December 5, 2024

Hampi times

Kannada News Portal from Vijayanagara

60 ವಸಂತ ಪೂರೈಸಿದ ರವಿಶಂಕರಗೆ ಶುಭಾಶಯಗಳ ಮಹಾಪೂರ

 

https://youtu.be/NHc6OMSu0K4?si=SI_K4goOPEgwo6h2

ಪ್ರತಿಫಲಾಪೇಕ್ಷೆ ಇಲ್ಲದ ಸೇವಾಮನೋಭಾವಕ್ಕೆ ಮೆಚ್ಚುಗೆಯ ನುಡಿಗಳು

ಹಂಪಿ ಟೈಮ್ಸ್ ಹೊಸಪೇಟೆ:

ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ, ಸಮಾಜದಲ್ಲಿ ಉನ್ನತಿ ಕಂಡು ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆಯಲ್ಲಿ ತೊಡಗಿರುವ ತಾಲೂಕು ವೀರಶೈವ ಲಿಂಗಾಯತ ಸಮಾಜದ ಪ್ರಧಾನ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾಗಿರುವ ಕೆ.ರವಿಶಂಕರ ಅವರು ಮೇ23 ರಂದು 60 ವಸಂತಗಳನ್ನು ಪೂರೈಸಿದ ಈ ಕ್ಷಣದಲ್ಲಿ ಅವರ ಹುಟ್ಟು ಹಬ್ಬವನ್ನು ಸಮಾಜಬಾಂಧವರು ಅವರೊಂದಿಗೆ ಸಂಭ್ರಮದಿಂದ ಆಚರಿಸುವ ಮೂಲಕ ಅವರ ಜನ್ಮದಿನಕ್ಕೆ ಮೆರಗು ಹೆಚ್ಚಿಸಿದರು.

ನಗರದ ಅಕ್ಕಮಹಾದೇವಿ ಭವನದಲ್ಲಿ ಮಂಗಳವಾರ ಸಮಾಜದ ಹಿರಿಯರು, ಸ್ನೇಹಿತರು, ಸಂಬಂಧಿಕರು ಸೇರಿದಂತೆ ಸಮಾಜದ ಮುಖಂಡರು ಪುಷ್ಪಗುಚ್ಚ ನೀಡಿ, ಸಿಹಿ ತಿನಿಸಿ ಶುಭಹಾರೈಸಿದರು. ಬಡವರ ಕಷ್ಟಕ್ಕೆ ಮಿಡಿಯುವ ಹೃದಯವಂತ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಅನೇಕನೇಕ ಸೇವೆಗಳನ್ನು ತೆರೆಮರೆಯಲ್ಲೆ ಮಾಡಿ ತನ್ನದೇನು ಮಹಾಸೇವೆ ಅಲ್ಲವೆಂಬಂತೆ ಸಾಮಾನ್ಯರಂತೆ ಎಲ್ಲರೊಂದಿಗೆ ಬೆರೆಯುವ ಕೆ.ರವಿಶಂಕರ ಅವರು ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಸೇವಾಮನೋಭಾವ ಬೆಳೆಸಿಕೊಳ್ಳುವವರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಎಚ್.ವಿ.ಶರಣಸ್ವಾಮಿ, ಹಿರಿಯ ಮುಖಂಡರಾದ ಸಾಲಿಸಿದ್ದಯ್ಯಸ್ವಾಮಿ, ಸಾಹಿತಿ ಡಾ.ಮೃತ್ಯುಂಜಯ ರುಮಾಲೆ ಅವರ ಸೇವೆಯನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಾ.ಮಹಾಬಲೇಶ್ವರರೆಡ್ಡಿ, ಬಿ.ಜಿ.ಈಶ್ವರಪ್ಪ, ಸಾಲಿ ಬಸವರಾಜ, ಎಲ್.ಬಸವರಾಜ, ನಗರಸಭೆ ಉಪಾಧ್ಯಕ್ಷ ಎಲ್.ಎಸ್.ಆನಂದ, ಸದಸ್ಯ ಮಂಜುನಾಥ, ಮಧುರಚನ್ನಶಾಸ್ತಿç, ಕೊಟ್ರೇಶ, ರಾಜಶೇಖರ, ಯು.ಎಂ.ಜಗದೀಶ, ಎನ.ಎಂ.ಪಂಪಾಪತಿ, ಕುಮಾರ, ಶರಣಯ್ಯ, ಮೆಟ್ರಿ ಮಲ್ಲಿಕಾರ್ಜುನ, ಶಶಿಧರಸ್ವಾಮಿ, ಚಂದ್ರಶೇಖರ ಸೇರಿದಂತೆ ಅನೇಕರು ಶುಭಕೋರಿದರು. ಹುಟ್ಟು ಹಬ್ಬ ಆಚರಣೆಗೂ ಮುನ್ನ ಕೆ.ರವಿಶಂಕರ ಅವರ ಆತ್ಮೀಯರು ನಗರದ ಕೆಲ ದೇವಸ್ಥಾನಗಳಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿದರು.

 

 

ಜಾಹೀರಾತು
error: Content is protected !!