https://youtu.be/NHc6OMSu0K4?si=SI_K4goOPEgwo6h2
ವಿಶ್ವತಾಯಂದಿರ ದಿನಾಚರಣೆ ನಿಮಿತ್ತ…
ನನ್ನ ತಾಯಿ
ತಾಯಿಯೇ ದೇವರು ಎಂಬುದು ಸಾರ್ವಕಾಲಿಕ ಸತ್ಯ. ಕಾಣದ ದೇವರು ತಾಯಿಯ ರೂಪದಲ್ಲಿ ತನ್ನ ಕರ್ತವ್ಯವನ್ನು ಪಾಲಿಸಬಹುದು ಎನಿಸುತ್ತದೆ. ಎಲ್ಲರಿಗೂ ತಾಯಿ ಎಂದರೆ ಪ್ರೀತಿ, ಆ ಪ್ರೀತಿಯನ್ನು ತಾಯಿ ಮಗುವಿನ ಸಂಬಂಧದಲ್ಲಿ ಕಾಣಬಹುದು ಅದು ಹೇಳಲು ಅಸಾಧ್ಯ. ಅಂತಹ ಪ್ರೀತಿ, ವಿಶ್ವಾಸ, ಧೈರ್ಯ, ಆತ್ಮವಿಶ್ವಾಸ ಬಲವನ್ನುದೈಹಿಕವಾಗಿ, ಮಾನಸಿಕವಾಗಿ ಬೆಳೆಸಿದ ನನ್ನತಾಯಿಗೆಒಂದುಕೃತಜ್ಞತೆ ಸಲ್ಲಿಸಲುಒಂದು ಸದಾವಕಾಶಒದಗಿ ಬಂದಿದೆತಾಯಿಯ ಪಾತ್ರಎಲೆಮರೆಯಕಾಯಿಯಂತೆಒAದು ಮಗು ಪಕ್ವವಾಗಿ, ಹಣ್ಣಾಗಿ, ಬೆಳಗಲು ಅವಕಾಶ ನೀಡುತ್ತಾಳೆ.
ಅಂತಹ ನಿಸ್ವಾರ್ಥತೆಯ ಬದುಕನ್ನು ರೂಪಿಸಿಕೊಟ್ಟು ನನ್ನತಾಯಿ ಬಾಲ್ಯದಲ್ಲಿ ಹೇಗೆ ಬೆಳೆದೆವು ತಿಳಿಯದೆ ಒಂದು ಹಂತದವರೆಗೂಯವ್ವನಾವಸ್ಥೆಯವರೆಗೂಯಾವುದೇಕೊರತೆಇಲ್ಲದೆ ಬೆಳೆಸಿದಳು, ಯೌವ್ವನಾವಸ್ಥೆಯಲ್ಲಿ ಮದುವೆಯಾಯಿತು ಮದುವೆಯಾದ ಮೇಲೆ ಸುಖ ಜೀವನ ನಡೆಯಬೇಕಾದರೆಒಂದು ಭಯಂಕರ ಬಿರುಗಾಳಿಯಂತೆ ನನ್ನಜೀವನದಲ್ಲಿ ಗಂಡಾAತರಗಳು ಬರತೊಡಗಿದವುಅಂತಹಎಷ್ಟೇ ಗಂಡಾಂತರಗಳು ಅವರಜೀವನದಲ್ಲೂ ಬಂದು ಹೋಗಿದ್ದರಿಂದಅವರತಾಯಿಅವರಿಗೆಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಸಿದರು ಹಾಗೆ ನನ್ನ ಗಂಡಾಂತರಗಳನ್ನು ನೀರ ಮೇಲಿನ ಗುಳ್ಳೆಯಂತೆ ಅಲೆಯಂತೆ ಅವು ಸಾಗಿ ಹೋಗುವ ಹಾಗೆ ಸಾಗಿಸಿದರು “ಕಷ್ಟಕ್ಕೆಕುಗ್ಗದೆ ಸುಖಕ್ಕೆ ಹಿಗ್ಗದೆ” ಬೆಳೆಸಿದರು “ಕಷ್ಟ ಪಟ್ಟರೆ ಸುಖ ಉಂಟು” ಎಂಬ ಮಾತನ್ನು ಮನದಟ್ಟು ಮಾಡುವುದರಿಂದ ಪ್ರವಾಹವನ್ನು ಹೇಗೆ ಎದುರಿಸಬೇಕುಎಂಬುದನ್ನು ಕೇವಲ ಮನೋಸ್ಥೈರ್ಯದಿಂದಆತ್ಮವಿಶ್ವಾಸದಿಂದ ತುಂಬಿರುವುದನ್ನುಅನುಭವಿಸುತ್ತಿದ್ದೇನೆ.
ಅAತಹತಾಯಿಯಿಂದ ಪಡೆದ ಗುಣಗಳನ್ನು ನಾವು ನಮ್ಮ ಮಕ್ಕಳಿಗೆ ಅದನ್ನುತುಂಬಿ ಬೆಳೆಸಿದಾಗ ಆಗ ಮಾತ್ರ ಆ ತಾಯಿಯ ನಿಸ್ವಾರ್ಥ ಸೇವೆಗೆ ಒಂದುಕೃತಜ್ಞತೆಯನ್ನು ಸಲ್ಲಿಸಿದಂತೆ ಆಗುತ್ತದೆಎಂಬುದು ನನ್ನ ಅನಿಸಿಕೆ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿತಾಯಿಯ ಪಾತ್ರತುಂಬಾ ಹಿರಿದು ಪುರುಷ ಸ್ಥಾನ ಸಮಾಜವಾದರೂತಾಯಿಯ ಪಾತ್ರಎಷ್ಟು ಹಿರಿದುಎಂದು ವರ್ಣಿಸಲುಅಸಾಧ್ಯ “ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತರುಚಿಯಿಲ್ಲ” ಎಂಬ ಗಾದೆ ಮಾತಿನಂತೆಅಡುಗೆಗೆಎಷ್ಟುಉಪ್ಪು ಹಿತಮಿತವಾಗಿ ಬೇಕು ಹಾಗೆ ಒಂದು ಮಗುವಿನ ಬೆಳವಣಿಗೆಗೆ ತಾಯಿಯ ಪಾತ್ರದೊಡ್ಡದು.ಅಂತಹತಾಯಿಯನ್ನು ಪಡೆದ ನಾನು ಧನ್ಯಳು.ಆ ತಾಯಿಗೆ ಕೃತಜ್ಞತಾಪೂರ್ವಕವಾದ ಅನಂತಅನಂತ ಧನ್ಯವಾದಗಳು ತಿಳಿಸುವ ಸದಾವಕಾಶ ಇದಾಗಿದೆ.
– ಸೀತಾ ಎಲ್ ಡಬೇರ
ಅಮರಾವತಿ, ಹೊಸಪೇಟೆ
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
SSLC ENGLISH Most Expected Questions
ಡಾ. ಪುನೀತ್ ರಾಜಕುಮಾರ್ ಅವರ ಆಸ್ತಿ ಏನು ಗೊತ್ತೇ? : ನಂದಿನಿ ಸನಬಾಳ್