November 7, 2024

Hampi times

Kannada News Portal from Vijayanagara

ಬಿಜೆಪಿಗೆ ಜನಬಲವಿಲ್ಲ ಹಣಬಲವಿದೆ, ಹಣ ಬಲಕ್ಕಿಂತ ಜನಬಲ ದೊಡ್ಡದು : ರಾಜಶೇಖರ ಹಿಟ್ನಾಳ್

 

https://youtu.be/NHc6OMSu0K4?si=SI_K4goOPEgwo6h2

 

 

ಏ.17ರಂದು ಎಚ್.ಆರ್.ಗವಿಯಪ್ಪ ನಾಮಪತ್ರ ಸಲ್ಲಿಕೆ

ಹಂಪಿ ಟೈಮ್ಸ್ ಹೊಸಪೇಟೆ:

ಏ.17ರಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ನಾಮ ಪತ್ರ ಸಲ್ಲಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು ಕಾರ್ಯಕರ್ತರು ಭಾಗವಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಜಶೇಖರ ಹಿಟ್ನಾಳ್ ಮನವಿ ಮಾಡಿದರು.

ನಗರದಲ್ಲಿ ಭಾನುವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಜನಬಲವಿದೆ. ಜನರು ಕಾಂಗ್ರೆಸ್ ಪರ ಇದ್ದಾರೆ. ಬಿಜೆಪಿ ಆಡಳಿತಕ್ಕೆ ಬೇಸತ್ತಿರುವ ಜನ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಲು ಬಯಸಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಜನಬಲ ವರ್ಸಸ್ ಹಣಬಲ ಎನ್ನುವಂತಿದೆ. ಬಿಜೆಪಿಗೆ ಜನಬಲವಿಲ್ಲ ಹಣವಿದೆ. ಪ್ರತಿ ಓಟು ಖರೀದಿಸಲು ಯತ್ನಿಸುತ್ತಿದ್ದಾರೆ.  ಆದ್ರೆ ಜನ ಕಾಂಗ್ರೆಸ್‌ನ್ನು ಬಯಸುತ್ತಿದ್ದಾರೆ. ಎಲ್ಲರು ಪ್ರಯತ್ನಪಟ್ಟರೆ ಶೇ.100ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಉದ್ಯೋಗದ ಭರವಸೆಯ ಬದಲು ಹಣದ ಆಮೀಷ ತೋರಿಸಿ ಜನರನ್ನು ಸೆಳೆಯುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ, ಮುಖಂಡರಾದ ರಾಮನಗೌಡ, ಕುರಿಶಿವಮೂರ್ತಿ ಇತರರು ಇದ್ದರು.

 

 

ಜಾಹೀರಾತು
error: Content is protected !!