https://youtu.be/NHc6OMSu0K4?si=SI_K4goOPEgwo6h2
ಮನವಿ ನಿರ್ಲಕ್ಷ್ಯಿಸಿದರೆ ಹೋರಾಟ ತೀವ್ರ ಎಚ್ಚರಿಕೆ
ಹಂಪಿ ಟೈಮ್ಸ್ ಹೊಸಪೇಟೆ:
ಗ್ರಾಹಕರ ಗಮನಕ್ಕೆ ತರದೆ ಶೇ.25 ರಿಂದ ಶೇ.75ವರೆಗೆ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ, ಗ್ರಾಹಕರಿಗೆ ವಿದ್ಯುತ್ ಬಿಲ್ ನೀಡಿರುವ ಜೆಸ್ಕಾಂ ಕ್ರಮ ಖಂಡನೀಯ. ಕೂಡಲೇ ಹೆಚ್ಚುವರಿ ವಿದ್ಯುತ್ ಬಿಲ್ ಹಿಂಪಡೆದು, ಹಳೆಯ ದರವನ್ನೇ ಮುಂದುವರೆಸಬೇಕು ಎಂದು ವಿಜಯನಗರ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕ ಸಂಘ(ರಿ)ದ ಅಧ್ಯಕ್ಷ ಅಶ್ವಿನ್ ಕೋತಂಬ್ರಿ ಆಗ್ರಹಿಸಿದರು.
ನಗರದ ಸಾಯಿಬಾಬ ಬಳಿಯ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಕೈಗಾರಿಕೋದ್ಯಮಿಗಳ ಪ್ರತಿಭಟನೆ ರ‍್ಯಾಲಿಯಲ್ಲಿ ಶುಕ್ರವಾರ ಮಾತನಾಡಿದರು. ಕೆ.ಇ.ಆರ್.ಸಿ. ಹೊಸ ತಿದ್ದುಪಡೆಯಿಂದ ವ್ಯಾಪಾರಸ್ಥರಿಗೆ, ಉದ್ಯಮದಾರರಿಗೆ ವಿದ್ಯುತ್ ಬಿಲ್ ಅತಿಯಾದ ಹೊರೆಯಾಗಿದ್ದು, ಉದ್ದಿಮೆಗಳ ನಿರ್ವಹಣೆಗೆ ಕಂಠಕವಾಗಿದೆ. ವಿದ್ಯುತ್ ದರ ಹೆಚ್ಚಳ ಜಾರಿ ಆದೇಶವನ್ನು ಕೂಡಲೇ ಮರುಪರಿಶೀಲಿಸಿ ವ್ಯಾಪಾರಸ್ಥರಿಗೆ, ಉದ್ಯಮದಾರರಿಗೆ ನ್ಯಾಯ ದೊರಕಿಸಿಕೊಡಬೇಕು. ವ್ಯಾಪಾರಸ್ಥರು ಮತ್ತು ಕೈಗಾರಿಕೊದ್ಯಮಿಗಳ ಮನವಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸರ್ಕಾಕ್ಕೆ ಎಚ್ಚರಿಸಿ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ವಿಜಯನಗರ ಜಿಲ್ಲಾ ವಾಣಿಜ್ಯ ಕೈಗಾರಿಕೋಧ್ಯಮ ಸಂಘದ ಕಾರ್ಯದರ್ಶಿ ಕಾಕುಬಾಳ್ ರಾಜೇಂದ್ರ, ಹಿರಿಯ ಉಪಾಧ್ಯಕ್ಷ ಸೈಯದ್ ನಾಜಿಮುದ್ದೀನ್, ಜಂಟಿ ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್, ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಹಕ್‌ಶೇಟ್, ರಾಜೇಶ್ ಕೋರಿ ಶೆಟ್ಟರ್, ಚಂದ್ರಕಾAತ್ ಕಾಮತ್, ಹೊಸಪೇಟೆ ನಗರದ ವಿವಿಧ ವಾಣಿಜ್ಯ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವ್ಯಾಪಾರಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ