https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:
ಪ್ರಜಾಪ್ರಭುತ್ವ ಸುಭದ್ರಗೊಳಿಸಲು ಮತದಾನ ಅತ್ಯಂತ ಅವಶ್ಯಕವಾಗಿದ್ದು, ಮೇ 10 ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಮತ್ತು ಜಿಲ್ಲೆಯ ಶೇಕಡವಾರು ಮತದಾನ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರೂ ಭಾಗಿಯಾಗಬೇಕು ಎಂದು ವಿಜಯನಗರ ಜಿಲ್ಲಾಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭುರವರು ಕರೆನೀಡಿದರು.
ವಿಧಾನಸಭೆ ಸಾರ್ವತ್ರಿಕಚುನಾವಣೆ ನಿಮಿತ್ತ ಜಿಲ್ಲಾಡಳಿತ,ಜಿಲ್ಲಾ ಸ್ವೀಪ್ ಸಮಿತಿ ಹಾಗು ನಾರಾಯಣದೇವರಕೆರೆ ಎಸ್.ಎಲ್.ಆರ್.ಮೆಟಾಲಿಕ್ಸ ಕಂಪನಿಯ ಇವರ ಸಂಯುಕ್ತಾಶ್ರಯದಲ್ಲಿ ಎಸ್.ಎಲ್.ಆರ್.ಮೆಟಾಲಿಕ್ಸ ಕಂಪನಿಯ ಆವರಣದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರು ಹೆಚ್ಚು-ಹೆಚ್ಚು ಮತದಾನದಲ್ಲಿ ಪಾಲ್ಗೊಂಡಂತೆ ಪ್ರಜಾಪ್ರಭುತ್ವ ಬಲಿಷ್ಠವಾಗಿದೆ. ಪ್ರಜಾಪ್ರಭುತ್ವಕ್ಕೆ ನೈಜ ಅರ್ಥ ಬರಬೇಕಾದರೆ ಮತದಾರರ ಸಹಭಾಗಿತ್ವ ಅವಶ್ಯ. ಪೂರ್ಣಪ್ರಮಾಣದಲ್ಲಿ ಮತದಾರರು ಮತದಾನ ಮಾಡಿದರೆ ಪ್ರಜಾಪ್ರಭುತ್ವದ ಗೆಲುವು ಎಂದರು.
ಇತ್ತೀಚೆಗೆ ನಗರಪ್ರದೇಶಗಳಲ್ಲಿ ಕಡಿಮೆ ಮತದಾನವಾಗುವುದನ್ನು ತಡೆಯಲು, ಈ ಬಾರಿ ಮತದಾನ ದಿನದಂದು ಬಿಸಿಲಿನ ತಾಪದಿಂದ ಆಗುವ ತೊಂದರೆಯನ್ನು ತಪ್ಪಿಸಲು ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ವಿಶ್ರಮಿಸಲು ವಿಶ್ರಾಂತಿ ಕೊಠಡಿ, ಕುಡಿಯುವ ನೀರಿನ ವ್ಯವಸ್ಥೆ, ವಾಹನಗಳ ನಿಲುಗಡೆಗೆಅವಕಾಶ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಹಾಗೂ ಜಿಲ್ಲೆಯಲ್ಲಿ ಮತಗಟ್ಟೆ ಕೇಂದ್ರಗಳು ಜನರನ್ನು ಆಕರ್ಷಣೆಗೊಳ್ಳುವಂತೆ ಸಿದ್ಧಗೊಂಡಿವೆ ಎಂದು ತಿಳಿಸಿದರು.
ಈ ಬಾರಿ ಹೊಸ ಜಿಲ್ಲೆಯಲ್ಲಿ 10 ಲಕ್ಷ ಮತದಾರರು ಇದ್ದು, ಮತದಾನದ ದಿನ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲಾಗುತ್ತದೆ. ಕಾರ್ಮಿಕರು ಸದುಪಯೋಗಪಡೆಯಲು ತಿಳಿಸಿದ ಅವರು, ಕಳೆದ ಬಾರಿ ಚುನಾವಣೆಯಕ್ಕಿಂತ ಹೆಚ್ಚಾಗಿ ಎಲ್ಲಾ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಯಾರೂ ಮತದಾನದಿಂದ ಹೊರಗುಳಿಯಬಾರದು ಎಂದು ಕರೆನೀಡಿದರು.
ಈ ಸಂಧರ್ಭದಲ್ಲಿ ಹ.ಬೊ.ಹಳ್ಳಿ ತಾ.ಪಂ.ಈ.ಓ.ಪರಮೇಶ್ವರ ಪ್ಪ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಕುಮಾರ್, ಕಂಪನಿಯ ಉಪಾಧ್ಯಕ್ಷ ನವೀನ್, ರಮೇಶ್ ಗೌಡ, ಮಾನವಸಂಪನ್ಮೂಲ ವಿಭಾಗದ ಪುರುಷೋತ್ತಮ, ರಾಘವಾಂಕ, ಮರಬ್ಬಿಹಾಳ ಗ್ರಾ.ಪಂ.ಪಿ.ಡಿ.ಓ.ಹ ನುಮಂತಪ್ಪ ಸೇರಿದಂತೆ ಇತರರಿದ್ದರು.
More Stories
ಕಳಚಿ ಬಿತ್ತು ರಾಷ್ಟ್ರಧ್ವಜ, ಈಬಾರಿ ಬಜೆಟ್ನಲ್ಲಿ ವಿಜಯನಗರ ಜಿಲ್ಲೆಗೆ ಮೆಡಿಕಲ್ ಕಾಲೇಜ್ : ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಭರವಸೆ
ತ್ರಿವಿಧ ದಾಸೋಹದ ದಕ್ಷಿಣ ಭಾರತದ ಕುಂಭಮೇಳ… ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ