https://youtu.be/NHc6OMSu0K4?si=SI_K4goOPEgwo6h2
ಹೊಸಪೇಟೆ-ಬಳ್ಳಾರಿಯಿಂದ ಶ್ರೀಗಳ ದರ್ಶನಕ್ಕೆ ತೆರಳಿದ ಭಕ್ತರು
ಹಂಪಿ ಟೈಮ್ಸ್ ಹೊಸಪೇಟೆ:
ನಗರದ ಶ್ರೀಕೊಟ್ಟೂರು ಸಂಸ್ಥಾನ ಮಠದ ಜಗದ್ಗುರು ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಲೋಕಕಲ್ಯಾಣಾರ್ಥವಾಗಿ ಮತ್ತು ಧರ್ಮ ಜಾಗೃತಿಗಾಗಿ ಮೇ.8 ರಿಂದ ಆರಂಭಿಸಿದ್ದ ಮೌನವ್ರತ ಮೇ 30 ರಂದು ಸಂಪನ್ನಗೊಳ್ಳಲಿದೆ.
ಸಂಡೂರು ತಾಲೂಕಿನ ಯಶವಂತನಗರದ ಆಧ್ಯಾತ್ಮಶರಗಿರಿ ಫಾರ್ಮನಲ್ಲಿ ಆರಂಭಗೊಂಡ ಶ್ರೀಗಳ ಮೌನವ್ರತ, ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠ ಹಾಲಕೆರೆಯಲ್ಲಿ ಮಂಗಲಗೊಳ್ಳಲಿದೆ. ಹಾಲಕೆರೆಯಲ್ಲಿ ನಡೆಯುವ ಪೂಜ್ಯರ ಮೌನ ಅನುಷ್ಠಾನದ ಮಂಗಳ ಕಾರ್ಯಕ್ರಮಕ್ಕೆ ಹೊಸಪೇಟೆ ಮತ್ತು ಬಳ್ಳಾರಿ ಸೇರಿದಂತೆ ನಾಡಿನ ವಿವಿಧೆಡೆಗಳಿಂದ ಇರುವ ಭಕ್ತರು ಶ್ರೀಗಳ ದರ್ಶನಕ್ಕೆ ತೆರಳುತ್ತಿದ್ದಾರೆ.
ವೀರೈಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣಸ್ವಾಮಿ, ಹಿರಿಯ ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸ ರೆಡ್ಡಿ, ಜಿಲ್ಲಾಧ್ಯಕ್ಷ ಎಲ್.ಬಸವರಾಜ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ, ಮುಖಂಡರಾದ ಚಿದಾನಂದ, ರಾಜಶೇಖರ, ವೀರಶೈವ ಲಿಂಗಾಯತ ಸಮಾಜದ ಮಹಿಳಾ ಘಟಕದ ಬಳ್ಳಾರಿ-ವಿಜಯನಗರ ಜಿಲ್ಲಾಧ್ಯಕ್ಷೆ ದಮ್ಮೂರು ಶಶಿಕಲಾ ನಾಗರಾಜ, ರಾಜ್ಯ ಸಂಚಾಲಕಿ ಸುಮಾಸುರೇಶ, ಘಟಕದ ಸದಸ್ಯರಾದ ರತ್ನಗೋಗಿ, ಪುಷ್ಪ ವಿಜಯಕುಮಾರ, ರತ್ನ ಚಿದಾನಂದ, ವಸಂತಲಕ್ಷ್ಮೀ, ಸ್ನೇಹ, ಸಂಗಮ್ಮ, ಮಮತಾ, ಅನುಶ, ಪುಷ್ಪ ಮಲ್ಲಿಕಾರ್ಜುನ, ವಿಶಾಲಾಕ್ಷಮ್ಮ, ಕೆ.ಈರಮ್ಮ ಸೇರಿದಂತೆ ಇತರರು ಮಂಗಲ ಕಾರ್ಯಕ್ರಮಕ್ಕೆ ಬಸ್‌ಗಳಲ್ಲಿ ತೆರಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಬಳ್ಳಾರಿ ಜಿಲ್ಲಾ ಘಟಕ ಮತ್ತು ಶ್ರೀ ಕೊಟ್ಟೂರುಸ್ವಾಮಿ ಮಠದದಿಂದ ತಲಾ ಒಂದು ಬಸ್ ಬಿಡಲಾಗಿದೆ. ಅನೇಕ ಭಕ್ತರು ತಮ್ಮ ಭಕ್ತಿಸೇವೆ ಸಮರ್ಪಿಸಲು ಖಾಸಗಿ ವಾಹನಗಳಲ್ಲೂ ತೆರಳಿದ್ದಾರೆ ಎಂದು ವೀ.ಲಿಂ.ಸಮಾಜದ ಅಧ್ಯಕ್ಷ ಶರಣಸ್ವಾಮಿ ತಿಳಿಸಿದ್ದಾರೆ.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ