https://youtu.be/NHc6OMSu0K4?si=SI_K4goOPEgwo6h2
ಆನಂದಸಿಂಗ್ ಎದುರಿಗೆ ಕಂಡ್ರೆ ಎದೆಬಡಿತ ಹೆಚ್ಚುತ್ತೆ ಎಂದ ಸಿಎಂ ಬೊಮ್ಮಾಯಿ
ಹಂಪಿ ಟೈಮ್ಸ್ ಹೊಸಪೇಟೆ:
ನಮ್ಮೆದುರಿಗೆ ಆನಂದಸಿಂಗ್ ಬಂದ್ರೆ ನಮ್ಮ ಹಾರ್ಟ್ ಬಡಿತನೂ ಹೆಚ್ಚುತದ. ಸಿಂಗ್ ಏಕ್ ಮಿನಿಟ್ ಅಂತ ಚಿವುಟಿದ್ರೆ ಏನಾವೊಂದು ಐತಿ ಅನ್ಕಬೇಕು ನಾವು, ಇತ್ತೀಚಿಗೆ ನನ್ನನ್ನು ಭೇಟಿಯಾದ ಸಿಂಗ್ ನನಗೆ ಪವರ್ ಪೊಲೀಟಿಕ್ಸ್ ಬೇಕಿಲ್ಲ. ಪೀಪಲ್ ಪೊಲಿಟಿಕ್ಸ್ ಮಾಡ್ತೀನಿ ಅಂದು ಪುತ್ರನಿಗೆ ಟಿಕೆಟ್ ಬೇಕು ಅಂದ್ರು ಎಂದೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಯಿ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು.
ನಗರಸ ಸಿದ್ದಾರ್ಥ ಹೋಟೆಲ್ ಆವರಣದಲ್ಲಿ ಜರುಗಿದ ಸಮಾನ ಮನಸ್ಕರ ಸಮಾಲೋಚನಾ ಸಭೆಯಲ್ಲಿ ಭಾನುವಾರ ಮಾತನಾಡಿದರು. ಆನಂದಸಿಂಗ್ ದೊಡ್ಡ ಗುಡ್ಡಕ್ಕೆ ಹಗ್ಗ ಕಟ್ತಾರೆ, ಅಸಾಧ್ಯ ಅನ್ನುವುದನ್ನೆ ಸಾಧ್ಯವಾಗಿಸುವ ಛಲ ಇರೋದು ಆನಂದಸಿಂಗ್‌ನಲ್ಲಿ ಕಾಣ್ತೇವೆ. 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಿಲ್ಲೆಯ ಕನಸು ಸಾಕಾರಕ್ಕಾಗಿಯೇ ಕೈಪಕ್ಷದ ಮೇಲೆ ಆಸೆ ಇಟ್ಟು ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಸೇರಿದ್ದರು. ಆದ್ರೆ ಕಾಂಗ್ರೆಸ್ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರ‍್ಲಿಲ್ಲ. ಸಮ್ಮಿಶ್ರ ಸರ್ಕಾರವಾಯಿತು. ಒಂದು ವರ್ಷ ಕಾದು ನೋಡಿ, ಜಿಲ್ಲೆಯ ಕನಸು ಬಿಜೆಪಿಯಲ್ಲಿ ಮಾತ್ರ ಸಾಧ್ಯವೆಂದು ಅರಿತ ಆನಂದಸಿಂಗ್ ನನ್ನನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡ್ತಿನಿ, ಬಿಜೆಪಿ ಅಧಿಕಾರಕ್ಕೆ ತರ‍್ತಿನಿ, ಜಿಲ್ಲೆಯನ್ನು ಮಾಡ್ತೀನಿ ಅಂದ್ರು, ರಾತ್ರಿ ಕೇಳಿದ ಈ ಮಾತಿಗೆ ನನ್ನ ತಲೆಕೆಟ್ಟೋಯ್ತು. ನನಗೆ ನಂಬಲಿಕ್ಕಾಗಲಿಲ್ಲ. ನಾನು ಯಾರ ಮಾತು ಕೇಳಲ್ಲ. ನಾನು ನಿರ್ಧರಿಸಿದ್ದೇನೆಂದು ಹೇಳಿದರು. ಬೆಳ್ಳಂಬೆಳಗ್ಗೆ ಸ್ಪೀಕರ್‌ಗೆ ರಾಜೀನಾಮೆ ನೀಡಿದರು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿಕೊಳ್ಳಲು ಸರ್ಕಾರವನ್ನೇ ಬದಲಿ ಮಾಡಿದರು ಸಿಂಗ್.
ಬಿಜೆಪಿ ಸರ್ಕಾರ ಬಂದನಂತರವೂ ಅಧಿಕಾರಿಗಳಿಂದ ತಡವಾಗುತ್ತಿದ್ದ ಕಾರ್ಯವನ್ನು ಬಿ.ಎಸ್.ವೈ ಅವರ ಆಶೀರ್ವಾದದಿಂದ ಜಿಲ್ಲೆ ರಚನೆ ಕಾರ್ಯವನ್ನೂ ಪೂರೈಸಿಕೊಂಡರು. ಅದಕ್ಕೆ ನಾನೇ ಸಹಿ ಮಾಡಿದ್ನಾ ಎಂದು ಸಿಂಗ್ ಅವರನ್ನು ಸಿಎಂ ಪ್ರಶ್ನಿಸಿದರು. ಜಿಲ್ಲೆ ರಚನೆ ಸಹಿಗಾಗಿ ಫೈಲ್‌ನ್ನೆ ಬಗಲಲ್ಲಿಟ್ಟುಕೊಂಡು ಓಡಾಡಿ ಸಹಿ ಮಾಡಿಸಿಕೊಂಡರು. ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಪ್ರದೇಶದಲ್ಲಿ ನಿರ್ಮಾಣಕ್ಕಾಗಿ ಹೌಸಿಂಗ್ ಬೊರ್ಡ್ನ 83 ಎಕರೆ ಸ್ಥಳ ನೀಡುವಂತೆ ಮನವೊಲಿಸಿದರು. ಅದರ ಪ್ರಯತ್ನವಾಗಿ ಇಂದು ಎಲ್ಲಾ ಕಚೇರಿಗಳು ಒಂದೆಡೆ ನಿರ್ಮಾಣವಾಗುತ್ತಿವೆ.
ನಾವು ಇಷ್ಟು ವರ್ಷ ರಾಜಕಾರಣ ಮಾಡಿದ್ವಿ, ಆನಂದಸಿಂಗ್ ತರ ದೊಡ್ಡ ಕಂಬ ನೆಡಲಿಕ್ಕಾಗಲಿಲ್ಲವೆಂದ ಸಿಎಂ ಮತ್ತೊಮ್ಮ ಹಾಸ್ಯ ಚಟಾಕಿ ಬಿಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಸೇರಿದಂತೆ ಪ್ರವಾಸೋಧ್ಯಮದಲ್ಲಿ ಹಂಪಿ ಸರ್ಕಿಟ್ ಹೌಸ್ ಜಾರಿಗೆ ತಂದು ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಯುವ ನಾಯಕ ಸಿದ್ದಾರ್ಥಸಿಂಗ್‌ಗೆ ಉತ್ತಮ ಭವಿಷ್ಯವಿದೆ. ಆನಂದಸಿಂಗ್ ಅವರ ಬಾಕಿ ಉಳಿದ ಕೆಲಸಗಳನ್ನು ಸಿದ್ದಾರ್ಥಸಿಂಗ್ ಮಾಡುವ ವಿಶ್ವಾಸವಿದೆ.
ವಿರೋಧ ಪಕ್ಷದ ಬಗ್ಗೆ ನಾನು ಏನೂ ಮಾತಾಡಲ್ಲ. ಆದ್ರೂ ಕಮಲ ಅಭ್ಯರ್ಥಿಯ ಫೋಟೊ ಮತ್ತು ಕೈ ಅಭ್ಯರ್ಥಿಯ ಪೋಟೋಗಳನ್ನು ಒಮ್ಮೆ ನೋಡಿ ಕಣ್ಮುಚ್ಚಿ ಯೋಚನೆ ಮಾಡಿ ಕಣ್ತೆರೆದರೆ ಸಾಕು ನೀವೇ ನಿರ್ಧರಿಸುತ್ತೀರಿ ಎಂದರು. ಯುವಸೇವಕ ಸಿದ್ದಾರ್ಥಸಿಂಗ್‌ಗೆ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿ ಇದೆ. ವಿಜಯನಗರ ಕ್ಷೇತ್ರದ ಜನರು ಪ್ರಜ್ಞಾವಂತರು, ಯಾರಿಗೂ ನೋವಾಗದಂತೆ ಜನರ ವಿಶ್ವಾಸ ಗೆಲ್ಲಬೇಕು ಎಂದು ಅಭ್ಯರ್ಥಿಗೆ ಸಲಹೆ ನೀಡಿ, ಮಿಷನ್ 1 ಲಕ್ಷ ಗುರಿ ತಲುಪು ಎಂದರು.
ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಂಡಲ ಅಧ್ಯಕ್ಷ ಕಾಸಟ್ಟಿ ಉಮಾಪತಿ, ಅಭ್ಯರ್ಥಿ ಸಿದ್ದಾರ್ಥಸಿಂಗ್ ಉಪಸ್ಥಿತರಿದ್ದರು. ವಿವಿಧ ಸಮುದಾಯಗಳ ಮುಖಂಡರು ಇದ್ದರು.
More Stories
ನರೇಗಾ ಕೂಲಿ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
ಪ್ಯಾನೆಲ್ ವಕೀಲರ ನೇಮಕಾತಿಗಾಗಿ ಅರ್ಜಿ ಆಹ್ವಾನ
ಗುಡೇಕೋಟೆ ನಾಗರಾಜ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ