https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೊಸಪೇಟೆ
ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಬಾಂಧವರು ನಗರದ ವಿವಿಧ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಂಭ್ರಮ ಸಡಗರದಿಂದ ಶುಕ್ರವಾರ ಆಚರಿಸಿದರು.
ನಗರದ ಬಿ.ಆರ್.ಅಂಬೇಡ್ಕರ ವೃತ್ತದ ಬಳಿಯ ಗುಲಾಬ್ ಶಾ ವಲೀ ದರ್ಗಾದ ಈದ್ಗಾ ಮೈದಾನದಲ್ಲಿ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷ ಎಚ್.ಎನ್.ಮಹಮ್ಮದ ಇಮಾಮ್ ನಿಯಾಜಿ ಮಾತನಾಡಿ, ಲೋಕ ಕಲ್ಯಾಣಾರ್ಥವಾಗಿ 30 ದಿನ ಶ್ರದ್ಧಾ ಭಕ್ತಿಯಿಂದ ಉಪಾವಾಸ ಮಾಡಿ ಭಗವಂತನಿಗೆ ಪ್ರಾರ್ಥನೆ ಸಲ್ಲಿಸಿದ್ದೇವೆ. ಸಮಾಜದ ಪ್ರತಿಯೊಬ್ಬರನ್ನೂ ಪ್ರೀತಿ ವಾತ್ಸಲ್ಯ ಸೌಹಾರ್ದತೆಯಿಂದ ಕಾಣಬೇಕು. ಇತರರಿಗೆ ಸದಾ ಒಳ್ಳೆಯದನ್ನೆ ಬಯಸಬೇಕು. ಕೆಟ್ಟ ವಿಚಾರಗಳಿಂದ ದೂರವಿದ್ದು, ದೇಶದ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪ್ರತಿಜ್ಞೆ ಮಾಡಲಾಗಿದೆ. ಅಂಜುಮನ್ ಕಮಿಟಿಯಿಂದ ಹಮ್ಮಿಕೊಂಡಿರುವ ಅನೇಕ ಅಭಿವೃದ್ದಿ ಕಾರ್ಯಕ್ರಮಗಳಿಗೆ ತನು ಮನ ಧನದ ಸಹಕಾರ ಸಹಾಯ ನೀಡಬೇಕು ಎಂದರು.
ನಗರದ ಆರ್‌ಟಿಒ ಆಫೀಸ್ ಈದ್ಗಾ ಮೈದಾನ, ಬಸ್ ಡಿಪೋ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ಟಿಬಿ ಡ್ಯಾಂ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಅಲಂಗಿಸಿಕೊಳ್ಳುವ ಮೂಲಕ ಶುಭಾಶಯ ಕೋರಿದರು.
ಉಪಾಧ್ಯಕ್ಷ ಎಮ್ ಫಿರೋಜ್ ಖಾನ್, ಕಾರ್ಯದರ್ಶಿ ಎಮ್.ಡಿ.ಅಬೂಬಕ್ಕರ್, ಖಜಾಂಚಿ ಜಿ ಅನ್ಸರ್ ಭಾಷ, ಸಹಕಾರ್ಯದರ್ಶಿ ಡಾ.ಎಮ್.ಡಿ.ದುರ್ವೇಶ್ ಮೈನುದ್ದಿನ್ ಹಾಗು ಸದ್ಯಸರಾದ ಕೋತ್ವಾಲ್ ಮೊಹಮ್ಮದ್ ಮೋಸಿನ್, ಅಡ್ವಕೇಟ್ ಸದ್ದಾಮ್ ಮತ್ತು ಎಲ್ ಗುಲಾಮ್ ರಸೂಲ್, ಅಬ್ದುಲ್ ಖಾದರ್, ರಫಾಯಿ ಖದೀರ್ ಹಾಗೂ ಮುಖಂಡರಾದ ಖದೀರ್. ಬಡಾವಲಿ. ವಾಹೀದ್, ನಾಸೀರ್. ಖಾನ್‌ಸಾಬ್. ರಜಾಕ್. ಹಾಗೂ ಸಾವಿರಾರು ಮುಸ್ಲಿಂ ಬಾಂಧವರು ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ