December 14, 2024

Hampi times

Kannada News Portal from Vijayanagara

ಒತ್ತಡದ ಕೋರ್ಸ್ ವಿದ್ಯಾರ್ಥಿಗಳಿಗೆ ಒಲಿಯದು : ಡಿ.ಎಂ.ಮುರಳಿಧರ ಅಭಿಮತ

 

https://youtu.be/NHc6OMSu0K4?si=SI_K4goOPEgwo6h2

ಎಕ್ಸೆಲ್ ಅಕಾಡೆಮಿಕ್ಸ್ ಅರಿವು ಕಾರ್ಯಾಗಾರದಲ್ಲಿ ಡಿ.ಎಂ.ಮುರಳಿಧರ ಅಭಿಮತ
 ಮಾರ್ಗದರ್ಶನ ಇರಲಿ | ವಿಷಯ ಆಯ್ಕೆ ವಿದ್ಯಾರ್ಥಿಗಳಿಗೆ ಬಿಡಿ | ನೀಟ್, ಸಿಇಟಿ , ಜೆಇಇ ಆಯ್ಕೆ ಗೊಂದಲಗಳ ಪರಿಹಾರಕ್ಕೆ ಅರಿವು ಅಗತ್ಯ 

ಹಂಪಿ ಟೈಮ್ಸ್ ಹೊಸಪೇಟೆ:

ಪಿಯುಸಿ ಉತ್ತೀರ್ಣಗೊಂಡ ಅನೇಕ ವಿದ್ಯಾರ್ಥಿಗಳು ನೀಟ್, ಸಿಇಟಿ, ಜೆಇಇ ಪರೀಕ್ಷೆ ಬರೆದ ನಂತರವೂ ಪದವಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವಲ್ಲಿ ಗೊಂದಲಕ್ಕೀಡಾಗುತ್ತಾರೆ. ಭವಿಷ್ಯದಲ್ಲಿ ತಾನು ಏನಾಗಬೇಕೆಂಬುದರ ಬಗ್ಗೆ ಮೊದಲೇ ನಿರ್ಧರಿಸಿಕೊಂಡಿದ್ದರೆ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯ ಎಂದು ಸಂಪನ್ಮೂಲ ವ್ಯಕ್ತಿ ಡಿ.ಎಂ. ಮುರಳಿಧರ ತಿಳಿಸಿದರು.


ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದದಲ್ಲಿ ಬೆಂಗಳೂರಿನ ಎಕ್ಸೆಲ್ ಅಕಾಡೆಮಿವತಿಯಿಂದ ಗುರುವಾರ ಪಿಯುಸಿ ಉತ್ತೀರ್ಣ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ನೀಟ್, ಸಿಇಟಿ, ಜೆಇಇ ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು. ಪಿಯುಸಿ ನಂತರ ವೈದ್ಯಕೀಯ, ಇಂಜಿನೀಯರಿಂಗ್ ಕೋರ್ಸ್ಗಳನ್ನು ಆಯ್ಕೆಮಾಡಿಕೊಳ್ಳಬೇಕೆಂಬ ಕನಸು ಸಹಜ. ಕನಸು ನನಸಾಗಿಸಿಕೊಳ್ಳಲು ನಿರಂತರ ಪರಿಶ್ರಮವೂ ಅಗತ್ಯ. ಮೊದಲ ಬಾರಿಗೆ ಸೀಟ್ ಲಭ್ಯವಾಗದಿದ್ದರೂ ಎಕ್ಸೆಲ್ ಅಕಾಡೆಮಿ ನೀಡುವ ದೀರ್ಘಾವಧಿ ತರಬೇತಿ ಪಡೆದ ಸಾವಿರಾರು ವಿದ್ಯಾರ್ಥಿಗಳು ತಮ್ಮ ಕನಸು ನನಸಾಗಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರೀಕ್ಷಿತ ಕೋರ್ಸ್ ಸಿಗಲಿಲ್ಲವೆಂದು ಹತಾಶೆಯಾಗದೆ, ಪರ್ಯಾಯ ಆಲೋಚಯೆಯನ್ನೂ ಮಾಡದೇ ಇಷ್ಟವಾದ ವಿಷಯವನ್ನೇ ಆಯ್ಕೆ ಮಾಡಿಕೊಂಡು ತರಬೇತಿಯೊಂದಿಗೆ ಸತತ ಅಭ್ಯಾಸ ಮಾಡಿದರೆ ಗುರಿಯನ್ನು ನಿಶ್ಚಿತವಾಗಿ ತಲುಪಬಹುದು ಎಂದರು. ನಂತರ ನಡೆದ ಸಮಾಲೋಚನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿದ್ದ ಕೋರ್ಸ್ ಆಯ್ಕೆ, ಕೌನ್ಸಿಲಿಂಗ್ ಎದುರಿಸುವ ಗೊಂದಲಗಳಿಗೆ ಪರಿಹಾರ ಸೂಚಿಸಿ, ವಿದ್ಯಾರ್ಥಿಗಳ ಆತ್ಮವಿಶ್ವಾಸ, ಆಸಕ್ತಿ ಇಮ್ಮಡಿಗೊಳಿಸಿದರು.


ಎಕ್ಸೆಲ್ ಅಕಾಡೆಮಿಯ ಡೀನ್ ವರಪ್ರಸಾದ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಎಕ್ಸೆಲ್ ಅಕಾಡೆಮಿವತಿಯಿಂದ ರಾಜ್ಯಾದ್ಯಂತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮೇ 24 ರಂದು ಬಳ್ಳಾರಿಯಿಂದ ಆರಂಭಗೊAಡಿದ್ದು, ಎರಡನೆ ದಿನ ವಿಜಯನಗರ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮೇ 26 ರಂದು ಕೊಪ್ಪಳದಲ್ಲಿ ಜರುಗಲಿದ್ದು, ಜುಲೈ 10 ರಂದು ಕೊನೆಗೊಳ್ಳಲಿದೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿದ್ಯಾರ್ಥಿ ದರ್ಶನ್ ಹಿರೇಮಠ್ ನೀಟ್ ದೀರ್ಘಾವಧಿ ಕೋಚಿಂಗ್ ಪಡೆದುಕೊಳ್ಳುವ ಮೂಲಕ 637 ಅಂಕ ಪಡೆದು ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾನೆ. ಬಡತನವಿದ್ದರೂ ಗುರಿ ಮತ್ತು ಛಲ ಇದ್ದರೆ ಅಂದುಕೊಂಡದ್ದನ್ನು ಸಾಧಿಸಬಹುದು ಎಂಬುದಕ್ಕೆ ದರ್ಶನ ಹಿರೇಮಠ ಸಾಕ್ಷಿಯಾಗಿದ್ದಾನೆ. ಎಕ್ಸೆಲ್ ಅಕಾಡೆಮಿಕ್ಸ್ ಅನುಭವಿ ಉಪನ್ಯಾಸಕರ ತಂಡದೊಂದಿಗೆ 15ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಈವರೆಗೂ 6000ಕ್ಕೂ ಅಧಿಕ ವೈದ್ಯಕೀಯ, 15000ಕ್ಕೂ ಅಧಿಕ ಇಂಜಿನೀಯರಿಂಗ್, ಅಗ್ರಿಕಲ್ಚರ್, ವೆಟರ್ನರಿ, ಬಿಎಎಂಸ್ ಸೇರಿದಂತೆ ಒಟ್ಟು 1500ಕ್ಕೂ ಅಧಿಕ ವಿದ್ಯಾರ್ಥಿಗಳು ಉಚಿತ ಸೀಟ್ ಪಡೆದಿದ್ದಾರೆ ಎಂದರು. ತರಬೇತಿ ಮಾಹಿತಿಗಾಗಿ 9741141005, 7676917777 ಸಂಪರ್ಕಿಸಬಹುದು ಎಂದರು.

ಇದೇ ಸಂದರ್ಭದಲ್ಲಿ ವೈದ್ಯಕೀಯ ಸೀಟ್ ಪಡೆದ ಹಗರಿಬೊಮ್ಮನಹಳ್ಳಿಯ ದರ್ಶನ್ ಹಿರಮೇಠ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. 200ಕ್ಕೂ ಅಧಿಕ ವಿದ್ಯಾರ್ಥಿಗಳು, 150ಕ್ಕೂ ಅಧಿಕ ಪೋಷಕರು ನೀಟ್ ಸಿಇಟಿ ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಎಕ್ಸೆಲ್ ಅಕಾಡೆಮಿ ನಿರ್ದೇಶಕ ಕಿರಣ್ ಕುಮಾರ್, ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಪ್ರಭುಲಿಂಗಪ್ಪ ಇದ್ದರು.

 

 

ಜಾಹೀರಾತು
error: Content is protected !!