December 5, 2024

Hampi times

Kannada News Portal from Vijayanagara

ಹಂಪಿ ಜನತಾಪ್ಲಾಟ್ ಪ್ರದೇಶಕ್ಕೆ ಸಮಿತಿ ಸದಸ್ಯರ ಭೇಟಿ, ಪರಿಶೀಲನೆ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ನ್ಯಾಯಾಲಯದ ಆದೇಶದಂತೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಬಳಿಯ ಜನವಸತಿ ಜನತಾಪ್ಲಾಟ್ ಪ್ರದೇಶಕ್ಕೆ ಸಮಿತಿ ಶನಿವಾರ ಭೇಟಿ ಮಾಡಿ ಅಭಿಪ್ರಾಯ ಸಂಗ್ರಹಿಸಿತು.
ಇಲ್ಲಿನ ಜನವಸತಿ ಪ್ರದೇಶವಿರುವ ಜನತಾ ಪ್ಲಾಟ್‌ಗೆ ಬೆಳಗ್ಗೆ ಬಂದ ಸಮಿತಿ ಸದಸ್ಯರು, ಇಲ್ಲಿರುವ ಹೋಂ ಸ್ಟೇ, ವಸತಿ ಇರುವ ಮನೆಗಳನ್ನು ಪರಿಶೀಲಿಸಿತು. ಜತೆಗೆ ಇಲ್ಲಿ ವಾಸಿಸುತ್ತಿರುವ ಜನರ ಮಾಹಿತಿಗಳನ್ನು ಸಂಗ್ರಹಿಸಿತು. ವಾಸ್ತವ ತಿಳಿಯಲು ಬಂದಿದ್ದ ಸಮಿತಿ ಇಲ್ಲಿನ ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ವಾಸ್ತಾವಂಶ ತಿಳಿಯಲು ಮುಂದಾದರು.


ಈ ಸಂದರ್ಭ ಸ್ಥಳೀಯರು ಮಾತನಾಡಿ, ಹಂಪಿ ಪೌರಾಣಿಕ ಪುಣ್ಯ ಕ್ಷೇತ್ರವಾಗಿದ್ದು, ಶ್ರೀ ಪಂಪಾ ವಿರೂಕ್ಷೇಶ್ವರ ದೇವಸ್ಥಾನಕ್ಕ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸಲಾಗುತ್ತಿದ್ದು, ಬರುವ ಭಕ್ತರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಬಂದ ಭಕ್ತರಿಗೆ ಇಳಿದುಕೊಳ್ಳಲು ವಸತಿ ಸೌಕರ್ಯ ಇಲ್ಲ. ಹೀಗಾಗಿ ಇಲ್ಲಿಗೆ ಬರುವ ಭಕ್ತರು ಹೋಂಸ್ಟೇಗಳಲ್ಲಿ ಉಳಿದುಕೊಳ್ಳುತ್ತಾರೆ. ಇಲ್ಲಿ ರೆಸಾರ್ಟ್‌ಗಳಿಲ್ಲ. ಹಾಗೂ ವಾಣಿಜ್ಯ ಚಟುವಟಿಕೆಗಳು ನಡೆಸುತ್ತಿಲ್ಲ. ವಾಸಿಸಲು ಅವಕಾಶ ಮಾಡಿಕೊಡಿ ಎಂದು ನಿವಾಸಿಗಳು ಸಮಿತಿಯ ಮುಂದೆ ಅಭಿಪ್ರಾಯಗಳನ್ನು ತಿಳಿಸಿದರು. ಬೆಂಗಳೂರು ಹೈಕೋರ್ಟ್ ನೇಮಿಸಿದ ಜಡ್ಜ್, ಹಂಪಿ ಪ್ರಾಧಿಕಾರ, ಕಂದಾಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ಸರ್ಕಾರ ಹಾಗೂ ಜನತೆ ಪರ ವಕಾಲತು ಮಾಡುವ ವಕೀಲರು, ಸ್ಥಳೀಯ ಅರ್ಚಕರಾದ ಮೋಹನ್ ಚಿಕ್ಕಭಟ್ ಮತ್ತಿತರರು ಇದ್ದರು.

 

 

ಜಾಹೀರಾತು
error: Content is protected !!