December 14, 2024

Hampi times

Kannada News Portal from Vijayanagara

ಕೌಶಲ್ಯ ಇದ್ದವರು ಎಂದೂ ನಿರುದ್ಯೋಗಿಗಳಲ್ಲ: ಕವಿತಾ ಈಶ್ವರ್ ಸಿಂಗ್

 

https://youtu.be/NHc6OMSu0K4?si=SI_K4goOPEgwo6h2

ಸಿಡಾಕ್ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ | ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೌಶಲ್ಯ ಸಹಕಾರಿ

ಹಂಪಿ ಟೈಮ್ಸ್ ಹೊಸಪೇಟೆ:

ಮಹಿಳೆಯರ ಸ್ವಾವಲಂಬಿ ಬದುಕಿಗೆ ಕೌಶಲ್ಯವೆ ಸಹಕಾರಿಯಾಗಲಿದೆ. ಶಿಕ್ಷಣ ಅಲ್ಪವಿದ್ದರೂ ವಿಶಿಷ್ಠ ಕೌಶಲ್ಯ ರೂಢಿಸಿಕೊಂಡವರಿಗೆ ಬೇಡಿಕೆ ಇದ್ದು, ಮಹಿಳೆಯರು ಕೌಶಲ್ಯ ಹೆಚ್ಚಿಸಿಕೊಳ್ಳಲು ದಿನದ ಕೆಲ ಸಮಯವನ್ನಾದರೂ ಮೀಸಲಿಡಬೇಕು ಎಂದು ಸಂಪನ್ಮೂಲ ವ್ಯಕ್ತಿ ವಿನೋದಕುಮಾರ ತಿಳಿಸಿದರು.

ನಗರದ ತಾಯಮ್ಮ ಶಕ್ತಿ ಸಂಘದಲ್ಲಿ  ಕೌಶಲ್ಯ ಅಭಿವೃದ್ಧಿ  ಉದ್ಯಮ ಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಬೆಂಗಳೂರು, ಕರ್ನಾಟಕ ಉದ್ಯಮಶೀಲತೆ ಅಭಿವೃದ್ಧಿ ಕೇಂದ್ರ ವಿಜಯನಗರ, ಹಾಗೂ ಶ್ರೀ ತಾಯಮ್ಮ ಶಕ್ತಿ ಸಂಸ್ಥೆ  ಹೊಸಪೇಟೆ ಇವರ ಸಂಯುಕ್ರಾಶಯದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಬುಧವಾರ ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೊಂದಿದ್ದರೆ ಸಾಲದು ಜೊತೆಗೆ ಕೌಶಲ್ಯ ಬೆಳೆಸಿಕೊಳ್ಳಬೇಕು. ಮಹಿಳೆಯರು ತಮಗೆ ಶಿಕ್ಷಣ ಇಲ್ಲವೆಂದು ಸುಮ್ಮನೆ ಮನೆಯಲ್ಲಿ ಕಾಲ ಕಳೆಯಬಾರದು. ಈ ಭಾಗದಲ್ಲಿ ತಾಯಮ್ಮ ಶಕ್ತಿ ಸಂಘ ಮಹಿಳೆಯರನ್ನು ಸಂಘಟಿಸಿ ಅವರ ಸ್ವಾವಲಂಬಿ ಬದುಕಿಗೆ ಸೂಕ್ತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡು ಮಹಿಳೆಯರಲ್ಲಿ ದುಡಿಮೆಯ ಚೈತನ್ಯ ತುಂಬುತ್ತಿರುವುದು ಶ್ಲಾಘನೀಯ ಎಂದರು.

ಶ್ರೀ ತಾಯಮ್ಮ ಶಕ್ತಿ ಸಂಘ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್  ಅಧ್ಯಕ್ಷತೆವಹಿಸಿ ಮಾತನಾಡಿ, ಮೂರು ದಿನದ ಕಾರ್ಯಾಗಾರದಲ್ಲಿ 60 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದ ಮಹಿಳೆಯರು ನಿರಂತರವಾಗಿ ತಮ್ಮ ಕಲಿಕೆಯಲ್ಲಿ ಅಳವಡಿಸಿಕೊಂಡಲ್ಲಿ ತಮ್ಮ ಬದುಕು ಉಜ್ವಲವಾಗಿಸಿಕೊಳ್ಳಬಹುದು. ಈಗಾಗಲೇ ಅನೇಕ ಮಹಿಳೆಯರಿಗೆ ಸರ್ಕಾರದ ಸಬ್ಸಿಡಿ ಸಾಲ ಸೌಲಭ್ಯದ ಮಾಹಿತಿ ನೀಡಿದ್ದು, ಅವರಲ್ಲಿ ಅನೇಕರು ಸಬ್ಸಿಡಿ ಸಾಲ ಪಡೆದು ಸ್ವ-ಉದ್ಯೋಗಿಗಳಾಗಿದ್ದಾರೆ. ಮಹಿಳೆಯರು ಅಬಲೆಯರಲ್ಲಿ ಸಬಲೆಯರು ಎಂಬುದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಮೂಲಕ ನಿರೂಪಿಸಬೇಕು ಎಂದರು. ಬಳ್ಳಾರಿ ಸಿಡಾಕ್ ನ ಅಧಿಕಾರಿ ಪ್ರಸನ್ನ ಇದ್ದರು.

 

 

 

ಜಾಹೀರಾತು
error: Content is protected !!