https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ:
ಮಾತೃಭಾಷೆಯಲ್ಲಿನ ಸಂವಹನವು ಸ್ವರ್ಗ ಸಮಾನ ಎಂದು ಉಪನ್ಯಾಸಕ ಅಕ್ಕಿ ಬಸವೇಶ ಹೇಳಿದರು
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಸಾಪ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದ ಐ.ಟಿ.ಐ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ನಾಡು-ನುಡಿ ಜಾಗೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಭಾವನಾತ್ಮಕ ಆತ್ಮೀಯ ಇಷ್ಠಾನು ಇಷ್ಠಗಳ ತೋರ್ಪಡಿಸುವಿಕೆಯಲ್ಲಿ ಅನ್ಯ ಭಾಷಾ ಮಾದ್ಯಮಕ್ಕಿಂತ ಸ್ವಭಾಷಾದಲ್ಲಿನ ಸಂವಹನವು ಬಹು ಮುಕ್ತವಾಗಿರುತ್ತದೆ. ಮನುಷ್ಯ ಕನಸುಗಳನ್ನು ಕಾಣುವುದು ಮಾತೃ ಭಾಷೆಯಲ್ಲಿ ಮಾತ್ರ, ನೋವು ನಲಿವುಗಳ ಚಿತ್ಕಾರದ ಪ್ರತಿಕ್ರಿಯೆ ಸ್ವಯಂ ತೋರುವಿಕೆಯು ಸಹ ಮಾತೃ ಭಾಷೆಯಲ್ಲಯೇ ಹಾಗಾಗಿ ನಾವು ನಮ್ಮ ಕನ್ನಡ ಭಾಷಾ ಪ್ರೇಮವು ನಮಗೆಲ್ಲಾ ಸಹಜವಾಗಿಯೇ ಅತಿ ಶ್ರೇಷ್ಠ. ಕನ್ನಡ ಭಾಷಾ ಜೀವಂತಿಕೆಯು ಕರ್ನಾಟಕದ ಜನತೆಯ ಜೀವಮಾನದ ನಿಜ ಅಸ್ಮಿತೆಯಾಗಿದ್ದು, ಕನ್ನಡ ಪ್ರೇಮವನ್ನ ನಾವು ಸದಾ ಕಾಲ ಎತ್ತಿ ಹಿಡಿಯಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡಿನ ಕನ್ನಡ ಭಾಷಾ ಸರ್ವತೋಮುಖ ಪ್ರಗತಿಗಾಗಿಯೇ, ಈ ನಾಡಿನ ಒಂದು ಮಹೋನ್ನತ ಸ್ವಾಯತ್ತತಾ ಸಂಸ್ದೆಯಾಗಿದ್ದು, ಕಳೆದ ಶತಮಾನದುದ್ದಕೂ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನ ರಚನಾತ್ಮಕವಾಗಿ ಬೆಳೆಸುತ್ತಲೇ ಕರ್ನಾಟಕಕ್ಕೆ ಕನ್ನಡ ಬಾಳು ಮೇಲಾಗಿಸಿಕೊಳ್ಳುವ ಧ್ಯೇಯ ಈ ನಮ್ಮೆಲ್ಲರ ಸಂಸ್ಥೆಯದ್ದಾಗಿದೆ. ಈ ದಿಸೆಯಲ್ಲಿ ಪರಿಷತ್ತಿನ ಸಂಸ್ದಾಪನಾ ದಿನಾಚರಣೆ ಕೈಗೊಂಡಿರುವ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಸಾಹಿತಿ ಮಲ್ಲಾರಿ ದೀಕ್ಷಿತ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿ ಬೆಳವಣಿಗೆಯಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ಶತಮಾನದುದ್ದಕ್ಕೂ ನೆರವೇರಿಸುವ ಮೂಲಕ ಕನ್ನಡದ ಜಾಗೃತಿ ಕಾರ್ಯವನ್ನು ಪರಿಷತ್ತು ಅನವರತ ಮಾಡುತ್ತಿದೆ ಎಂದರು.
ಕ.ಸಾ.ಪ. ತಾಲೂಕು ಅದ್ಯಕ್ಷ ಡಾ.ನಾಯಕರ ಹುಲುಗಪ್ಪ ಅಧ್ಯಕ್ಷತೆವಹಿಸಿ ಮಾತನಾಡಿ, ನಮ್ಮ ಕನ್ನಡತನ ಮತ್ತು ಅದರ ವಿವಿಧ ಮಜಲುಗಳನ್ನ ಕನ್ನಡ ಜನತೆಯ ಉಸಿರಾಗಿಸಿಕೊಂಡು ಬರುವಿಕೆಯಲ್ಲಿ ನಮ್ಮ ಪರಿಷತ್ತಿನ ಕಾರ್ಯ ಅಪಾರವಾಗಿದೆ. ದತ್ತಿ ಉಪನ್ಯಾಸಗಳು, ಸಮ್ಮೇಳನಗಳನ್ನ ಸದಾ ನಡೆಸಿಕೊಂಡು ಬರಲು ಪರಿಷತ್ತು ಶ್ರಮಿಸುತ್ತದೆ. ಜನತೆ ಪರಿಷತ್ತಿನ ಕಾರ್ಯಕ್ರಮಗಳನ್ನ ಪ್ರೋತ್ಸಾಸಿಸಬೇಕೆಂದರು. ಇದೇ ಸಂದರ್ಭದಲ್ಲಿ ಸಾಧಕರಾದ ಹಿರಿಯ ವರದಿಗಾರ ಶಶಿಕಾಂತ ಶೆಂಬಳ್ಳಿ, ಇಟ್ಟಂಗಿ ರಹಿಮಾನ ಸಾಬ್, ಸಂಪಾದಕಿ ರೇಖಾಪ್ರಕಾಶ್, ಭಾವೈಕ್ಯತಾ ವೇದಿಕೆಯ ಹಿರಿಯ ರಂಗಕರ್ಮಿ ಪಿ.ಅಬ್ದುಲ್ಲಾ, ಕಮಲಾಪುರದ ಮಾಳಗಿ ರಾಮಸ್ವಾಮಿ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಐಟಿಐ ಕಾಲೇಜಿನ ಪ್ರಾಂಶುಪಾಲ ಅರವಿಂದ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ಧೇಶಕ ಡಾ.ಎಚ್.ಬಾಲರಾಜು, ಚಿಂತಕ ಇಟ್ಟಂಗಿ ರಹಿಮಾನ್ ಸಾಬ್ ಮಾತನಾಡಿದರು. ಉಪನ್ಯಾಸಕ ಒಪ್ಪತ್ತೇಶ್ವರ ಕವನ ವಾಚಿಸಿದರು. ಪುಷ್ಪಾ ಮಲ್ಲಿಕಾರ್ಜುನ ಭಾವಗೀತೆ ಪ್ರಸ್ತುತಪಡಿಸಿದರು. ಗುಂಡಿಮಾರುತಿ, ನವೀನ, ಶ್ರೀಕಾಂತ ಬಂಡಿ, ಸತ್ತಾರ್ ಶಿವನಗೌಡ, ಸೌಭಾಗ್ಯ ಲಕ್ಷ್ಮಿ ಇತರರು ಇದ್ದರು. ಜರಿನಾ ಬೇಗಂ ಸ್ವಾಗತಿಸಿದರು. ಸೋ.ದಾ.ವಿರೂಪಾಕ್ಷಗೌಡ ಪ್ರಾಸ್ತಾವಿಕ ಮಾತನಾಡಿದರು. ಮುದೇನೂರು ಉಮಾಮಹೇಶ್ವರ ವಂದಿಸಿದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ