October 14, 2024

Hampi times

Kannada News Portal from Vijayanagara

ಬೇಕಿತ್ತೇ ಹಂಪಿ ಬಡವಿಲಿಂಗಕ್ಕೂ ತಡೆಗೋಡೆ?

 

https://youtu.be/NHc6OMSu0K4?si=SI_K4goOPEgwo6h2

 

 

ಸ್ಮಾರಕ ಪ್ರಿಯರಲ್ಲಿ ಹೆಚ್ಚಿದ ಆತಂಕ | ಪುರಾತತ್ವ ಇಲಾಖೆ ವಿರುದ್ಧ ಆಕ್ರೋಶ

ಹಂಪಿ ಟೈಮ್ಸ್ ಹೊಸಪೇಟೆ

ಹಂಪಿಯಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ಕಾವಲುಗಾರನಂತೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ, ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕಾದ ಕೇಂದ್ರ ಪುರಾತತ್ವ ಇಲಾಖೆಯೇ ಮಾರ್ಗದರ್ಶಿ ನಿಯಮಗಳನ್ನು ಗಾಳಿಗೆ ತೂರಿ ಆವೈಜ್ಞಾನಿಕವಾಗಿ ಹಂಪಿ ಕೋರ್ ಝೋನ್ ನಲ್ಲಿ ಹೊಸ ಕಾಮಗಾರಿಗಳಿಗೆ ಕೈಹಾಕಿದೆ ಎಂದು ಇತಿಹಾಸ ಹಾಗೂ ಸ್ಮಾರಕ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂಪಿಯ ಪ್ರವಾಸಿಗರಿಗೆ, ಭಕ್ತಾಧಿಗಳಿಗೆ ಕುಡಿಯುವ ನೀರು, ವಸತಿ, ಶೌಚಾಲಯ ಸೇರಿದಂತೆ  ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾದ ಗ್ರಾಮಪಂಚಾಯಿತಿ, ಪ್ರವಾಸೋಧ್ಯಮ, ಧಾರ್ಮಿಕ ದತ್ತಿ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕಾರ್ಯಗಳಿಗೆ ಕೇಂದ್ರ ಪುರಾತತ್ವ ಇಲಾಕೆ ಸದಾ ಅಡ್ಡಿಯುಂಟುಮಾಡುತ್ತದೆ. ಸ್ಮಾರಕಗಳ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆಯುಂಟಾಗುವ ಕಾರ್ಯಗಳು ಸಂಬಂಧಿಸಿದ ಇಲಾಖೆಯಿಂದಲೇ ನಡೆಯುತ್ತಿವೆ.  ಹಂಪಿ ಪುರಾತನ ನಗರದ ಮೂಲ ಸ್ವರೂಪಕ್ಕೆ ಭಾರೀ ಪೆಟ್ಟು ನೀಡುವ ರೀತಿಯಲ್ಲಿ ಈಗಾಗಲೇ ಹಂಪಿಯ ಮುಖ್ಯವಾದ ಗುಂಪು ಸ್ಮಾರಕಗಳ ಸುತ್ತಲೂ ಕೆಲ ವರ್ಷಗಳ ಹಿಂದೆ ಹೊಸದಾಗಿ ಕಂಪೌಂಡ್ ಗೋಡೆಯನ್ನು ನಿರ್ಮಿಸಲಾಗಿದೆ.  ಹಂಪಿಯ ಸ್ಮಾರಕಗಳ ಸೌಂದರ್ಯವನ್ನು ಕರೂಪಗೊಳಿಸುವಂತೆ ಇದೀಗ ಬಡವಿ ಲಿಂಗದ ಸುತ್ತಲೂ ಭಾರೀ ಯಂತ್ರಗಳ ಬಳಕೆ ಮಾಡಿ ಕಲ್ಲಿನ ತಡೆಗೋಡೆ ನಿರ್ಮಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹಂಪಿಗೆ ಬರುವ ಪ್ರವಾಸಿಗರು ಬೇಸಿಗೆಯಲ್ಲಿ ಕುಡಿಯುವ ನೀರು, ನೆರಳಿಗೂ ಪರದಾಡಬೇಕಾಗಿದೆ. ಭಾರತೀಯ ಪುರಾತತ್ವ ಇಲಾಖೆಯ ವಾರ್ಷಿಕ ಅನುದಾನವನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡದೇ, ಪ್ರವಾಸೋಧ್ಯಮ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸಿಗರ ಅನುಕೂಲತೆಗಳನ್ನು ಕಲ್ಪಿಸಿಕೊಡಲು ಖರ್ಚು ಮಾಡಲಿ ಎಂದು ಸ್ಥಳೀಯರು, ಪ್ರವಾಸಿಗರು ಆಗ್ರಹಸಿದ್ದಾರೆ.

ನಿಯಮ ಮೀರಿದರೆ ಪಟ್ಟಯಿಂದ ಹೊರಗೆ :

ಹಂಪಿಯ ಸ್ಮಾರಕಗಳ ಸಂರಕ್ಷಣೆ ಮತ್ತು ಇವುಗಳನ್ನು ಮುಂದಿನ ಪೀಳಿಗೆಗಾಗಿ ಕಾಯ್ದಿಡುವ ವೈಜ್ಞಾನಿಕ ವೈಧಾನಿಕತೆಗಳ ಕುರಿತು ಪ್ರಪಂಚದ ಶ್ರೇಷ್ಠ ಪುರಾತತ್ವ ಶಾಸ್ತ್ರಜ್ಞರು ಮತ್ತು ಪಾರಂಪರಿಕ ಆರ್ಕಿಟೆಕ್ಟ್ ಗಳು UNESCO ನೇತ್ರತ್ವದಲ್ಲಿ 1999 ರಿಂದ ಆರಂಭಗೊಂಡು 2000 ರಿಂದ 2004 ಮತ್ತು 2007 ರಲ್ಲಿ UNESCO ಅಡಿಯಲ್ಲಿ ಕಾರ್ಯನಿರ್ವಹಿಸುವ World Heritage Centre ಗೆ ಹಂಪಿಯ ವಿವಿಧ Group of Monuments ಗಳ ಸಂರಕ್ಷಣೆ ಕುರಿತಾಗಿ Integrated Management Plan ಸಲ್ಲಿಸಿರುತ್ತಾರೆ. ಇವುಗಳ ಆಧಾರದಲ್ಲಿ ಹಂಪಿಯ ಪರಿಸರದಲ್ಲಿ ಯಾವುದೇ ಸಂರಕ್ಷಣೆ, ಅಭಿವೃದ್ಧಿ ಮತ್ತು ಉತ್ಖನನ ಕಾರ್ಯ ಕೈಗೊಳ್ಳಬೇಕಿದೆ. ಇದನ್ನು ಮೀರಿ ನಡೆದಾಗ ಹಂಪಿಯನ್ನು  “ಅಪಾಯದ ಅಂಚಿನಲ್ಲಿರುವ ವಿಶ್ವ ಪಾರಂಪರಿಕವಾಗಿ ತಾಣ” ಗಳ ಪಟ್ಟಿಗೆ UNESCO ಸೇರಿಸುವ ಅಪಾಯವಂತೂ ಇದ್ದೇ ಇದೆ. (ಹಿಂದೊಮ್ಮೆ, ತಳವಾರಘಟ್ಟದ ಬಳಿ ಸೇತುವೆ ನಿರ್ಮಿಸಿದಾಗ ಹೀಗೆ ಸೇರಿಸಲಾಗಿತ್ತು).

 

ಪ್ರಾಧಿಕಾರ ಗಮನಹರಿಸಲಿ:

ಈ ಪರಿಸರದಲ್ಲಿ ಕೈಗೊಳ್ಳುವ ಯಾವುದೇ ಚಟುವಟಿಕೆಗಳು ಈ ಪ್ಲಾನ್ ಗಳು ನೀಡಿರುವ ಮಾರ್ಗದರ್ಶಿ ನಿಯಮಗಳನ್ನು ಉಲ್ಲಂಘಿಸದಂತೆ ಎಚ್ಚರವಹಿಸಿ ಹಲವು ಇಲಾಖೆಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವ ಜವಬ್ದಾರಿ HWHAMA (ಹಂಪಿ ಪ್ರಾಧಿಕಾರ) ದ್ದಾಗಿದೆ. ಯಾವುದೇ ನಿಯಮ ಉಲ್ಲಂಘನೆ ಆಗದಂತೆ ಕಾವಲುಗಾರನಂತೆ ಕಾರ್ಯನಿರ್ವಹಿಸಬೇಕಾದ ಕೇಂದ್ರ ಪುರಾತತ್ವ ಇಲಾಖೆಯೇ ಇತ್ತೀಚಿನ ವರ್ಷಗಳಲ್ಲಿ ಈ ನಿಯಮಗಳನ್ನು ಉಲ್ಲಂಘಿಸುತ್ತಿರುವುದಕ್ಕೆ ಹಲವಾರು ನಿದರ್ಶನಗಳು ಇವೆ. ಇಲಾಖೆಗೆ ಬರುವ ವಾರ್ಷಿಕ ಅನುದಾನವನ್ನು ಪ್ರವಾಸಿಗರಿಗೆ ಉಪಯುಕ್ತವಾದ, ಪಾಳುಬಿದ್ದ ಸ್ಮಾರಕಗಳ ಪುನರುಜ್ಜೀವನ ಮಾಡುವ ಹಲವು ಕೆಲಸಗಳು ಇವೆ. ಯಾವುದೇ ಸ್ಮಾರಕಗಳ ಬಳಿ ಕಾಮಗಾರಿ ಕೈಗೊಳ್ಳುವ ಮುನ್ನ ಆ ನಿರ್ದಿಷ್ಟ ಸ್ಮಾರಕ ಕುರಿತಾಗಿ ಮಾಸ್ಟರ್ ಪ್ಲಾನ್ ನಲ್ಲಿ ಯಾವ ಬಗೆಯ ಮಾರ್ಗದರ್ಶಿ ನಿಯಮಗಳನ್ನು ನೀಡಲಾಗಿದೆ ಎಂಬುದನ್ನು ಪರೀಕ್ಷಿಸಿ ಮುಂದುವರೆಯಬೇಕಿದೆ.

  • ಇಲಾಖೆಯ ಅಧಿಕಾರಿಗಳು ತಾವು ಎಲ್ಲಾ ಬಲ್ಲವರು ಮತ್ತು ಪ್ರಶ್ನಾತೀತರು ಎಂಬ ಮನೋಭಾವದಿಂದ ಹೊರಬರಬೇಕಿದೆ. ಇಂದು  ಹಂಪಿಯ ಕೋರ್ ಜೋನ್ ನಲ್ಲಿಯೇ ರಾಜಾರೋಷವಾಗಿ ಹೊಸ ಕಾಮಗಾರಿಗಳು ನಡೆಯುತ್ತಿದ್ದು ಅತ್ಯಂತ ಖೇದಕರವೆಂದಿದ್ದಾರೆ  ಇತಿಹಾಸ ಹಾಗೂ ಸ್ಮಾರಕ ಪ್ರಿಯ ಡಾ.ಶಿವಕುಮಾರ ಮಾಳಗಿ.

 

  • ಹಂಪಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿಲ್ಲ. ಪ್ರವಾಸಿ ಸ್ನೇಹಿ ತಾಣವನ್ನಾಗಿ ರೂಪಿಸಲಾಗುತ್ತಿದೆ ಎಂದು ಇಲಾಖೆ ಅಧೀಕ್ಷ ಡಾ.ನಿಹಿಲ್ ದಾಸ್.ಎನ್ ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!