October 14, 2024

Hampi times

Kannada News Portal from Vijayanagara

ಮೊದಲ ಮತದಾರರ ಮನದಾಳದ ಮಾತುಗಳು

 

https://youtu.be/NHc6OMSu0K4?si=SI_K4goOPEgwo6h2

 

 

ಕತ್ತಲಲ್ಲೆ ಮುಂದುವರೆದ ಪ್ರಜಾಪ್ರಭುತ್ವ !

ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಮೊದಲಬಾರಿಗೆ ಮತದಾನ ಮಾಡಿದ ಯುವಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಹಾಗೂ ಯುವಜನತೆ ಸೇರಿದಂತೆ ಎಲ್ಲರೂ ಪ್ರಜಾಪ್ರಭುತ್ವದ ಭದ್ರ ಬುನಾದಿ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಮತದಾನದ ಮಹತ್ವ ಅರಿತು ತಪ್ಪದೇ ಹಕ್ಕು ಚಲಾಯಿಸಬೇಕು ಮತ್ತು ಆಡಳಿತ ಎಂಬ ಯಂತ್ರವನ್ನು ಬಳಸಿಕೊಂಡು ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ದೇಶ ಮಾತ್ರವಲ್ಲ ದೇಶದ ಚುಕ್ಕಾಣಿ ಹಿಡಿಯುವ ನಾಯಕರ ಭವಿಷ್ಯವನ್ನು ಅಳೆಯುವ ಚುನಾವಣೆಯಲ್ಲಿ ನಮ್ಮ ಮತ ವ್ಯರ್ಥವಾಗಬಾರದು ಎಂದು ನಾನು ಮತ ಚಲಾಯಿಸಿರುವೆ.
– ವಿಕಾಸ್. ಕನ್ನಸಂದ್ರ

 

********-

ನಾನು ಮತದಾನ ಮಾಡುವುದು ಮೊದಲನೇ ಸಲ ಕುತೂಹಲದಿಂದ ಮುಂದಿನ ಭವಿಷ್ಯದ ಬಗ್ಗೆ ನನ್ನಲ್ಲಿ ನಾನೇ ಅರಿತುಕೊಳ್ಳುತ್ತ ನಾನು ಪ್ರಾಮಾಣಿಕ, ನಿಷ್ಪಕ್ಷಪಾತ, ನ್ಯಾಯಯುತ ನಿರ್ಣಯ ತೆಗೆದುಕೊಳ್ಳುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಭ್ರಷ್ಟಾಚಾರ ಸರ್ಕಾರ, ಸ್ಕ್ಯಾಮ್ ಮಾಡುವ ಸರ್ಕಾರ ಬೇಡ ನಮಗೆ. ನನ್ನ ಅಮೂಲ್ಯವಾದ ಮತವನ್ನು ದಲಿತ, ಹಿಂದುಳಿದ ವರ್ಗಗಳ, ವಿಷ ಬೀಜವನ್ನು ಬಿತ್ತಿಲಾರದ ಪಕ್ಷಕ್ಕೆ ಮತ ಚಲಾಯಿಸಲು ತುಂಬಾ ಸಂತೋಷವಾಯಿತು.
– ಹುಲುಗಪ್ಪ ಜಿ ಸಿ, ಹೊಸಪೇಟೆ

***********-

ಚುನಾವಣೆ ಎಂದಾಕ್ಷಣ ನೆನಪಾಗುವುದೇ ರಾಷ್ಟ್ರ ರಾಜ್ಯಗಳ ಭವಿಷ್ಯ! 2023 ರ ವಿಧಾನಸಭಾ ಚುನಾವಣೆಯಲ್ಲಿ ನಾನು ಪ್ರಥಮ ಮತ ಚಲಾಯಿಸಿದ್ದು ಬದಲಾವಣೆಯನ್ನು ಬಯಸಿ ಸೂಕ್ತ ವ್ಯಕ್ತಿಗೆ ಮತ ಚಲಾಯಿಸಿದ್ದೇನೆ, ಯುವಕರಾದ ನಾವುಗಳು ರಾಜಕೀಯ ಗುಲಾಮರಾಗದೇ ಸೂಕ್ತ ಬದಲಾವಣೆಯ ಅಗತ್ಯವಿದ್ದು ನನ್ನ ಪ್ರಥಮ ಮತ ನನಗೆ ತೃಪ್ತಿ ನೀಡಿದೆ.
– ಯಸಾಚಿಂ ಯಾದಗಿರಿ, ಚಿಂತಕುಂಟಾ

 

************-

ಶಾಲಾ ದಿನಗಳಿಂದಲೂ ಮತದಾನ-ಮಹಾದಾನ ಎನ್ನುವುದನ್ನ ಕೇಳಿದ್ದೆ. ಬೂತ್ ಒಳಕ್ಕೆ ಹೋದಾಗ ಚುನಾವಣಾ ಕಾರ್ಡ್, ನೀಲಿ ಶಾಯಿ ಎಲ್ಲವುಗಳ ಅನುಭವ ಹೊಸದಾಗಿತ್ತು. ಹೊರ ಬಂದ ಮೇಲೆ ಒಬ್ರು ಕೊಟ್ಟಾರ ಇನ್ನೊಬ್ರು ಕೊಟ್ಟಿಲ್ಲ, ಹೊತ್ತು ಮುಳಗಂಟ ಟೈಮ್ ಐತಲ್ಲಾ ಎನ್ನುವ ಅಭಿಪ್ರಾಯಗಳು ಜನರಿಂದ ಕೇಳಿಬಂದವು. ಇನ್ನು ನಮ್ಮ ಪ್ರಜಾಪ್ರಭುತ್ವ ಕತ್ತಲೆಯಲ್ಲೇ ಇದೆ ಎಂಬ ಭಾಸವಾಯಿತು. ಶಿಕ್ಷಿತ ವರ್ಗದ ಜನರ ಓದು ಅವರ ಕೈಯಲ್ಲಿರುವ ದೀಪವಾಗಿದೆ ಹೊರತು, ಕತ್ತಲೆ ಕಳೆಯುವ ಬೆಳಕಾಗಿಲ್ಲ ಎನ್ನುವುದನ್ನ ಚುನಾವಣೆ ತೋರಿಸಿತು. ಮೊದಲ ಮತದಾನದ ಹಿಗ್ಗು ಎಷ್ಟಿತ್ತೋ ಸವಾಲುಗಳು ಅಷ್ಟೇ ಇವೆ ಎನ್ನುವುದನ್ನ ತೋರಿಸಿಕೊಟ್ಟಿತು.
-ಬಸಂತ್.ಡಿ.ಉಮಾಪತಿ, ಹೊಸಪೇಟೆ

 

 

ಜಾಹೀರಾತು
error: Content is protected !!