December 5, 2024

Hampi times

Kannada News Portal from Vijayanagara

ಸಮುದಾಯ ಭವನಗಳು ಭಾವೈಕ್ಯತೆ ಸಂಕೇತ: ಗಣೇಶ್ ಹೆಗಡೆ

 

https://youtu.be/NHc6OMSu0K4?si=SI_K4goOPEgwo6h2

4 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಾಣ
ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:
ಸಮುದಾಯ ಭವನ ಯಾವುದೇ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೇ, ಅದು ಎಲ್ಲಾ ಜಾತಿ, ಧರ್ಮ, ಮತ, ಪಂಥ, ಬೇಧ, ಭಾವಗಳ ಮರೆತು ಸರ್ವರನ್ನು ಐಕ್ಯತೆಯಿಂದ ಸೇರಿಸುವ, ಭಾತೃತ್ವ ಭಾವನೆ ಬೆಸೆಯುವ ಭಾವೈಕ್ಯದ ಸಂಕೇತವಾಗಿದೆ ಎಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮಾನವಸಂಪನ್ಮೂಲ ವಿಭಾಗದ ಮುಖ್ಯಸ್ಥ ಗಣೇಶ್ ಹೆಗಡೆ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಆರ್ಯವೈಶ್ಯ ಸಮಾಜ ಕಲ್ಯಾಣ ಮಂಟಪದ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. ಬಿ.ಎಂ.ಎಂ.ಇಸ್ಪಾತ್ ಸಂಸ್ಥೆ ಮತ್ತು ಜೆ.ಎಸ್.ಡಬ್ಲೂ.ಫೌಂಡೇಶನ್ ಸಹಯೋಗದಲ್ಲಿ ನಿರ್ಮಾಣಗೊಳ್ಳಲಿರುವ ಕಲ್ಯಾಣ ಮಂಟಪವು ಸುಮಾರು 4ಕೋಟಿರೂ.ಗಳ ಅಂದಾಜು ವೆಚ್ಚದಲ್ಲಿ, ಹೋಬಳಿ ವ್ಯಾಪ್ತಿಯ ಗ್ರಾಮಗಳ ಜನತೆಗಾಗಿ ಸುಸ್ಸಜಿತವಾಗಿ ನಿರ್ಮಿಸಲಾಗುವುದು ಎಂದರು
ಮಾನವೀಯ ಮೌಲ್ಯಗಳ ಸಾಕ್ಷತ್ಕಾರವೇ ನಮ್ಮಲ್ಲರ ಆಶಯವಾಗಬೇಕೆಂದರು. ಇಂತಹ ಸಮುದಾಯ ಭವನಗಳ ನಿರ್ಮಾಣದಿಂದ ಸಾರ್ವಜನಿಕ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ಹಬ್ಬ- ಹರಿದಿನಗಳು, ಸಾಮೂಹಿಕ ವಿವಾಹ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ  ಈ ಸಮುದಾಯ ಭವನ ನಿರ್ಮಿಸಲಾಗುವುದು. ಸಮುದಾಯ ಭವನಗಳ ನಿರ್ಮಾಣದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು, ಸಮುದಾಯಗಳ ನಡುವೆ ಸೌಹಾರ್ದಯುತ ಮತ್ತು ಭಾವನಾತ್ಮಕ ಸಂಬಂಧ ಬೆಸೆಯುವಲ್ಲಿ ಇದು ಸಹಕಾರಿ ಎಂದು ಅಭಿಪ್ರಾಯಪಟ್ಟರು. ಸಮುದಾಯ ಭವನ  ಸಾರ್ವಜನಿಕ ಸೊತ್ತು, ಇದರ ಸರಿಯಾದ ಬಳಕೆ, ನಿಮ್ಮಲ್ಲರ ಕರ್ತವ್ಯವಾಗಬೇಕು ಎಂದರು.
ಈ ಸಂಧರ್ಭದಲ್ಲಿ ಬಿಎಂಎಂ ಕಂಪನಿಯ ಅಧಿಕಾರಿಗಳಾದ ಮಂಜುನಾಥ, ಅರುಣ್ ಕುಮಾರ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಎಂ.ವಿಶ್ವನಾಥಶೆಟ್ಟಿ, ಡಾ.ಪಿ.ವಿಜಯವೆಂಕಟೇಶ, ಡಿ.ರಾಘವೇಂದ್ರಶೆಟ್ಟಿ, ಚಿದ್ರಿಸತೀಶ, ಎನ್.ಶ್ರೀನಿವಾಸಶೆಟ್ಟಿ, ಡಿ.ಶ್ರೀನಿವಾಸಶೆಟ್ಟಿ, ವೀಣಾಶ್ರೀನಿವಾಸಶೆಟ್ಟಿ, ಐ.ವಿಜಯಲಕ್ಷ್ಮಿ, ಬದ್ರಿನಾಥಶೆಟ್ಟಿ, ಮಾರುತಿಕಾಕುಬಾಳು, ಐ.ಶ್ರವಣಕುಮಾರ್, ಗುಂಡಾರಮೇಶ ಸೇರಿದಂತೆ ಇತರರಿದ್ದರು.

 

 

ಜಾಹೀರಾತು
error: Content is protected !!