November 11, 2024

Hampi times

Kannada News Portal from Vijayanagara

ಮಾತೆಯ ಮಮತೆಯ ಮುತ್ತಿನ ಋಣವ ತೀರಿಸಲೆಂತು

 

https://youtu.be/NHc6OMSu0K4?si=SI_K4goOPEgwo6h2

 

– ಸುಮನ್‌ರಾವ್ ಭಾವಸಾರ್ ಮಂಡ್ಯ

ಹಂಪಿ ಟೈಮ್ಸ್

ಅಮ್ಮಎಂದರೆ ಪದಗಳಲ್ಲಿ ವಿವರಿಸಲಾಗದ ಶಕ್ತಿ. ಮಾತಿನಲ್ಲಿ ಬಣ್ಣಿಸಲಾಗದ ವ್ಯಕ್ತಿ.ಸ್ವಾರ್ಥವನ್ನು ಅರಿಯದವಳು.ನಿಸ್ವಾರ್ಥಿಯಾಗಿ ಬದುಕುವವಳು.ವಿಶ್ರಾಂತಿಯನ್ನು ಬಯಸದೆಅವಿರತ ಮನೆ, ಮಕ್ಕಳಿಗಾಗಿ ದುಡಿಯುವವಳು.ಅವರ ನೋವಿಗೆ ಮಿಡಿಯುವವಳು.ಸದಾಅವರ ಸುಖವನ್ನು ಬಯಸುವವಳು.ಮಕ್ಕಳ ನಗುವಿನಲಿ ತನ್ನ ನೋವನ್ನು ಮರೆಯುವವಳು.

ಹೊರ ಬರುವ ಹಸು ಕಂದನ ಕನಸು ಕಾಣುತಾ ನವ ಮಾಸತನ್ನಗರ್ಭಗುಡಿಯಲ್ಲಿಜೋಪಾನ ಮಾಡುವಳು. ಪ್ರಸವ ವೇದನೆಯನ್ನು ಅನುಭವಿಸುವಳು. ಹೊರ ಬಂದ ಹಸು ಕಂದನ ನೋಡಿತನ್ನ ವೇದನೆ ಮರೆಯುವಳು. ತನ್ನರಕ್ತವನ್ನೇ ಹಾಲನ್ನಾಗಿಸಿ ಉಣಿಸುವಳು. ಕಂದಅತ್ತರೆತಾನೂ ಅಳುವಳು ನಕ್ಕರೆತಾನೂ ನಗುವಳು.ಏಕೆಂದರೆ ಕೂಸು ಎಂಬುದುಅಮ್ಮನದೇ ಕರುಳ ಬಳ್ಳಿ

ಬದುಕಿನಲಿ ಏನೇ ಬಂದರೂ ಮಕ್ಕಳಿಗಾಗಿ ಜೀವಿಸುವಳು.ಅವರ ಲಾಲನೆ ಪಾಲನೆಯಲ್ಲಿಯೇ ಬದುಕ ಸವೆಸುವಳು.ತನಗೆ ನೋವಾದರೂ ತೋರಿಸಳು ನಗುವ ಬೀರುತಾ ನೋವನ್ನು ಮರೆಮಾಚುವಕಲೆಯ ಬಲ್ಲವಳು. ಅಗಾಧ ನಂಬಿಯನ್ನು ಹೊಂದಿದವಳು.ನAಬಿಕೆ ಒರತು ಬೇರೇನೂ ಕಾಣಳು.ಆಕೆ ಕೇವಲ ಹೆಣ್ಣಲ್ಲ ಆಕೆ ದೇವತೆಜನುಮ ನೀಡ ಬಲ್ಲ ಜನುಮದಾತೆ.ಇಷ್ಟೇಅಲ್ಲಇನ್ನೂ,ಇನ್ನೂ… ಆಕೆಯನ್ನು ಬಣ್ಣಿಸಲು ಪದಗಳಿಲ್ಲ ಆಕೆಯಗುಣವಅರ್ಥೈಸಲು ಶಬ್ದಕೋಶಗಳಿಲ್ಲ. ಇಷ್ಟೆಲ್ಲಗುಣ ಹೊಂದಿದಆಕೆಯಒಡನಾಟದಲ್ಲಿ ಬೆಳೆದ ಮಕ್ಕಳಿಗೆ ನೋವಾದಾಗಲೆಲ್ಲಅವರ ಬಾಯಿಂದ ಹೊರ ಬರುವ ಪದವೇಅಮ್ಮ… ಅಮ್ಮ ..

ಅಮ್ಮ ನಮಗೆ ಮಾತುಕಲಿಸಿದ ವಾಗ್ದೇವಿ, ಸಂಸ್ಕಾರ ಕಲಿಸಿದ ಗುರು, ಪ್ರೀತಿಯಿಂದತುತ್ತನ್ನಿಟ್ಟತಾಯಿ, ನೋವಿನಲಿ ಸಂತೈಸುವ ಮಾತೆ.
ಏನೆಲ್ಲಾ ಅವಳು ಹೇಳುತ್ತಾ ಹೋದರೆ ಭಾವುಕತೆಯಿಂದಕಣ್ತುAಬಿ ಕಂಠಗದ್ಗದಿತ ವಾಗುತ್ತದೆ. ಮಾತು ಕಲಿಸಿದ ಮಾತೆಗೆ ಮೌನದಲ್ಲೇ ವಂದಿಸುವೆ
ಮಾತೆಯ ಮಮತೆಯಋಣವ ಹೇಗೆ ತೀರಿಸಲಿ…..?

 

 

ಜಾಹೀರಾತು
error: Content is protected !!