December 5, 2024

Hampi times

Kannada News Portal from Vijayanagara

ಕಾವ್ಯ ಪ್ರಶಸ್ತಿಗೆ ಪರಶುರಾಮ ಕಲಾಲ್, ಬಿ.ಪೀರ್ ಭಾಷ, ಹುಲಿಕಟ್ಟಿ ಚನ್ನಬಸಪ್ಪ ಆಯ್ಕೆ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:

ಹೊಸಪೇಟೆ ಮತ್ತು ಬಳ್ಳಾರಿಯ ಸಮಾಜ ವಿಜ್ಞಾನ ವೇದಿಕೆ ವತಿಯಿಂದ ನಾಡಿನ ಹಿರಿಯ ಕವಿಗಳು ಮತ್ತು ಸಂಸ್ಕೃತಿ ಚಿಂತಕರಾದ ಎಸ್.ಎಸ್ ಹಿರೇಮಠ್, ಕವಿ ಮತ್ತು ಹೋರಾಟಗಾರ ಹೆಚ್. ಶೇಷಗಿರಿ ರಾವ್ ಇವರುಗಳ ಹೆಸರಿನಲ್ಲಿ ಕೊಡಮಾಡುವ ಕಾವ್ಯ ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ ಪರಶುರಾಮ ಕಲಾಲ್, ಹಿರಿಯ ಚಿಂತಕ ಬಿ.ಪೀರ್ ಭಾಷ, ಹೋರಾಟಗಾರ ಹುಲಿಕಟ್ಟಿ ಚನ್ನಬಸಪ್ಪ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಮುಖ್ಯಸ್ಥ ಪಿ.ಆರ್.ವೆಂಕಟೇಶ ತಿಳಿಸಿದ್ದಾರೆ.

ಹೂವಿನ ಹಡಗಲಿ ಮೂಲದವರಾದ ಹಿರಿಯ ಕವಿ ,ಚಿಂತಕ ಬಿ.ಪೀರ್ ಭಾಷ ಮತ್ತು ಹೊಸಪೇಟೆಯ ಹಿರಿಯ ಕವಿ ,ಪತ್ರಕರ್ತ ಪರಶುರಾಮ್ ಕಲಾಲ್ ಇವರುಗಳಿಗೆ ಎಸ್ ಎಸ್ ಹಿರೇಮಠ್ ಕಾವ್ಯ ಪ್ರಶಸ್ತಿ , ಹರಿಹರ ಮೂಲದ ಹಿರಿಯ ಕವಿ ,ಹೋರಾಟಗಾರ ಹುಲಿಕಟ್ಟಿ ಚನ್ನಬಸಪ್ಪ ಇವರಿಗೆ ಹೆಚ್. ಶೇಷಗಿರಿ ರಾವ್ ಕಾವ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಜೂನ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!