February 10, 2025

Hampi times

Kannada News Portal from Vijayanagara

ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ಸಲ್ಲದು: ಭಾಸ್ಕರ ರೆಡ್ಡಿ

 

https://youtu.be/NHc6OMSu0K4?si=SI_K4goOPEgwo6h2

ಸಿಐಟಿಯುನಿಂದ ಮೇ ದಿನಾಚರಣೆ

ಹಂಪಿ ಟೈಮ್ಸ್ ಹೊಸಪೇಟೆ :  

ಕಾರ್ಮಿಕರು 138 ವರ್ಷಗಳ ಹಿಂದೆ ಎಂಟು ಗಂಟೆಗಳ ಕೆಲಸಕ್ಕಾಗಿ ಹೋರಾಟ ಮಾಡಿ ಜಯ ಪಡೆದುದರಿಂದಲೇ ಇಲ್ಲಿಯವರೆಗೆ 8 ಗಂಟೆಗಳ ಕೆಲಸ ಜಾರಿಗೆ ಬಂದಿದೆ, ಆದರೆ ಈಗ ಸರ್ಕಾರ ಈ ಅವಧಿಯನ್ನು 12 ಗಂಟೆಗೆ ವಿಸ್ತರಿಸುವುದಕ್ಕೆ ಮುಂದಾಗಿರುವುದು ಅತ್ಯಂತ ಖಂಡನೀಯ ಎಂದು ಸಿಐಟಿಯು ಜಿಲ್ಲಾ ಮುಖಂಡ ಆರ್ ಭಾಸ್ಕರ್ ರೆಡ್ಡಿ ಹೇಳಿದರು.

ನಗರದ ಶ್ರಮಿಕ ಭವನದಲ್ಲಿ ಸೋಮವಾರ ಕಾರ್ಮಿಕ ದಿನಾಚರಣೆಯಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಿಎಚ್ ಎಸ್ ಸಂಘಟನೆಯ ಮುಖಂಡ ಎಂ ಜಂಬಯ್ಯನಾಯಕ ಮಾತನಾಡಿ, ಕಾರ್ಮಿಕರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವಂತೆ ಕರೆ ನೀಡಿದರು. ವಕೀಲರಾದ ಎ ಕರುಣಾನಿಧಿ ಮಾತನಾಡಿ, ಕಾರ್ಮಿಕರ ಕೇವಲ ಕೂಲಿಯ ಹೋರಾಟ ಪ್ರಭುತ್ವವನ್ನು ಬದಲಿಸುವುದಿಲ್ಲ, ಜೊತೆಗೆ ಕಾರ್ಮಿಕರು ಸಾಮಾಜಿಕವಾಗಿ ಮುಂಚೂಣಿಯಲ್ಲಿ ಹೋರಾಟ ನಡೆಸಿದಾಗ ಮಾತ್ರವೇ ಸಾಮಾಜಿಕವಾಗಿ ಬದಲಾವಣೆ ಸಾಧ್ಯ ಎಂಬುದನ್ನು ಮರೆಯಬಾರದು ಎಂದರು. ಮುಖಂಡರಾದ ಜೆ ಪ್ರಕಾಶ್, ಎಂ ಗೋಪಾಲ್, ರಮೇಶ್, ತಾಯಪ್ಪ ನಾಯಕ, ಎಲ್ಐಸಿ ರಾಜು, ಇತರರು ಭಾಗವಹಿಸಿದ್ದರು. ಯಲ್ಲಾಲಿಂಗ ನಿರ್ವಹಿಸಿದರು.

 

 

ಜಾಹೀರಾತು
error: Content is protected !!