December 8, 2024

Hampi times

Kannada News Portal from Vijayanagara

ಆರ್ಯವೈಶ್ಯ ಸಮುದಾಯದಿಂದ ವಾಸವಿ ದೇವಿಗೆ ಕ್ಷೀರಾಭಿಷೇಕ, ವಿಶೇಷ ಅಲಂಕಾರ

 

https://youtu.be/NHc6OMSu0K4?si=SI_K4goOPEgwo6h2

ವಾಸವಿ ಜಯಂತಿ, ಆರ್ಯವೈಶ್ಯರಿಂದ ಭಕ್ತಿ ಸೇವೆ

ಹಂಪಿ ಟೈಮ್ಸ್ ಮರಿಯಮ್ಮನಹಳ್ಳಿ:

ಆರ್ಯವೈಶ್ಯ ಸಮುದಾಯದ ಕುಲದೇವತೆ ವಾಸವಿ ಜಯಂತಿ ಪಟ್ಟಣದ ನಗರೇಶ್ವರ ದೇವಸ್ಥಾನದಲ್ಲಿ ಆರ್ಯವೈಶ್ಯ ಸಮುದಾಯದಿಂದ ಶ್ರದ್ದಾಭಕ್ತಿಗಳಿಂದ ನಡೆಯಿತು.ಇದರ ಅಂಗವಾಗಿ ಬೆಳಿಗ್ಗೆ ವಾಸವಿದೇವಿಗೆ ಸಮಾಜದಿಂದ ಕ್ಷೀರಾಭಿಷೇಕ ನಂತರ ವಾಸವಿ ಮಹಿಳಾ ಸಮಾಜದಿಂದ ಕಳಸ ತರುವುದು, ಕುಂಕುಮಪೂಜೆ, ಅಮ್ಮನವರಿಗೆ ಉಡಕ್ಕಿ ಹಾಕುವುದು, ನಗರೇಶ್ವರ ಸ್ವಾಮಿಗೆ ಬುತ್ತಿಪೂಜೆ, ಅಭಿಷೇಕ ಸಂಜೆ ದೇವಿಗೆ ತೊಟ್ಟಿಲುಸೇವೆ, ಚಾಮರಸೇವೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು.

ಆರ್ಯವೈಶ್ಯಸಂಘ, ವಾಸವಿಯುವ ಜನ ಸಂಘ, ವಾಸವಿ ಮಹಿಳಾ ಸಮಾಜ, ವಾಸವಿ ವನಿತೆಯರ ಸಂಘ, ವಾಸವಿ ಕನ್ನಿಕೆಯರ ಸಂಘ, ವಾಸವಿ ನವಯುವಕರ ಸಂಘ, ವಾಸವಿ ಕ್ಲಬ್ಬಿನ ಪದಾಧಿಕಾರಿಗಳು ಭಾಗವಹಿಸಿದ್ದರು.

 

 

ಜಾಹೀರಾತು
error: Content is protected !!