December 14, 2024

Hampi times

Kannada News Portal from Vijayanagara

ಬಿಜೆಪಿಗೆ ಗುಡ್‌ಬೈ! ಬೆಂಬಲಿಗರ ನಿರ್ಧಾರದಂತೆ ಸ್ಪರ್ಧೆ ಖಚಿತ : ನೇಮಿರಾಜ ನಾಯ್ಕ

 

https://youtu.be/NHc6OMSu0K4?si=SI_K4goOPEgwo6h2

ದಂಪತಿಯ ಕಣ್ಣೀರಿಗೆ ಬೆಂಬಲಿಗರ ಭರವಸೆ

ಪತಿಯ ಭವಿಷ್ಯಕ್ಕೆ ಸೆರಗೊಡ್ಡಿ ಮತಯಾಚಿಸಿದ ವೀಣಾ ನೇಮಿರಾಜ್‌ನಾಯ್ಕ್
ಮಾಜಿ ಶಾಸಕಕ ನೇಮಿರಾಜ್‌ನಾಯ್ಕ್ ನಿವಾಸದ ಮುಂದೆ ಕಾರ್ಯಕರ್ತರ ಸಭೆ

ಹಂಪಿ ಟೈಮ್ಸ್  ಹಗರಿಬೊಮ್ಮನಹಳ್ಳಿ:
ಬಿಜೆಪಿ ಟಿಕೆಟ್ ವಂಚಿತ ನೇಮಿರಾಜ ನಾಯ್ಕ್ ಮತ್ತು ಅವರ ಪತ್ನಿ ವೀಣಾ ನೇಮಿರಾಜ್ ನಾಯ್ಕ್ ಮಂಗಳವಾರ ಬೆಂಬಲಿಗರ ಎದುರು ಗಳಗಳನೆ ಕಣ್ಣೀರಿಟ್ಟರು. ಭರವಸೆ ನೀಡಿದಂತೆ ಬಿಜೆಪಿ ನಡೆದುಕೊಂಡಿಲ್ಲ. ನೇಮಿರಾಜನಾಯ್ಕನಿಗೆ ಮಾತ್ರ ಮೋಸವಾಗಿಲ್ಲ ನಿಷ್ಠಾವಂತ ಕಾರ್ಯಕರ್ತರಿಗೂ ಮೊಸವಾಗಿದೆ. ಹಾಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಬೆಂಬಲಿಗರ ತೀರ್ಮಾನದಂತೆ ಮುಂದಿನ ಹೆಜ್ಜೆ ಇಡುವೆ ಎಂದು ಚುನಾವಣಾ ಸ್ಪರ್ಧಾಕಾಂಕ್ಷಿ ನೇಮಿರಾಜ ನಾಯ್ಕ ಹೇಳಿದರು.

ಮೊದಲರೆಡರ ಪಟ್ಟಿಯಲ್ಲಿ ಟಿಕೇಟ್ ಘೋಷಣೆಯಾಗದಿದ್ದರೂ ಮೂರನೆ ಪಟ್ಟಿಯಲ್ಲಿ ಮಾಜಿ ಶಾಸಕ ನೇಮಿರಾಜ ನಾಯ್ಕರ ಹೆಸರು ಘೋಷಣೆಯಾಗುತ್ತದೆಂದು ಸಮಾಧಾನದಿಂದ ಕಾದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದ್ದರಿಂದ, ಮುಖಂಡರು ಮತ್ತು ಕಾರ್ಯಕರ್ತರು ನೇಮಿರಾಜ್‌ನಾಯ್ಕ್ ಮನೆಮುಂದೆ ಸಭೆ ಸೇರಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಗೆ ನಿರೀಕ್ಷೆಗೂ ಮೀರಿ ಜನಸ್ತೋಮ ನೆರೆದಿತ್ತು.  ನೇಮಿರಾಜ ನಾಯ್ಕ ಅವರ ಪತ್ನಿ ವೀಣಾ ನೇಮಿರಾಜನಾಯ್ಕ ಅವರು ಸೆರಗೊಡ್ಡಿ ಕಣ್ಣೀರಿನೊಂದಿಗೆ ಮತಯಾಚಿಸಿದರು. 2023ರ ಚುನಾವಣೆ ಕಣದಲ್ಲಿ ಸ್ಪರ್ಧಿಸಲೇಬೇಕು. ಎದುರಾಳಿ ಯಾರೂ ಇಲ್ಲ ಎಂದು ಬೀಗುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದ ಬೆಂಬಲಿಗರು ನಿಮ್ಮ ಗೆಲುವಿಗೆ ಕಂಕಣಬದ್ಧರಾಗಿ ನಾವು ನಿಲ್ಲುತ್ತೇವೆ ಎಂದು ಭರವಸೆ ತುಂಬಿದರು.

ಮುಖಂಡರಾದ ಪುರಸಭೆ ಗಂಗಾಧರ, ಜನ್ನುನಾಗರಾಜ್, ದೀಪಕ್ ಕಠಾರೆ, ಶೇಖರಪ್ಪ ಹೊಳಗುಂದಿ, ಕೋಗಳಿ ಸಿದ್ದಲಿಂಗನಗೌಡ್ರು, ಭದ್ರವಾಡಿ ಚಂದ್ರಶೇಖರ್, ಪಿ.ರಾಜಲಿಂಗಪ್ಪ, ಭರಮರೆಡ್ಡಿ, ಬಾದಾಮಿ ಮೃತ್ಯುಂಜಯ, ಜೆ.ಎಂ.ಜಗದೀಶ್, ಬ್ಯಾಟಿ ನಾಗರಾಜ್, ಅಂಬಣ್ಣ, ಸರ್ದಾರ್ ಯಮನೂರಪ್ಪ, ಜ್ಯೋತಿ ರಾಜರಾವ್, ಮಂಜುಳಾ, ನಿರ್ಮಲಾ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.

ನಿಷ್ಠಾವಂತ ಕಾರ್ಯಕರ್ತರ ನಿರೀಕ್ಷೆಗಳು ಹುಸಿಯಾಗಿವೆ. ಹಾಗಾಗಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೇ ನೀಡಿದ್ದೇನೆ. ಬೆಂಬಲಿಗರ ತೀರ್ಮಾನದಂತೆ ಏ.20 ರಂದು ನಾಮಪತ್ರ ಸಲ್ಲಿಸುವೆ.
• ನೇಮಿರಾಜ್‌ನಾಯ್ಕ್

ಕ್ಷೇತ್ರದಾದ್ಯಂತ ಬಿಜೆಪಿ ಉಳಿಸಿ, ಬೆಳಸಿದ್ದರೂ ಟಿಕೇಟ್ ನೀಡದೆ ವಂಚಿಸಿದ್ದಾರೆ. ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದ ನಿಷ್ಠಾವಂತರಿಗೆ ಕಿಂಚಿತ್ತು ಬೆಲೆ ಇಲ್ಲದಂತಾಗಿದೆ. ಪಕ್ಷ ನಮ್ಮೊಂದಿಗೆ ಇಲ್ಲದಿದ್ದರೂ ಬೆಂಬಲಿಗರಿದ್ದೀರಿ, ಬೆಂಬಲಿಗರ ಆಶೀರ್ವಾದವೆ ನಮಗೆ ಶ್ರೀರಕ್ಷೆಯಾಗಲಿ.
• ವೀಣಾ ನೇಮಿರಾಜ್ ನಾಯ್ಕ

 

 

ಜಾಹೀರಾತು
error: Content is protected !!