March 15, 2025

Hampi times

Kannada News Portal from Vijayanagara

ಜನರ ಗಮನಸೆಳೆದ ಜೋಡೆತ್ತುಗಳ ಮೆರವಣಿಗೆ

 

https://youtu.be/NHc6OMSu0K4?si=SI_K4goOPEgwo6h2

 

ಗಂಗಾಪರಮೇಶ್ವರಿ ಜಯಂತ್ಯೋತ್ಸವ ಅದ್ದೂರಿ
ಹಂಪಿ ಟೈಮ್ಸ್ ಹೊಸಪೇಟೆ:

ನಗರದ ಗಂಗಾಮತ ಸಮಾಜದ ವತಿಯಿಂದ  ಹಮ್ಮಿಕೊಂಡಿದ್ದ ಗಂಗಾಪರಮೇಶ್ವರಿ ಜಯಂತೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು.

ಅಂದು ಮುಂಜಾನೆ ತುಂಗಭದ್ರಾ ನದಿಗೆ ಪೂಜೆ ಸಲ್ಲಿಸಿ, ನಂತರ ಸಣ್ಣಕ್ಕಿ ವಿರಭದ್ರೇಶ್ವರ ದೇವಸ್ಥಾನದಿಂದ ಗಂಗಾಮಾತೆಯ ಭಾವಚಿತ್ರದ ಮೆರವಣಿಗೆಯ ಜೊತೆಗೆ ಜೋಡೆತ್ತುಗಳು ಹಾಗೂ ಮೂರು ನವ ವಧುವರರ ಮೆರವಣಿಗೆ ನಗರದ ಪ್ರಮುಖದ ಬೀದಿಗಳಲ್ಲಿ ಸಾಗಿ, ಶ್ರೀ ಗಾಳೆಮ್ಮ ಶಂಕ್ರಮ್ಮ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು. ಮೂರು ಜೋಡಿ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಸಮಾಜದ ಅಧ್ಯಕ್ಷ ಎಸ್.ಗಾಳೆಪ್ಪನವರು ಮಾತನಾಡಿ, ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಸಮಾಜದ ಪ್ರತಿಯೊಬ್ಬ ಉತ್ತಮ ಅಂಕಗಳಿಕೆಯೊAದಿಗೆ ಪ್ರತಿಭಾ ಪುರಸ್ಕಾರಕ್ಕೆ ಭಾಜನರಾಗುವಂತೆ ಅಭ್ಯಾಸ ಮಾಡಬೇಕು ಎಂದರು.


ರಾಜ್ಯ ಪ್ರಶಸ್ತಿ ವಿಜೇತೆ ಕುಮಾರಿ ಪಿ.ವರಲಕ್ಷ್ಮೀ ಭರತನಾಟ್ಯ ಪ್ರದರ್ಶಿಸಿದರು. 2023ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಕ್ರಮವಾಗಿ ಕೆ.ಶ್ರೀನಿವಾಸ್, ಕುಮಾರಿ ಎಂ.ಗಾಳೆಮ್ಮ, ಹಾಗೂ ಮಹಾಲಕ್ಷ್ಮೀ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಕುಮಾರಿ ಪದ್ಮಾವತಿ, ಕೆ.ಪಿ.ಸಹನಾ, ಹಾಗೂ ಚಂದ್ರು ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಜಿಲ್ಲಾ ಗೌರವಾಧ್ಯಕ್ಷ ವೈ.ಯಮುನೇಶ್, ನಗರ ಘಟಕದ ಅಧ್ಯಕ್ಷ ಎಸ್.ಗಾಳೆಪ್ಪ, ಉಪಾಧ್ಯಕ್ಷ ಮಡ್ಡಿ ಸಣ್ಣಕ್ಕೆಪ್ಪ, ಮುಖಂಡರಾದ ಮಡ್ಡಿ ಹನುಮಂತಪ್ಪ, ಬಾರಕೇರ ನಾಗರಾಜ, ಕಂಪ್ಲಿ ಹನುಮಂತಪ್ಪ, ಮೇಘನಾಥ, ಮಡ್ಡೇರ ವೆಂಕಪ್ಪ, ಮಡ್ಡಿ ಮಂಜುನಾಥ, ಸುಭಾಷ ಚಂದ್ರ, ಎಸ್.ನಾಗರಾಜ, ಹುಲುಗಪ್ಪ ಇತರರು ಉಪಸ್ಥಿತರಿದ್ದರು.

 

 

 

ಜಾಹೀರಾತು
error: Content is protected !!