October 14, 2024

Hampi times

Kannada News Portal from Vijayanagara

ಮಾತೃ ಮೂರ್ತಿ “ಪ್ರೀತಿಯ ಅಮ್ಮ!

 

https://youtu.be/NHc6OMSu0K4?si=SI_K4goOPEgwo6h2

 

 

14 ಮೇ 2023  ವಿಶ್ವತಾಯಂದಿರ ದಿನದ ವಿಶೇಷ ಲೇಖನ

  • ಗಾಯತ್ರಿ.ಸಿ

ಹಂಪಿ ಟೈಮ್ಸ್ ಹೊಸಪೇಟೆ

ವಿಶ್ವತಾಯಂದಿರ ದಿನಾಚರಣೆಯ ಈ ಸಂದರ್ಭದಲ್ಲಿ ನಿನಗೆ ಶುಭಕಾಮನೆಗಳನ್ನು ತಿಳಿಸಬೇಕೆಂದಿದೆ.ಎಲ್ಲ ಮಕ್ಕಳಿಗೂ ಅವರವರಅಮ್ಮಂದಿರುಅಪರೂಪವೇಆಗಿರುತ್ತಾರೆ.ಮಮತೆಯ ಮಹಾಪೂರವನ್ನೇ ಹರಿಸಿರುತ್ತಾರೆ.ಆದರೆ ನನ್ನಅಮ್ಮ ಕೇವಲ ಮಮತಾಮಯಿ, ತ್ಯಾಗಮಯಿ ಮಾತ್ರವಲ್ಲ, ತಾಯ್ತನವೆಂದರೇನೆಂದು ಅರಿತವಳು. ಹಲವು ತಾಯಂದಿರಿಗೆದಾರಿ ದೀಪವಾಗ ಬಲ್ಲವಳು ಎನ್ನುವುದು ನನಗೆ ಹೆಮ್ಮೆಯ ವಿಷಯ.

ಅಮ್ಮಾ! ನನ್ನ ಸ್ನಾತಕೋತ್ತರ ಪದವಿಯನ್ನು ಮುಗಿಸಿ ಮನೆಗೆ ಬಂದಾಗ ನೀನು ನನ್ನ ಮದುವೆಯ ಪ್ರಯತ್ನ ಮಾಡುವಉತ್ಸಾಹದಲ್ಲಿದ್ದೆ.ದೇಶದ ಪ್ರತಿಷ್ಟಿತ ಸಂಸ್ಥೆಯಲ್ಲಿ, ಪ್ರಖ್ಯಾತ ವಿಜ್ಞಾನಿಗಳ ನೇತೃತ್ವದಲ್ಲಿ ಸೂಕ್ಷ್ಮ ಅಣುಜೀವಿಗಳ ಬಗ್ಗೆ ಸಂಶೋಧನೆ ಮಾಡುವ ಸದವಕಾಶ ನನಗೆ ಒದಗಿತ್ತು.ಅದು ಸಾವಿರದಲ್ಲಿಒಬ್ಬರಿಗೆ ಸಿಗಬಹುದಾದಅಪೂರ್ವಅವಕಾಶವೆಂದು ತಿಳಿದಾಗ, ನೀನು ನಿನ್ನ ನಿರ್ಧಾರವನ್ನು ಬದಲಾಯಿಸಿ ಸಂತೋಷದಿಂದಒಪ್ಪಿದ್ದೆ. ವಿಷಯ ತಿಳಿದು ನಿನ್ನ ಆಪ್ತ ಗೆಳತಿ ಪಾರ್ವತಿಆಂಟಿ ಮನೆಗೆ ಬಂದ ದಿನ ನನಗಿನ್ನೂ ನೆನಪಿದೆ. ನಾನು ಒಳ ಕೋಣೆಯಲ್ಲಿದ್ದೆ.ಪಾರ್ವತಿಆಂಟಿ ನಿನ್ನ ಮೇಲೆ ತುಂಬಾ ಸಿಟ್ಟಾಗಿದ್ದರು.

“ಜಾನಕಿ! ನಿನಗೇನಾದರೂತಲೆಕೆಟ್ಟಿದೆಯಾ?ಎರಡು ವರ್ಷಕ್ಕೆತಂದೆಯನ್ನು ಕಳೆದುಕೊಂಡ ಮಗಳನ್ನು ಎದೆಗೆಕಟ್ಟಿ ಸಾಕಿದೆ.ನೀನೆಷ್ಟುಕಷ್ಟ, ನಿಷ್ಠುರ ಗಳನ್ನು ಎದುರಿಸಿದ್ದಿ ಎನ್ನುವುದು ನನಗೆ ಮಾತ್ರಗೊತ್ತು.ಈಗ ಮಗಳು ಒಂದು ಹಂತವನ್ನು ಮುಟ್ಟಿದ್ದಾಳೆ, ಅವಳ ಮದುವೆ ಮಾಡಿ, ಜವಾಬ್ದಾರಿ ಮುಗಿಸಿ, ಬಾಳಿನ ಸಂಜೆಯನ್ನು ನೆಮ್ಮದಿಯಾಗಿ ಕಳೆಯುತ್ತೇನೆ ಎಂದು ಹೇಳುತ್ತಿದ್ದೆ.ಈ ಸಮಯಕ್ಕಾಗಿಕಾತರದಿಂದಕಾಯುತಿರುವೆಎAದುಅದೆಷ್ಟು ಬಾರಿ ಹೇಳಿಕೊಂಡಿದ್ದೆ.ಈಗ ಅವಳ ಭವಿಷ್ಯಎನ್ನುತ್ತಾ, ಅವಳ ತಾಳಕ್ಕೆ ಕುಣಿಯುತ್ತೀಯಾ?”

ಪಾರ್ವತಿ ಆಂಟಿ ಒಂದೇ ಸಮನೆ ಮಾತನಾಡುತ್ತಿದ್ದರು.ಅವರಿಗೆ ನೀನು ಕೊಟ್ಟಉತ್ತರದಒಂದೊಂದುಅಕ್ಷರವೂ ನನ್ನ ನೆನಪಿನಲ್ಲಿದೆ. ನೀನು ಹೇಳಿದ್ದೆ, “ಪಾರ್ವತಿ! ನಿನ್ನ ಕೋಪ ನನಗೆ ಅರ್ಥವಾಗುತ್ತೆ. ನಿಜ. ನಾನು ನನ್ನ ಜವಾಬ್ದಾರಿ ಮುಗಿಸಬೇಕೆಂದುಕೊಂಡಿದ್ದೆ.ಅದು ನನ್ನ ಸ್ವಾರ್ಥ. ನನ್ನ ನೆಮ್ಮದಿಗಾಗಿ ಮಗಳ ಉಜ್ವಲ ಭವಿಷ್ಯವನ್ನು ಹಾಳು ಮಾಡುವ ಅಧಿಕಾರ ನನಗಿಲ್ಲ. ನಾನು ಅವಳ ಜನ್ಮಕ್ಕೆಕಾರಣ ಮಾತ್ರ.ನಾನೇ ಜನ್ಮ ಕೊಟ್ಟವಳಲ್ಲ. ನನ್ನ ಮೂಲಕ ಈ ಜಗತ್ತಿಗೆ ಬಂದ ಆ ಜೀವಯಾವಗುರಿಯನ್ನು ತಲುಪಬೇಕು ಎನ್ನುವ ನಿರ್ಧಾರ ಸರ್ವಶಕ್ತನಾದ ಆ ಭಗವಂತನ ಕೈ ಯಲ್ಲಿದೆ. ಈ ಸೃಷ್ಟಿಯಯಾವಘಟನೆಯುಕಾರಣವಿಲ್ಲದೆ ನಡೆಯುವುದಿಲ್ಲ. ಪ್ರತಿಯೊಬ್ಬರಿಗೂಒಂದು ನಿರ್ದಿಷ್ಟಗುರಿಯನ್ನು ಅವನು ನಿರ್ಧಾರಿಸಿರುತ್ತಾನೆ. ಮತ್ತು ಆ ಗುರಿಯನ್ನುತಲುಪಿಸಲು ಬೇರೆ ಬೇರೆ ಪರಿಕರಗಳನ್ನು ಉಪಯೋಗಿಸುತ್ತಾನೆ. ಒಬ್ಬ ನುರಿತ ಬಿಲ್ಲುಗಾರತನ್ನ ಬಾಣಗುರಿ ಮುಟ್ಟುವಂತೆ ಮಾಡಲು ಬಲವಾದ ಬಿಲ್ಲನ್ನುಉಪಯೋಗಿಸುತ್ತಾನೆ. ಬಿಲ್ಲನ್ನು ಬಲವಾಗಿ ಬಗ್ಗಿಸಿ ಹೆದೆ ಏರಿಸಿದಾಗಲೇ ಬಾಣ ಹೆಚ್ಚು ದೂರ ಕ್ರಮಿಸಿ ತನ್ನಗುರಿ ಮುಟ್ಟುತ್ತದೆ. ಸೃಷ್ಟಿಯಉದ್ದೇಶವನ್ನು ನೆರವೇರಿಸುವ ಅವನಿಗೆ ಸಾಗುವ ಬಾಣದ ಮೇಲೆ ಎಷ್ಟು ಪ್ರೀತಿಇದೆಯೋ, ಬಾಗುವ ಬಿಲ್ಲಿನ ಮೇಲೂ ಅಷ್ಟೇ ಪ್ರೀತಿಇರುತ್ತದೆ.ನಾನು ಅವನ ಕೈಯಲ್ಲಿ ಸಂತೋಷದಿಂದ ಬಾಗುವ ಬಿಲ್ಲಾಗಲು ಇಷ್ಟಪಡುತ್ತೇನೆ. ನನ್ನ ಮೂಲಕ ಈ ಜಗತ್ತಿಗೆ ಬಂದ ಆ ಬಾಣತನ್ನಗುರಿ ಸೇರಿದಾಗಲೇ ನನ್ನಜೀವನವೂ ಸಾರ್ಥಕ.”

ಕೊರೋನ ವೈರಸ್ಗೆ ಲಸಿಕೆ ಕಂಡುಹಿಡಿದ ವಿಜ್ಞಾನಿಗಳ ತಂಡದಲ್ಲಿದ್ದ ನನಗೆ ಸಲ್ಲಿದ ಈ ಗೌರವಕ್ಕೆಕಾರಣ ಅಂದಿನ ಆ ನಿನ್ನ ನಿರ್ಧಾರ.ಅಮ್ಮಎನ್ನುವ ಸ್ಥಾನದ ಮಹತ್ವ ಮತ್ತು ಜವಾಬ್ದಾರಿಗಳನ್ನು ಎಷ್ಟುಚೆನ್ನಾಗಿಅರ್ಥ ಮಾಡಿಕೊಂಡಿದ್ದೀಯಾ ನೀನು!
ಆದ್ದರಿಂದಲೇ ನನ್ನಅಮ್ಮ ಹಲವು ಅಮ್ಮಂದಿರಿಗೆದಾರಿದೀಪವಾಗ ಬಲ್ಲಳು.ನಾನೂ ಸಹ ನಿನ್ನ ಹಾದಿಯಲ್ಲಿ ನಡೆದು ಒಳ್ಳೆ ಅಮ್ಮನಾಗಲು ಬಯಸುತ್ತೇನೆ.

ವಿಶ್ವತಾಯಂದಿರ ದಿನಾಚರಣೆಯ ಅಂಗವಾಗಿ ಶುಭಕಾಮನೆಗಳ ಜೊತೆಗೆ ನನಗೆ ಸಂದಎಲ್ಲಾಗೌರವ, ಪ್ರಶಸ್ತಿಗಳನ್ನು ನಿನ್ನ ಪಾದಗಳಿಗೆ ಅರ್ಪಿಸುತ್ತೇನೆ.

ನಿನ್ನ ಪ್ರೀತಿಯ ಮಗಳು.
ಗಾಯತ್ರಿ.ಸಿ, ಹೊಸಪೇಟೆ.

 

 

ಜಾಹೀರಾತು
error: Content is protected !!