December 5, 2024

Hampi times

Kannada News Portal from Vijayanagara

ಕೆಲಸ ಮಾಡಿದವರಿಗೆ ಗೌರವವಿದೆ ಅಭಿವೃದ್ಧಿಯೆ ಗೆಲುವಿಗೆ ಶ್ರೀರಕ್ಷೆ

 

https://youtu.be/NHc6OMSu0K4?si=SI_K4goOPEgwo6h2

ಕೆಲಸ ಮಾಡಿದವರಿಗೆ ಗೌರವವಿದೆ | ಅಭಿವೃದ್ಧಿಯೆ ಗೆಲುವಿಗೆ ಶ್ರೀರಕ್ಷೆ | ಗೀತಾಬಾಯಿ ಭೀಮನಾಯ್ಕ ಖಡಕ್ ನುಡಿ

ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ
ನಾಟಕವಾಡುವ ಜನರ ಬಗ್ಗೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಮಾಜ ಸೇವಕಿ ಗೀತಾಬಾಯಿ ಭೀಮನಾಯ್ಕ ಅಭಿಪ್ರಾಯಪಟ್ಟರು.
ಪಟ್ಟಣದ 14ನೇ ವಾರ್ಡ್ನಲ್ಲಿ ಪುರಸಭೆ ಸಾಮಾಜಿಕ ನ್ಯಾಯ ಸಮಿತಿ ಮಾಜಿ ಅಧ್ಯಕ್ಷ ಯು.ಬಾಬುವಲಿ ನೇತೃತ್ವದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಂಗಳವಾರ ಮಾತನಾಡಿದರು. ಈಗಾಗಲೆ ಕ್ಷೇತ್ರದ 68 ಗ್ರಾಮಗಳಲ್ಲಿ ಮನೆಮನೆಗೂ ತೆರಳಿ ಪ್ರಚಾರ ನಡೆಸಲಾಗಿದೆ. ಪ್ರಚಾರದ ವೇಳೆ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಲವರು ತಮ್ಮ ಗ್ರಾಮಗಳಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿಕೊಳ್ಳುತ್ತಾರೆ. ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವವರಿಗೆ ಗೌರವವಿದೆ. ನಾನು ಯಾರನ್ನೂ ದೂಷಿಸುವುದಿಲ್ಲ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಮಾಲವಿ ಜಲಾಶಯದ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಉಕ್ಕುತ್ತಿದೆ. ಈ ಕ್ಷೇತ್ರದಲ್ಲಿ ಕೆರೆಗಳಿಗೆ ನೀರು ತುಂಬಿಸುವುದು ಸೇರಿ ಕೈಗೂಡಬೇಕಾಗಿರುವ ಹಲವು ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವುದೊಂದೆ ಗುರಿ. ಈ ನಿಟ್ಟಿನಲ್ಲಿ ಜನಾರ್ಶೀವಾದ ಬೇಡಲಾಗುತ್ತಿದ್ದು, ನಿಶ್ಚಿತವಾಗಿಯೂ ಮತ್ತೊಮ್ಮೆ ಕ್ಷೇತ್ರದ ಸೇವೆಗೆ ಭೀಮನಾಯ್ಕ ಅವರಿಗೆ ಅವಕಾಶ ಒದಗಲಿದೆ ಎಂದರು.

 

ಪುರಸಭೆ ಮಾಜಿ ಸದಸ್ಯ ಉಲುವತ್ತಿ ಬಾಬುವಲಿ ಮಾತನಾಡಿ, ಕ್ಷೇತ್ರದ ಜನರಿಗೆ ಶಾಸಕರ ಜನಪರ ಕಾರ್ಯಗಳು ಮನದಟ್ಟಾಗಿವೆ. ಈಗಾಗಲೆ ಕ್ಷೇತ್ರದ ಪ್ರತಿಗ್ರಾಮಗಳಲ್ಲಿ ಜನರೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುತ್ತಾರೆ. ಭೀಮನಾಯ್ಕ ಹ್ಯಾಟ್ರಿಕ್ ವಿಜಯ ಶತಸಿದ್ಧ ಎಂದರು. ಇದೇವೇಳೆ ವಾರ್ಡ್ನ ಪ್ರತಿಮನೆಗಳಿಗೆ ತೆರಳಿದ ಗೀತಾಬಾಯಿ ಭೀಮನಾಯ್ಕ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ 10 ಕೆ.ಜಿ.ಅಕ್ಕಿ, ಉಚಿತ ವಿದ್ಯುತ್, ಮನೆಯೊಡತಿಗೆ 2ಸಾವಿರ ರೂ.ಮಾಸಿಕ ಸೇರಿ ನಾನಾ ಪ್ರಮುಖ ಅಂಶಗಳನ್ನು ಜನರಿಗೆ ಮನವರಿಕೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸಾಹಿರಾಬಾನು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ಯಶೋದಾ ಮಂಜುನಾಥ, ಪುರಸಭೆ ಸದಸ್ಯೆ ಮಂಜುಳಾ, ಮಾಜಿ ಅಧ್ಯಕ್ಷೆ ಕವಿತಾ ಹಾಲ್ದಾಳ್, ಮುಖಂಡರಾದ ಮೆಹಬೂಬ್ ಪಾನ್‌ವಾಲೆ, ಎ.ಪ್ರಕಾಶ್, ಜ್ಯೋತಿ ರಾಜೇಶ್‌ಬ್ಯಾಡಗಿ, ನಾಗವೇಣಿ, ಜರೀನಾ ಇತರರಿದ್ದರು.

 

 

ಜಾಹೀರಾತು
error: Content is protected !!