https://youtu.be/NHc6OMSu0K4?si=SI_K4goOPEgwo6h2
ಕನ್ನಿಹಳ್ಳಿ ಬೀರಲಿಂಗೇಶ್ವರ ನೂತನ ದೇಗುಲ ಲೋಕಾರ್ಪಣೆ | ದೇಗುಲದ ಪಾವಿತ್ರ್ಯತೆ ಕಾಪಾಡಿ
ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ:
ಅಭಿವೃದ್ಧಿಯೇ ನನ್ನ ಧ್ಯೇಯ, ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯಗತ್ಯ. ರಾಜಕೀಯವನ್ನು ಚುನಾವಣೆಗೆ ಮಾತ್ರ ಸಿಮಿತಗೊಳಿಸಿ, ಜನರ ಸಂಕಷ್ಟಗಳಿಗೆ ಸ್ಪಂದಿಸಲು ಪಕ್ಷಾತೀತವಾಗಿ ಕೈಜೋಡಿಸಬೇಕು ಎಂದು ಶಾಸಕ ನೇಮಿರಾಜ ನಾಯ್ಕ ಹೇಳಿದರು.
ತಾಲೂಕಿನ ಕನ್ನಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸೇವಾ ಟ್ರಸ್ಟ್ನಿಂದ ಗುರುವಾರ ಏರ್ಪಡಿಸಿದ್ದ ಬೀರಲಿಂಗೇಶ್ವರ ನೂತನ ದೇಗುಲ ಲೋಕಾರ್ಪಣೆ ಹಾಗೂ ಬೀರಲಿಂಗೇಶ್ವರ ಮೂರ್ತಿಯ ಪ್ರಾಣಪ್ರತಿಷ್ಟಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಬಡವರಿಗೆ ನಿವೇಶನ ಸಹಿತ ವಸತಿ ಸೌಕರ್ಯ, ನೀರಾವರಿ ಯೋಜನೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಯಾರಲ್ಲೂ ಪಕ್ಷಭೇಧವನ್ನು ಕಾಣದೇ ಕ್ಷೇತ್ರದ ಜನರ ನಿರೀಕ್ಷೆಗೆ ತಕ್ಕಂತೆ ಸೇವೆ ಮಾಡುವೆ ಎಂದರು.
ತಿಂತಿಣಿ ಬ್ರಿಡ್ಜ್ ಕನಕ ಗುರುಪೀಠದ ಶ್ರೀಸಿದ್ದರಾಮನಂದಪುರಿ ಸ್ವಾಮೀಜಿ ಮಾತನಾಡಿ, ಕನ್ನಿಹಳ್ಳಿ ಗ್ರಾಮದಲ್ಲಿ ಬೀರಲಿಂಗೇಶ್ವರ ಸ್ವಾಮಿಯನ್ನು ಪ್ರತಿಷ್ಟಾಪಿಸಲಾಗಿದೆ. ಗ್ರಾಮಸ್ಥರು ಪ್ರತಿ ಭಾನುವಾರ ಮಾಂಸಹಾರ ಹಾಗೂ ದುಶ್ಚಟಗಳಿಂದ ದೂರವಿರಬೇಕು. ಹಾಲುಮತಸ್ಥರು ಮೂರ್ತಿ ಆರಾಧಕರಲ್ಲ. ಭಗವಂತನ ಜತೆಗೆ ನೇರವಾಗಿ ಭಕ್ತರ ಸಂಪರ್ಕವಿರಬೇಕು. ಭ್ರಷ್ಟಾಚಾರ ಮಾಡಿ ಗಳಿಸಿದ ಹಣವನ್ನು ದೇವರಿಗೆ ಕಾಣಿಕೆ ನೀಡಿದರೇ ಮೋಕ್ಷ ದೊರೆಯುವುದಿಲ್ಲ. ಅಂತ ಭಕ್ತರೊಂದಿಗೆ ಮಧ್ಯಸ್ಥಿಕೆ ವಹಿಸುವ ಅರ್ಚಕರು, ಮಠಾಧೀಶರು ಧರ್ಮ ವಂಚಕರಿದ್ದAತೆ. ದೇಗುಲದ ಆವರಣದಲ್ಲಿ ಪಾವಿತ್ರ್ಯತೆ ಕಾಪಾಡಿಕೊಳ್ಳಿ ಎಂದರು.
ಉತ್ತಂಗಿ ಮಠದ ಸೋಮಶಂಕರ ಸ್ವಾಮೀಜಿ ಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದರು. ಕುರುಬರ ಸಂಘದ ಜಿಲ್ಲಾ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ, ಪುರಸಭೆ ಸದಸ್ಯ ಬಿ.ಡಿ.ಗಂಗಾಧರ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಕನ್ನಿಹಳ್ಳಿ ಚಂದ್ರಶೇಖರ್, ಕೆ.ಬಿ.ಫಕ್ಕಿರೆಡ್ಡಿ, ಡಾಬಾ ರಾಮಣ್ಣ, ಕೆ.ಭರಮರೆಡ್ಡಿ, ಬಣಕಾರ ಗೋಣೆಪ್ಪ, ಎ.ಟಿ.ಹನುಮನಗೌಡ, ಮೇಟಿ ಕೋಟೇಪ್ಪ ಅಬ್ದುಲ್ ಗನಿಸಾಬ್, ಮುದೇನೂರು ಚಂದ್ರಪ್ಪ, ಕನ್ನಿಹಳ್ಳಿ ಜಗದೀಶ್, ಕಲ್ಲಟ್ಟಿ ಸಣ್ಣಗೋಣೆಪ್ಪ, ವಸಂತ ಕುಮಾರ್, ಮೇಟಿ ಅಜ್ಜಪ್ಪ, ಮೇಟಿ ಚಿಕ್ಕಪ್ಪ ಇತರರಿದ್ದರು.
More Stories
ಸಂಡೂರು ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು, ಯಾರಿಗೆ ಎಷ್ಟು ಮತ?
ನಾಡಿನ ಕಲೆ, ಸಂಸ್ಕೃತಿ ವಿಶ್ವಮಾನ್ಯವಾಗಿದೆ : ಕಾಂಗ್ರೆಸ್ ಯುವನಾಯಕ ಅಶೋಕ್ ಭೀಮನಾಯ್ಕ ಅಭಿಮತ
ಭಾರತೀಯ ಅಂಚೆ ಇಲಾಖೆಯಿಂದ ರಾಷ್ಟ್ರ ಮಟ್ಟದ ಪತ್ರಲೇಖನ ಸ್ಪರ್ಧೆ : ಅಂಚೆ ಅಧೀಕ್ಷಕರು ಪಿ.ಚಿದಾನಂದ ಹೇಳಿಕೆ