October 14, 2024

Hampi times

Kannada News Portal from Vijayanagara

ಮೂವರು ಅಂತರ್ ರಾಜ್ಯ ಕಳ್ಳರ ಬಂಧನ , 9 ಲಕ್ಷ ರೂ, ಬೈಕ್ ವಶ

 

https://youtu.be/NHc6OMSu0K4?si=SI_K4goOPEgwo6h2

 

 

ಬ್ಯಾಂಕ್ ಗ್ರಾಹಕರೆ ಕಳ್ಳರ ಟಾರ್ಗೇಟ್  | ಪೊಲೀಸರ ಬಲೆಗೆ ಬಿದ್ದ ಕಳ್ಳರು  | ನಾಲ್ಕು ಪ್ರಕರಣಗಳು ಪತ್ತೆ
ಹಂಪಿ ಟೈಮ್ಸ್ ಹರಪನಹಳ್ಳಿ :
ನಗರದಲ್ಲಿ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ ಗ್ರಾಹಕರನ್ನೆ ಟಾರ್ಗೆಟ್ ಮಾಡಿಕೊಂಡು ಗ್ರಾಹಕರ ಗಮನ ಬೇರೆಡೆ ಸೆಳೆದು ಬೈಕ್ ನಲ್ಲಿಟ್ಟಿದ್ದ ಹಣ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿತ ಕಳ್ಳರನ್ನು ಹರಪನಹಳ್ಳಿ ಪೊಲೀಸರು ಆಂಧ್ರದ ಚಿತ್ತೂರಿನಲ್ಲಿ  ಬಂಧಿಸಿ, 9 ಲಕ್ಷ ರೂ ನಗದು, ಎರಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿತರು ಬ್ಯಾಂಕಿನ ಹೊರಗೆ ನಿಂತು ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬಂದ ಗ್ರಾಹಕರ  ಹಣವನ್ನು ಮೋಟರ್ ಸೈಕಲ್ ನ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗುವವರನ್ನು ಹಿಂಬಾಲಿಸಿ ಸ್ವಲ್ಪ ದೂರದ ನಂತರ ಅವರ ಗಮನವನ್ನು ಬೇರೆಡೇ ಸೆಳೆದು ಮೋಟರ್ ಸೈಕಲ್ ನಲ್ಲಿ ಇಟ್ಟಿರುವ ಹಣವನ್ನು ಕಳ್ಳತನ ಮಾಡುತ್ತಿದ್ದರು.  2022 ಅಕ್ಟೋಬರ್ ತಿಂಗಳಿಂದ ಮತ್ತು 2023ರ ಸಾಲಿನಲ್ಲಿ  ಹರಪನಹಳ್ಳಿ ಪಟ್ಟಣದಲ್ಲಿ ಸೇರಿದಂತೆ ಒಟ್ಟು ನಾಲ್ಕು ಕಡೆ  ಇದೇ ರೀತಿ ಕಳ್ಳತನ ಮಾಡಿರುವುದಾಗಿ ಒಪ್ಪಿರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚಿಗೆ ಹರಪನಹಳ್ಳಿ ಪಟ್ಟಣದಲ್ಲಿ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಬರುತ್ತಿದ್ದ ಗ್ರಾಹಕರನ್ನು ಹಿಂಬಾಲಿಸಿ ಅವರ ಗಮನ ಬೇರೆಡೆ ಸೆಳೆದು ಗ್ರಾಹಕರಿಂದ ಹಣ ಕಳ್ಳತನ ಮಾಡುತ್ತಿದ್ದ ಪ್ರಕರಣಗಳು ವರದಿಯಾಗಿದ್ದು, ಈ ಸಂಬಂಧ ಆರೋಪಿತರನ್ನು ಪತ್ತೆ ಮಾಡಲು ವಿಜಯನಗರ ಎಸ್ಪಿ ಶ್ರೀಹರಿ ಬಾಬು ಅವರ ಸೂಚನೆಯಂತೆ ಡಿ ವೈ ಎಸ್ ಪಿ ಹಾಲಮೂರ್ತಿ ರಾವ್ ಹರಪನಹಳ್ಳಿ ಉಪವಿಭಾಗ ಹಾಗೂ ಮಾಲತೇಶ್ ಎಂ ಕೋನಬೇವ .ಡಿ ವೈ ಎಸ್ ಪಿ .             ಡಿ ಸಿ ಆರ್ ಬಿ ವಿಭಾಗ ರವರ ಮಾರ್ಗದರ್ಶನದಲ್ಲಿ ಹರಪನಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಎಂ ಕಮ್ಮಾರ್ ರವರ ನೇತೃತ್ವದಲ್ಲಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಾಂತ ಮೂರ್ತಿ ಹಾಗೂ ಸಿಬ್ಬಂದಿಯವರಾದ ರವಿ ದಾದಾಪುರ ಪಿ ಸಿ 321. ಆನಂದ್ ಪಿಸಿ 1111. ಮನೋಹರ್ ಪಾಟೀಲ್ ಪಿ ಸಿ 152. ವಾಸುದೇವ ನಾಯಕ ಬಿ ಸಿ 226 .ಕುಮಾರ್ ನಾಯಕ್ ಸಿ ಡಿ ಆರ್ ವಿಭಾಗ, ಜಿಲ್ಲಾ ಪೊಲೀಸ್ ಕಚೇರಿ ವಿಜಯನಗರ ರವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಆಂಧ್ರದ ಚಿತ್ತೂರು ಜಿಲ್ಲೆಯಲ್ಲಿ ಕಳ್ಳರನ್ನು ಪತ್ತೆಮಾಡಿ ವಶಕ್ಕೆ ಪಡೆದಿದ್ದಾರೆ.  ಪೊಲೀಸ್ ತಂಡದ ಕಾರ್ಯವನ್ನು  ಎಸ್ಪಿ ಶ್ರೀ ಹರಿಬಾಬು ಶ್ಲಾಘಿಸಿದ್ದಾರೆ.

 

 

ಜಾಹೀರಾತು
error: Content is protected !!