https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ವೀ.ವಿ.ಸಂಘದ ಹೊಸಪೇಟೆ ವಿಜಯನಗರ ಪದವಿಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಅಂಗ್ಲ ಉಪನ್ಯಾಸಕ ಹೆಚ್.ಎಂ. ನಿರಂಜನ್ ನೇಮಕಗೊಂಡಿದ್ದಾರೆ.
ವಿಜಯನಗರ ಕಾಲೇಜಿನಲ್ಲಿ ಇಪ್ಪತ್ತು ವರ್ಷಗಳಿಂದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತಿದ್ದಾರೆ. ಕಳೆದ ವರ್ಷ ಉಪಪ್ರಾಂಶುಪಾಲರಾಗಿ ಬಡ್ತಿ ಹೊಂದಿದ್ದ ಇವರು ಈಗ ಪ್ರಾಂಶುಪಾಲರಾಗಿ ನೇಮಿಸಿರುವುದು ಸೇವಾ ಹಿರಿತನಕ್ಕೆ ಸಂದ ಗೌರವವಾಗಿದೆ.
ಗುರುವಾರ ಬೆಳಿಗ್ಗೆ ಹಂಗಾಮಿ ಪ್ರಾಂಶುಪಾಲರಾದ ಮಲ್ಲಿಕಾರ್ಜುನಗೌಡರು ನೂತನ ಪ್ರಾಂಶುಪಾಲರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿದ್ದ ಕಾಲೇಜಿನ ಅಧ್ಯಕ್ಷ ಅಸುಂಡಿನಾಗರಾಜ್, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿಧ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಶುಭಕೋರಿದರು.
More Stories
ಪುಟ್ಟ ಕನಸು : ಟಿ. ದುರುಗಮ್ಮ
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ