https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ಹಂಪಿಯಲ್ಲಿ ಜುಲೈ ತಿಂಗಳ 3ನೇ ವಾರ ನಡೆಯಲಿರುವ ಜಿ-20 ಶೃಂಗಸಭೆಗೆ ಸಂಬಂಧಿಸಿದಂತೆ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಸ್ಥಳಗಳ ಪರಿಶೀಲನೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ಭಾನುವಾರ ಪರಿಶೀಲನೆ ನಡೆಸಿದರು.
ವಿಶ್ವಪಾರಪಂರಿಕ ಪ್ರದೇಶ ಹಂಪಿಯ ಚಕ್ರತೀರ್ಥ ಬಳಿಯ ನದಿದಂಡೆಯಲ್ಲಿ ಜಿ-20 ಸಭೆಗೆ ಆಗಮಿಸುವ ಪ್ರತಿನಿಧಿಗಳು ಕೈಗೊಳ್ಳಲಿರುವ ಹರಿಗೋಲು ಸವಾರಿಯ(ಕೊರಾಕಲ್ ರೈಡ್) ಪ್ರಾರಂಭಿಕ ಸ್ಥಳದ ಪರಿಶೀಲನೆ ನಡೆಸಿದರು. ಸುತ್ತಮುತ್ತಲಿನ ಪ್ರದೇಶದ ಮಾಹಿತಿಯನ್ನು ಸ್ಥಳೀಯ ಅಧಿಕಾರಿಗಳಿಂದ ಪಡೆದುಕೊಂಡರು. ಜಿ-20 ಶೆರ್ಪಾ ಅಮಿತಾಭ್ ಕಾಂತ್ ಸೇರಿದಂತೆ ಜಂಟಿ ಕಾರ್ಯದರ್ಶಿ ಆಶಿಶ್ ಸಿನ್ಹಾ, ಜಂಟಿ ಕಾರ್ಯದರ್ಶಿ (ಭದ್ರತೆ) ಭಾವನಾ ಸಕ್ಸೇನಾ, ಅಧೀನ ಕಾರ್ಯದರ್ಶಿ ಆಸಿಮ್ ಅನ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಾಮಪ್ರಸಾತ್ ಮನೋಹರ್ ವಿ. ಉಪಸ್ಥಿತರಿದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ
ರಾಜ್ಯಪಾಲರಿಂದ ಹಂಪಿಯ ಐತಿಹಾಸಿಕ ಸುಗ್ರೀವ ಗುಹೆ ವೀಕ್ಷಣೆ