಪ್ರತಿಕ್ರಿಯಿಸಿದರು.

 

 

ಜಾಹೀರಾತು
error: Content is protected !!