December 14, 2024

Hampi times

Kannada News Portal from Vijayanagara

ಟಿಬಿ ಬೋರ್ಡ್‌ ಅಧಿಕಾರಿಗಳ ವಿರುದ್ಧ ಕಿಡಿ

 

https://youtu.be/NHc6OMSu0K4?si=SI_K4goOPEgwo6h2

ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸರ್ಕಾರಕ್ಕೆ ಒತ್ತಾಯ
ಹಂಪಿ ಟೈಮ್ಸ್ ಹೊಸಪೇಟೆ

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ಮೂರು ರಾಜ್ಯದ ಜೀವನಾಡಿಯಾದ ತುಂಗಭದ್ರ ಜಲಾಶಯದಲ್ಲಿ ಹೂಳಿನ ಸಾಮರ್ಥ್ಯ ಹೆಚ್ಚಿದ್ದು, ನೀರು ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಇದಕ್ಕೆ ಪರಿಹಾರ ಮಾರ್ಗ ಕಂಡುಕೊಂಡು ಜಲಾಶಯದಲ್ಲಿ ನೀರು ಸಂಗ್ರಹ ಪ್ರಮಾಣ ಹೆಚ್ಚಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸರ್ಕಾರವನ್ನು ಒತ್ತಾಯಿಸಿದರು.

ನಗರದ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1949ರಲ್ಲಿ ನಿರ್ಮಾಣ ಆರಂಭಗೊAಡು 1953ರಲ್ಲಿ ಬಳಕೆಗೆ ಲಭ್ಯವಾದ ತುಂಗಭದ್ರ ಜಲಾಶಯ ಪ್ರಸ್ತುತ ಹೂಳು ತುಂಬಿ ನೀರು ಸಂಗ್ರಹದ ಸಾಮರ್ಥ್ಯ ಕುಸಿದಿದೆ. ಇದರಿಂದ ನದಿಗೆ ಹರಿಯುವ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಅನ್ಯ ರಾಜ್ಯಕ್ಕೆ ಇದರ ಲಾಭವಾಗುತ್ತಿದೆ. 130 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 30 ಟಿಎಂಸಿ ಹೂಳು ತುಂಬಿದೆ. ತಜ್ಞರ ಪ್ರಕಾರ ಹೂಳು ತೆಗೆಯುವುದು ಕಷ್ಟಸಾಧ್ಯ ಎಂದು ಹೇಳಲಾಗುತ್ತಿದೆ. ಜಲಾಶಯದಿಂದ ಹೊರ ತೆಗೆಯುವ ಹೂಳು ಸಾಗಣೆ ಹಾಗೂ ಅದನ್ನು ಎಲ್ಲಿಗೆ ತೆರವುಗೊಳಿಸುವುದು ಎಂಬ ಸಮಸ್ಯೆ ಕೇಳಿ ಬರುತ್ತಿದೆ. ಜೆಸಿಬಿ ಮೂಲಕ ಹೂಳು ತೆಗೆದುಕೊಟ್ಟರೆ ಟ್ರಾö್ಯಕ್ಟರ್, ಲಾರಿ ಮೂಲಕ ಈ ಭಾಗದ ರೈತರು ತಮ್ಮ ಹೊಲಗಳಿಗೆ ಸಾಗಿಸಿಕೊಳ್ಳುವ ಒಂದು ವಿಚಾರವೂ ಪರಿಗಣಿಸಬಹುದಾಗಿದೆ. ಆದರೆ, ಇದೆಲ್ಲಕ್ಕಿಂತ ಸಮನಾಂತರ ಜಲಾಶಯ ನಿರ್ಮಾಣ ಸೂಕ್ತ ಎಂದರು.

ಈ ಹಿಂದೆ ಕಾಂಗ್ರೆಸ್ ಆಡಳಿತ ಸಂದರ್ಭ ಕನಕಗಿರಿ ತಾಲೂಕಿನ ನವಲಿ ಬಳಿ ಪರ್ಯಾಯ ಜಲಾಶಯ ನಿರ್ಮಾಣಕ್ಕೆ ಚಿಂತಿಸಲಾಗಿದ್ದು, ಡಿಪಿಆರ್ ಮಾಡಲಾಗಿತ್ತು. ಅಲ್ಲದೇ, ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿಯವರು ನವಲಿ ಜಲಾಶಯಕ್ಕಾಗಿ ಬಜೆಟ್‌ನಲ್ಲಿ 250 ಕೋಟಿ ರೂ.ತೆಗೆದಿರಿಸಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಮಳೆಗಾಲದಲ್ಲಿ ಜಲಾಶಯದಿಂದ ವ್ಯರ್ಥವಾಗಿ ಹರಿಯುವ 200 ಟಿಎಂಸಿ ನೀರನ್ನು ತಡೆದು ಸಂಗ್ರಹಿಸಿದರೆ, ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗುತ್ತದೆ. ಈ ನಿಟ್ಟಿನಲ್ಲಿ ಈ ಬಗ್ಗೆ ಆಸಕ್ತಿ ವಹಿಸುವಂತೆ ರಾಜ್ಯ ಸರ್ಕಾರ ಹಾಗೂ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರಗೆ ಒತ್ತಾಯಿಸುವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿನಾಯಕ ಶೆಟ್ಟರ್, ಕಾಂಗ್ರೆಸ್ ಮುಖಂಡ ಗುಜ್ಜಲ ನಾಗರಾಜ, ಪಿ.ಬಾಬು, ಸಾಮಾಜಿಕ ಜಾಲತಾಣ ವಿಭಾಗೀಯ ನಿರ್ವಾಹಕ ನಿಂಬಗಲ್ ರಾಮಕೃಷ್ಣ ಹಾಗೂ ಇತರರಿದ್ದರು.

ಬೋರ್ಡ್ ಅಧಿಕಾರಗಳ ಉದಾಸೀನಕ್ಕೆ ಅಸಮಾಧಾನ
ತುಂಗಭದ್ರ ಜಲಾಶಯ ಸ್ಥಳೀಯವಾಗಿದ್ದರೂ ಇಲ್ಲಿನ ಟಿಬಿ ಬೋರ್ಡ್ ಅಧಿಕಾರಿಗಳ ವರ್ಗ ಅಸಹಕಾರ ತೋರುತ್ತಿದ್ದಾರೆ. ಜಲಾಶಯ ಪ್ರಗತಿಯ ಬಗ್ಗೆ ಆಸಕ್ತಿ ಇಲ್ಲ. ತುಂಬಿದ ಹೂಳಿನಿಂದಾಗಿ ನೀರು ನದಿ ಮೂಲಕ ವ್ಯರ್ಥವಾಗುತ್ತಿದ್ದರೂ ಮೌನವಾಗಿದ್ದಾರೆೆ. ನೀರು ವ್ಯರ್ಥವಾಗುವುದನ್ನು ತಡೆದು ಅದರ ಸದ್ಬಳಕೆಗೆ ಇಲ್ಲಿನ ಬೋರ್ಡ್ ಅಧಿಕಾರಿಗಳು ಆಲೋಚಿಸುತ್ತಿಲ್ಲ. ಜಲಾಶಯ ಮೂರು ರಾಜ್ಯಗಳ ಸಂಯುಕ್ತ ಒಡೆತನದಲ್ಲಿದ್ದು, ನಿರ್ಣಯಗಳು ತೆಗೆದುಕೊಳ್ಳಲು ತೊಡಕುಗಳು ಉಂಟಾಗುತ್ತಿವೆ. ಈ ನಿಟ್ಟಿನಲ್ಲಿ ಮೊದಲು ಇಲ್ಲಿನ ಅಧಿಕಾರಿಗಳು ಇಚ್ಛಾಶಕ್ತಿ ತೋರಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ ಉಳಿದೆರೆಡು ರಾಜ್ಯಗಳ ಜತೆ ಸಮಾಲೋಚಿಸಿ ಒಮ್ಮತದ ನಿರ್ಣಯಕ್ಕೆ ಬರಬೇಕು ಎಂದು ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.

ಅನುಚಿತ ವರ್ತನೆಗೆ ಕ್ರಮ ಅಗತ್ಯ
ಟಿಬಿ ಬೋರ್ಡ್ ಅಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿ.ಎಸ್.ಉಗ್ರಪ್ಪ ತಾಕೀತು ಮಾಡಿದರು. ಪರ್ತಕರ್ತರ ಪ್ರಶ್ನೆವೊಂದಕ್ಕೆ ಉತ್ತರಿಸಿದ ಅವರು, ತುಂಗಭದ್ರ ಜಲಾಶಯ ವೀಕ್ಷಕರು, ವರದಿಗೆ ತೆರಳುವ ಪತ್ರಕರ್ತರು ಸೇರಿದಂತೆ ಯಾವುದೇ ಸಾಮಾನ್ಯ ವ್ಯಕ್ತಿಯಾಗಿದ್ದರೂ ಅವರನ್ನು ಮಂಡಳಿ ಹಾಗೂ ಸಿಬ್ಬಂದಿ ಗೌರವಯುತವಾಗಿ ನೋಡಿಕೊಳ್ಳಬೇಕು. ಗೂಂಡಾ ಸಂಸ್ಕೃತಿ ಒಳ್ಳೆಯದಲ್ಲ. ಈ ಬಗ್ಗೆ ಪೊಲೀಸರು ಜಾಗೃತ ವಹಿಸಬೇಕು ಎಂದರು.

ಕೇಂದ್ರ ರೈಲ್ವೆ ಸಚಿವ ರಾಜೀನಾಮೆ ನೀಡಲಿ
ಓಡಿಶಾದಲ್ಲಿ ತ್ರಿವಳಿ ರೈಲ್ವೆ ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದÀರು. ಘೋರ ಅಪಘಾತ ನಡೆದು ಮರ‍್ನಾಲ್ಕು ದಿನಗಳು ಕಳೆದರೂ ಈವರೆಗೂ ದುರಂತಕ್ಕೆ ಕಾರಣ ಪತ್ತೆಯಾಗಿಲ್ಲ. ಅಲ್ಲದೇ, ಇಷ್ಟು ಸಾವು ನೋವಿಗೆ ಕಾರಣವಾದರೂ ರೈಲ್ವೆ ಸಚಿವರು ರಾಜೀನಾಮೆ ನೀಡದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದ ಅವರು, ರೈಲ್ವೆ ದುರಂತಗಳಿಗೆ ಸಂಬಂಧಿಸಿದಂತೆ ಲಾಲ್ ಬಹದ್ದೂರ್ ಶಾಸ್ತ್ರೀಯವರು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಸ್ಮರಿಸಿದರು.

ರಪ್ತಿನಲ್ಲಿ ಬಿಜೆಪಿಗರದ್ದೇ ಮೇಲುಗೈ
ಗೋಹತ್ಯೆ ಕಾಯ್ದೆ ನಿಷೇಧ ಬಗ್ಗೆ ಮಾತನಾಡುವ ಬಿಜೆಪಿ ಇದೊಂದು ರಾಜಕೀಯ ಭಾವನಾತ್ಮಕ ವಿಷಯವಾಗಿ ಸದಾ ಜೀವಂತ ಇರಿಸಲು ಪ್ರಯತ್ನಿಸುತ್ತಿದೆ ಎಂದು ಉಗ್ರಪ್ಪ ಉಗ್ರವಾಗಿ ನುಡಿದರು. 1964ರಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಅವತ್ತು ಇಲ್ಲದ ಸಮಸ್ಯೆ ಇವತ್ತು ಯಾಕೆ? ಎಂದ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿ ಮುಖಂಡರೊಬ್ಬರು ಹೆಚ್ಚು ಸಂಖ್ಯೆಯಲ್ಲಿ ವಿದೇಶಕ್ಕೆ ಗೋಮಾಂಸ ರಪ್ತು ಮಾಡುತ್ತಾರೆ ಎಂದು ಆರೋಪಿಸಿದರು.

 

 

ಜಾಹೀರಾತು
error: Content is protected !!