December 14, 2024

Hampi times

Kannada News Portal from Vijayanagara

ದ್ರೌಪದಿ ಮುರ್ಮು ಸಂಸತ್ ಭವನ ಉದ್ಘಾಟಿಸಲಿ: ಕರುಣಾನಿಧಿ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ಬುಡಕಟ್ಟು ಮಹಿಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಭವನ ಉದ್ಘಾಟನೆಗೆ ಆಹ್ವಾನಿಸದಿರುವುದು ಬುಡಕಟ್ಟು ಸಮುದಾಯಕ್ಕೆ ಮಾತ್ರವಲ್ಲದೆ ಇಡೀ ಮಹಿಳಾ ಕುಲಕ್ಕೆ, ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ದ್ರೌಪದಿ ಮುರ್ಮು ಅವರಿಂದಲೇ ಸಂಸತ್ ಭವನ ಉದ್ಘಾಟನೆ ಆಗಬೇಕು ಎಂದು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಮುಖಂಡ ಎ.ಕರುಣಾನಿಧಿ ಆಗ್ರಹಿಸಿದರು.

ನಗರದ ಸಂವಿಧಾನ ರಕ್ಷಣಾ ವೇದಿಕೆ, ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್ ಮುಖಂಡರು ಸೇರಿದಂತೆ ಎಡಪಕ್ಷಗಳು ನಗರದ ಅಂಬೇಡ್ಕರ್ ವೃತ್ತದಿಂದ ಪುನೀತ್ ರಾಜಕುಮಾರ್ ವೃತ್ತದವರೆಗೂ ಶನಿವಾರ ಬೆಳಿಗ್ಗೆ ಕೇಂದ್ರ ಸರ್ಕಾರದ ನಡೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸೆಂಗಲ್ ಎಂಬ ರಾಜದಂಡವು ಪ್ರಜಾಪ್ರಭುತ್ವ ಸಂಕೇತವಲ್ಲ, ಸಂವಿಧಾನ ಪ್ರಜಾಪ್ರಭುತ್ವದ ಸಂಕೇತ. ನೆಹರು ಅವರು ಸ್ವತಂತ್ರ ಬಂದ ನಂತರ ಅದನ್ನು ಮ್ಯೂಸಿಯಂನಲ್ಲಿ ಇಟ್ಟಿದ್ದರು ಆದರೆ ಇವರು ಅದನ್ನು ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಸರ್ಕಾರದ ಇಂತಹ ಮನುವಾದಿ ಮತ್ತು ಅಪ್ರಜಾಪ್ರಭುತ್ವ ಧೋರಣೆಯನ್ನು ಒಕ್ಕರಲಿನಿಂದ ಖಂಡಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮುಖಂಡರಾದ ಭಾಗ್ಯಲಕ್ಷ್ಮಿ ಬರಾಡೆ ಮಾತನಾಡಿ, ಪರಿಶಿಷ್ಟ ಪಂಗಡದ ಮಹಿಳೆಯನ್ನು ನಾವು ರಾಷ್ಟ್ರಪತಿಯನ್ನಾಗಿ ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಕೇಂದ್ರ ಸರಕಾರವು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮಹಿಳೆ, ವಿಧವೆ, ದಲಿತೆ ಎಂಬ ಕಾರಣಕ್ಕೋ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿಲ್ಲ ಎಂದು ಆರೋಪಿಸಿದರು. ಭೇಟಿ ಬಚಾವ್ ಭೇಟಿ ಪಡಾವೋ ಎಂದು ಹೇಳುವ ಇದೇ ಸರಕಾರ ಮಹಿಳಾ ಆಟಗಾರ್ತಿಯರ ಪ್ರತಿಭಟನೆಯನ್ನು ನಿರ್ಲಕ್ಷಿಸುತ್ತಿದೆ. ಆರ್‌ಎಸ್‌ಎಸ್ ಪ್ರೇರಿತ ಮನುವಾದಿ ಬುದ್ಧಿಯನ್ನು ಖಂಡಿಸುತ್ತೇವೆ ಹಾಗೆಯೇ ಕೇಂದ್ರ ಚುನಾವಣೆಯಲ್ಲಿ ಈಬಾರಿ ಬಿಜೆಪಿಯನ್ನು ಸೋಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ಮರಡಿ ಜಂಬಯ್ಯ ನಾಯಕ್, ಕೂಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಭಾಸ್ಕರ್ ರೆಡ್ಡಿ, ಇತರರು ಮಾತನಾಡಿದರು. ದಲಿತ ಸಂಘಟನೆಯ ಮುಖಂಡ ಸೋಮಶೇಖರ್ ಬಣ್ಣದಮನೆ, ಸ್ಪೂರ್ತಿ ವೇದಿಕೆಯ ಬಿಸಾಟಿ ತಾಯಪ್ಪ ನಾಯಕ್, ಡಿವೈಎಫ್‌ಐನ ರಾಜ್ಯ ಉಪಾಧ್ಯಕ್ಷÀ ಬಿಸಾಟಿ ಮಹೇಶ್, ಚಿಂತಕ ಕೆ ರಮೇಶ್ ಇತರರು ಇದ್ದರು.

 

 

ಜಾಹೀರಾತು
error: Content is protected !!