December 5, 2024

Hampi times

Kannada News Portal from Vijayanagara

27 ತಿರಸ್ಕೃತ, 69 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ : ಡಿಸಿ ಟಿ.ವೆಂಕಟೇಶ

 

https://youtu.be/NHc6OMSu0K4?si=SI_K4goOPEgwo6h2

ನಾಮಪತ್ರಗಳ ಪರಿಶೀಲನೆ  69 ಜನ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ
ಹಂಪಿ ಟೈಮ್ಸ್ ಹೊಸಪೇಟೆ :
ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ 106(95 ಪುರುಷರು, 11 ಮಹಿಳಾ ಅಭ್ಯರ್ಥಿಗಳು) ನಾಮಪತ್ರಗಳಲ್ಲಿ 69(62 ಪುರುಷರು, 7 ಮಹಿಳೆಯರು) ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ಅವರು ತಿಳಿಸಿದ್ದಾರೆ.
ಕ್ಷೇತ್ರವಾರು ಕ್ರಮಬದ್ಧವಿರುವ ಅಭ್ಯರ್ಥಿಗಳ ವಿವರ:
88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ:
ಒಟ್ಟು 15 ನಾಮಪತ್ರಗಳ ಪೈಕಿ 9 ನಾಮಪತ್ರಗಳು ಕ್ರಮಬದ್ಧವಾಗಿವೆ.
ಕಾಯಣ್ಣನವರ ಪುತ್ರಪ್ಪ(ಜೆಡಿಎಸ್), ಕೃಷ್ಣನಾಯ್ಕ(ಬಿಜೆಪಿ), ಪಿ.ಟಿ.ಪರಮೇಶ್ವರ ನಾಯ್ಕ(ಕಾಂಗ್ರೆಸ್), ಎನ್.ಶ್ರೀಧರ ನಾಯ್ಕ(ಎಎಪಿ), ಎಲ್.ಅನಿಲ್ ಕುಮಾರ್(ಕೆಆರ್‌ಎಸ್), ಡಿ.ಭೋಜ್ಯಾ ನಾಯ್ಕ(ಕೆಆರ್‌ಪಿಪಿ), ಲಕ್ಕಪ್ಪ ಅಂಗಡಿ(ರಾಣಿ ಚನ್ನಮ್ಮ ಪಕ್ಷ), ಎಸ್.ಮಲ್ಲೇಶ್ ನಾಯ್ಕ(ಸ್ವತಂತ್ರ) ಹಾಗೂ ಕೆ.ಉಚ್ಚಂಗೆಪ್ಪ).
89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ:
ಒಟ್ಟು 25 ನಾಮಪತ್ರಗಳ ಪೈಕಿ 16(14 ಪುರುಷರು, 2 ಮಹಿಳೆಯರು) ನಾಮಪತ್ರಗಳು ಕ್ರಮಬದ್ಧವಾಗಿವೆ.
ಡಾ.ವಿ.ಹೆಚ್.ಹನುಮಂತಪ್ಪ(ಎಎಪಿ), ಎಲ್.ಬಿ.ಪಿ.ಭೀಮಾನಾಯ್ಕ(ಕಾಂಗ್ರೆಸ್), ನೇಮಿರಾಜ ನಾಯ್ಕ(ಜೆಡಿಎಸ್), ಹೆಚ್.ತಿಪ್ಪೇಸ್ವಾಮಿ(ಬಿಎಸ್‌ಪಿ), ಬ್ಯಾಲಹುಣ್ಸಿ ರಾಮಣ್ಣ(ಬಿಜೆಪಿ), ಡಿ.ಲಾಲ್ಯನಾಯ್ಕ(ಇಂಡಿಯನ್ ಮೂವ್‌ಮೆಂಟ್ ಪಾರ್ಟಿ), ಹೆಚ್.ವಿ.ಸಂತೋಷ್ ಕುಮಾರ್(ಕೆಆರ್‌ಎಸ್), ಹನಸಿ ಶಿವಮೂರ್ತಿ(ಕೆಆರ್‌ಪಿಪಿ), ಸುಗುಣ ಕೆ.(ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ), ಆದರ್ಶ ಎಲ್.(ಸ್ವತಂತ್ರ), ಪರಮೇಶ್ವರಪ್ಪ ಎಲ್.(ಸ್ವತಂತ್ರ), ಗೀತಾ ಬಿ.(ಸ್ವತಂತ್ರ), ಡಾ.ಎ.ಎಂ.ಎ.ಸುರೇಶ್ ಕುಮಾರ್(ಸ್ವತಂತ್ರ), ಹೆಚ್.ಮಂಜುನಾಥ್ ನಾಯ್ಕ(ಸ್ವತಂತ್ರ), ವಿಜಯನಾಯ್ಕ(ಸ್ವತಂತ್ರ), ಜೆ.ಅಂಜಿನಪ್ಪ(ಸ್ವತAತ್ರ).
90-ವಿಜಯನಗರ ವಿಧಾನಸಭಾ ಕ್ಷೇತ್ರ:
ಒಟ್ಟು 25 ನಾಮಪತ್ರಗಳ ಪೈಕಿ 16 ನಾಮಪತ್ರಗಳು ಕ್ರಮಬದ್ಧವಾಗಿವೆ.
ಹೆಚ್.ಆರ್.ಗವಿಯಪ್ಪ(ಕಾಂಗ್ರೆಸ್), ಸಿದ್ಧಾರ್ಥ್ ಸಿಂಗ್ ಎ. ಠಾಕೂರ್(ಬಿಜೆಪಿ), ದಾಸರ ಶಂಕರ್(ಎಎಪಿ), ಕಲ್ಲೇಶಿ ಕೆ.ಎಸ್.(ಪ್ರಜಾಕೀಯ), ಕೆ.ಮಂಜುನಾಥ(ಕೆಆರ್‌ಎಸ್), ಎ.ವಿಜಯಕುಮಾರ್(ಕೆಆರ್‌ಪಿಪಿ), ಕುರುಬರ ಹಾಲಪ್ಪ(ಸ್ವತಂತ್ರ), ಉಮೇಶ್ ಕೆ.(ಸ್ವತಂತ್ರ), ಶಿವನಂದನ್(ಸ್ವತAತ್ರ), ಕಾರ್ತಿಕ್ ಆರ್.ಎಸ್. (ಸ್ವತಂತ್ರ), ಎಸ್.ಕೆ.ಚೌಡಪ್ಪ(ಸ್ವತಂತ್ರ), ಪ.ಯ.ಗಣೇಶ್(ಸ್ವತಂತ್ರ) ಹಾಗೂ ಹೆಚ್.ಜಿ.ವಿರೂಪಾಕ್ಷ(ಸ್ವತಂತ್ರ).
96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರ:
ಒಟ್ಟು 14 ನಾಮಪತ್ರಗಳ ಪೈಕಿ 12(11 ಪುರುಷರು, 1 ಮಹಿಳೆ) ನಾಮಪತ್ರಗಳು ಕ್ರಮಬದ್ಧವಾಗಿವೆ.
ಶ್ರೀನಿವಾಸ ಎನ್.ಟಿ.(ಕಾಂಗ್ರೆಸ್), ಶ್ರೀನಿವಾಸ ಎನ್(ಎಎಪಿ), ಲೋಕೇಶ ವಿ. ನಾಯಕ(ಬಿಜೆಪಿ), ಪೂಜಾರ್ ಭೀಮಪ್ಪ(ಜೆಡಿಎಸ್), ಹೆಚ್.ವೀರಣ್ಣ(ಸಿಪಿಐ), ಶರಣೇಶ ಎಂ.(ಪ್ರಜಾಕೀಯ), ಚಿತ್ತರ ಚನ್ನವೀರ(ಕೆಆರ್‌ಎಸ್), ಕೆ.ನಕುಲಪ್ಪ(ಸ್ವತಂತ್ರ), ರಾಘವೇಂದ್ರ ಗುರಿಕಾರ್(ಸ್ವತಂತ್ರ), ಬಂಗಾರಿ ಹನುಮಂತ(ಸ್ವತAತ್ರ), ಬಿ.ಹುಲಿಕುಂಟೆಪ್ಪ(ಸ್ವತAತ್ರ) ಹಾಗೂ ಕೆ.ಲಲಿತಾ(ಸ್ವತಂತ್ರ).
104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರ:
ಒಟ್ಟು 27 ನಾಮಪತ್ರಗಳ ಪೈಕಿ 19(15 ಪುರುಷರು, 4 ಮಹಿಳೆಯರು) ನಾಮಪತ್ರಗಳು ಕ್ರಮಬದ್ಧವಾಗಿವೆ.
ಜಿ.ಕರುಣಾಕರ ರೆಡ್ಡಿ(ಬಿಜೆಪಿ), ಎನ್.ಎಂ.ನೂರ್ ಅಹಮ್ಮದ್(ಜೆಡಿಎಸ್), ಎನ್. ಕೊಟ್ರೇಶಿ(ಕಾಂಗ್ರೆಸ್), ನಾಗರಾಜ ಹೆಚ್.(ಎಎಪಿ), ಈಡಿಗರ ಕರಿಬಸಪ್ಪ(ಕೆಆರ್‌ಎಸ್), ರವಿ ಲಂಬಾಣಿ(ಪ್ರಜಾಕೀಯ), ಜಯಣ್ಣ ಕೆ.(ಕರ್ನಾಟಕ ಮಕ್ಕಳ ಪಕ್ಷ), ಸುಮಂತ ಕುಮಾರ್ ಆರ್.ಎಸ್.(ಸ್ವತಂತ್ರ), ಎಂ.ಪಿ.ವೀಣಾ ಮಹಾಂತೇಶ್(ಸ್ವತAತ್ರ), ಬೇಲ್ದಾರ್ ಬಾಷಾಸಾಬ್(ಸ್ವತಂತ್ರ), ಲತಾ ಮಲ್ಲಿಕಾರ್ಜುನ(ಸ್ವತಂತ್ರ), ಎ.ಟಿ.ದಾದ ಖಲಂದರ್(ಸ್ವತAತ್ರ), ರವಿ ನಾಯ್ಕ ಬಿ.(ಸ್ವತಂತ್ರ), ಬಿ.ಆರ್.ಕೃಷ್ಣ ನಾಯ್ಕ(ಸ್ವತಂತ್ರ), ಪ್ರಭಾಕರ್ ಎಸ್.(ಸ್ವತಂತ್ರ), ಜಿ.ಕಲಿವೀರಗೌಡ(ಸ್ವತಂತ್ರ), ಲತಾ(ಸ್ವತಂತ್ರ), ಸಂಗವ್ವ ಕೆ. ಉತ್ತಂಗಿ(ಸ್ವತAತ್ರ) ಹಾಗೂ ಬಿ.ಎಂ.ಗುರುಮೂರ್ತಿ(ಸ್ವತAತ್ರ).
ತಿರಸ್ಕೃತ ನಾಮಪತ್ರಗಳು(ಒಟ್ಟು 27):
ಹಡಗಲಿ 2
ಹಗರಿಬೊಮ್ಮನಹಳ್ಳಿ 6
ಹೊಸಪೇಟೆ 9
ಕೂಡ್ಲಿಗಿ 2
ಹರಪನಹಳ್ಳಿ 8

 

 

ಜಾಹೀರಾತು
error: Content is protected !!